Advertisement

ಇಟಲಿಯಲ್ಲಿ ಬಂಡೆಗೆ ಢಿಕ್ಕಿ ಹೊಡೆದ ವಲಸಿಗರ ಹಡಗು: 43 ಮಂದಿ ಮೃತ್ಯು, 80 ಮಂದಿ ರಕ್ಷಣೆ

06:44 PM Feb 26, 2023 | Team Udayavani |

ಇಟಲಿ: ಭಾನುವಾರ ಮುಂಜಾನೆ ದಕ್ಷಿಣ ಇಟಲಿಯ ಕರಾವಳಿಯ ಬಳಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಕಲ್ಲುಗಳ ಮೇಲೆ ಅಪ್ಪಳಿಸಿದ ಪರಿಣಾಮ ನಲವತ್ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು 80 ಜನರು ಬದುಕುಳಿದರು ಎಂದು ಇಟಾಲಿಯನ್ ಕರಾವಳಿ ಸಿಬ್ಬಂದಿ ಮತ್ತು ಪೊಲೀಸರು ತಿಳಿಸಿದ್ದಾರೆ.

Advertisement

ಇಟಲಿಯ ಕ್ಯಾಲಬ್ರಿಯಾದ ಪೂರ್ವ ಕರಾವಳಿಯಲ್ಲಿರುವ ಕಡಲತೀರದ ರೆಸಾರ್ಟ್‌ನ ಸ್ಟೆಕಾಟೊ ಡಿ ಕಟ್ರೊ ಬಳಿ ಹಡಗು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಬಂಡೆಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿ ಸುಮಾರು 120ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದ್ದು ಅವಘಡ ಸಂಭವಿಸಿದ ವೇಳೆ ಸುಮಾರು 80 ಮಂದಿ ಈಜಿ ದಡ ಸೇರಿದ್ದಾರೆ ಎನ್ನಲಾಗಿದ್ದು 43 ಮಂದಿಯ ಮೃತ ದೇಹಗಳು ಕರಾವಳಿ ಕಡಲ ತೀರದಲ್ಲಿ ತೇಲುತ್ತಿತ್ತು ಎನ್ನಲಾಗಿದ್ದು ರಕ್ಷಣಾ ತಂಡ ಮೃತ ದೇಹಗಳನ್ನು ನೀರಿನಿಂದ ಮೇಲೆತ್ತಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು ಜೆಟ್ ಸ್ಕಿಸ್‌ ಬಳಸಿ ಸಮುದ್ರದಲ್ಲಿ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ಕ್ಯಾಲಬ್ರಿಯಾ ಅಗ್ನಿಶಾಮಕ ದಳದ ವಕ್ತಾರ ಡ್ಯಾನಿಲೋ ಮೈದಾ ತಿಳಿಸಿದ್ದಾರೆ.

ಇದನ್ನೂ ಓದಿ: ಸುರತ್ಕಲ್: ತಲವಾರು ಝಳಪಿಸಿ ಹಲ್ಲೆ; ಓರ್ವನ ಬಂಧನ,ಇನ್ನೋರ್ವ ಪರಾರಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next