Advertisement

ವಿಜಯಪುರ:  ಶಿಶು ಮಾರಾಟ ಪ್ರಕರಣ; ಸ್ಟಾಫ್  ನರ್ಸ್ ಅಮಾನತು

10:34 PM Sep 15, 2021 | Team Udayavani |

ವಿಜಯಪುರ : ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಪ್ರಮುಖ ಆರೋಪಿ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಸೇವೆಯಿಂದ ಅಮಾನತು ಮಾಡಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

Advertisement

ಈ ಕುರಿತು ಬುಧವಾರ ರಾತ್ರಿ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಸುನಿಲಕುಮಾರ, 8 ದಿನದ ಮಗುವನ್ನು ಹಣಕ್ಕೆ ಖರೀದಿ ಮಾಡಿದ ಆರೋಪದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಕಸ್ತೂರಿ ಎಂಬ ಆರೋಪಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಇದಲ್ಲದೇ ಪ್ರಕರಣ ಆರೋಪಿ ನರ್ಸ್ ರೇಣುಕಾಳ ಪತಿ ಮಂಜುನಾಥ ಪಡಸಲಗಿ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಮಾರಾಟವಾಗಿರುವ ಮಗು 8 ದಿನದ ಗಂಡು ಶಿಶುವಾಗಿದೆ. ಆರೋಪಿಗಳು ಆ.26 ರಂದು ಬಲವಂತದಿಂದ 5 ಸಾವಿರ ರೂ. ಹಣ ನೀಡಿ ತಾಯಿಯಿಂದ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕರಣವನ್ನು ದೃಢೀಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next