Advertisement

Theerthahalli: ಕೋಮನೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ; 10 ಸಾವಿರಕ್ಕೂ ಹೆಚ್ಚಿನ ವ್ಯಾಪಾರ

02:53 PM Jan 30, 2024 | Kavyashree |

ತೀರ್ಥಹಳ್ಳಿ: ಮಕ್ಕಳಲ್ಲಿ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವುದರ ಜೊತೆಗೆ ಗಣಿತದ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಮಕ್ಕಳ ಸಂತೆ ನಡೆಸುವಂತೆ ಯೋಜನೆ ರೂಪಿಸಿ ಆದೇಶ ನೀಡಿತ್ತು.

Advertisement

ಈ ಹಿನ್ನೆಲೆಯಲ್ಲಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮನೆ ಸ.ಕಿ.ಪ್ರಾ. ಶಾಲಾ ಆವರಣದಲ್ಲಿ ಮಕ್ಕಳ ಸಂತೆಯನ್ನು ಸಂಯೋಜಿಸಲಾಗಿತ್ತು.

ಸಂತೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬೆಳೆದು ತಂದಿದ್ದ ತಾಜಾ ತರಕಾರಿಗಳನ್ನು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡು ಬಂದಿತು.

ಪೋಷಕರು, ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು.

13 ಸಂಖ್ಯೆಯ ಮಕ್ಕಳಿಗೆ ಜ್ಞಾನಾರ್ಜನೆ ನೀಡುತ್ತಿರುವ ಗ್ರಾಮೀಣ ಭಾಗದ ಕೋಮನೆ ಶಾಲೆಯಲ್ಲಿ ಎಲ್ಲಾ ಮಕ್ಕಳು ಬ್ಯಾಗ್, ಪುಸ್ತಕ, ಪೆನ್, ಓದು ಒಂದು ದಿನ ಬದಿಗಿಟ್ಟು ವಿವಿಧ ವಸ್ತುಗಳನ್ನು ಶಾಲೆಗೆ ತಂದು ಮಾರಾಟ ಮಾಡುವಲ್ಲಿ ಖುಷಿಪಟ್ಟರು.

Advertisement

ತರಕಾರಿ, ಸೊಪ್ಪು, ಎಳನೀರು, ಹಣ್ಣುಗಳು, ಹಲಸಿನ ಮಿಡಿ, ಕಬ್ಬು, ಲೇಖನ ಸಾಮಗ್ರಿಗಳು, ದಿನಸಿ ವಸ್ತು, ಸ್ವಚ್ಛ ಹಾಗೂ ಪರಿಶುದ್ಧ ತಿಂಡಿ-ತಿನಿಸುಗಳು, ಆಟಿಕೆ ವಸ್ತುಗಳು, ತಂಪು ಪಾನೀಯ, ತೆಂಗಿನ ಕಾಯಿ, ಮೊಟ್ಟೆ ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ತಂದು ಅವುಗಳ ಪ್ರಚಾರ ಮಾಡುತ್ತಾ ಬಿರುಸಿನ ವ್ಯಾಪಾರದ ಅನುಭವ ಪಡೆದರು.

ಪ್ರತಿ ಮಗು 800 ರಿಂದ 1600 ರೂ.ಗಳಿಗೂ ಅಧಿಕ ವ್ಯವಹಾರ ನಡೆಸಿ  ಖುಷಿಪಟ್ಟರು.  ಶಾಲೆ ಆವರಣದಲ್ಲೇ ನಡೆದ ಸಂತೆಯಲ್ಲಿ 10 ಸಾವಿರ ರೂ.ಗಳಿಗೂ ಅಧಿಕ ವ್ಯವಹಾರವನ್ನು ಮಕ್ಕಳು ನಡೆಸಿದರು.

ವಿದ್ಯಾರ್ಥಿಗಳು ಸಂತೆ ಮೇಳದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಗಮನಾರ್ಹವಾಗಿತ್ತು.ಇದನ್ನು ಗಮನಿಸಿದ ಪೋಷಕರು, ಗ್ರಾಮಸ್ಥರು, ಸಂತೆ ಮೇಳದಲ್ಲಿ ಖರೀದಿಗೆ ಬಂದ ಸಾರ್ವಜನಿಕರು ಮಕ್ಕಳ ಉತ್ತಮ ಬೆಳವಣಿಗೆ ನೋಡಿ ಪ್ರಶಂಸೆ ವ್ಯಕ್ತಪಡಿಸಿದರು.

ಅನೇಕ ಪೋಷಕರು ಈ ಚಟುವಟಿಕೆಗೆ ಪೂರಕವಾಗಿ ಸಹಕರಿಸಿದ್ದು ಕಂಡುಬoದಿತು.

Advertisement

Udayavani is now on Telegram. Click here to join our channel and stay updated with the latest news.

Next