Advertisement
ಮಕ್ಕಳ ಹಕ್ಕುಗಳು ಎಂದರೇನು? ಮಕ್ಕಳ ಹಕ್ಕುಗಳು ಯಾವವು? ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಮಕ್ಕಳ ಹಕ್ಕುಗಳ ಒಡಂಬಡಿಕೆ ಏನು? ಮಕ್ಕಳು ತಮ್ಮ ಹಕ್ಕು ಪಡೆಯುವುದು ಹೇಗೆ? ಮಕ್ಕಳ ಹಕ್ಕುಗಳ ರಕ್ಷಣೆಗಿರುವ ಕಾನೂನುಗಳು ಯಾವುವು? ಹೀಗೆ ಮಕ್ಕಳ ಹಕ್ಕುಗಳ ಬಗೆಗಿನ ಅಂಶಗಳ ಕುರಿತು ಮಕ್ಕಳಿಗೆ ಸುಲಭವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ “ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು’ ಎನ್ನುವ ಪಠ್ಯ ಪುಸ್ತಕ ಮುದ್ರಣಗೊಂಡಿದೆ.
Related Articles
Advertisement
ಮಕ್ಕಳ ಹಕ್ಕುಗಳ ಬಗ್ಗೆ ನಡೆದ ಸಮೀಕ್ಷೆ, ಮಕ್ಕಳ ಸ್ಥಿತಿಗತಿಗಳು, ರಾಜ್ಯಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು, ಆಘಾತಕಾರಿ ಅಂಶಗಳು, ಸಂವಿಧಾನದಲ್ಲಿ ಮಕ್ಕಳ ಹಿತದೃಷ್ಟಿಗಾಗಿ ಒತ್ತುಕೊಟ್ಟಿರುವ ಪರಿಚ್ಛೇಧಗಳು, ಮಕ್ಕಳ ಹಕ್ಕುಗಳ ಜಾರಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಹಾಗೂ ಪೋಷಕರು, ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂ, ಯುವಕರ ಸಂಘಗಳು, ಸ್ವ-ಸಹಾಯ ಸಂಘಗಳು, ಎಸ್‌ಡಿಎಂಸಿ ಸದಸ್ಯರ ಜವಾಬ್ದಾರಿಗಳನ್ನು ವಿವರಿಸಲಾಗಿದೆ.
ಮುಖ್ಯವಾಗಿ ಮಕ್ಕಳು ಆಸಕ್ತಿದಾಯಕವಾಗಿ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಗದ್ಯ ಮತ್ತು ಪದ್ಯ ರೂಪದಲ್ಲಿ ನಾಲ್ಕು ಭಾಗಗಳಾಗಿ ತಲಾ ಮೂರು ಅಧ್ಯಾಯಗಳು. ಮಕ್ಕಳನ್ನು ಆಕರ್ಷಿಸುವಂತೆ ಹಾಗೂ ಪಠ್ಯದ ವಿವರಣೆಗೆ ಬೇಕಾದ ಚಿತ್ರಗಳು ಪುಸ್ತಕದಲ್ಲಿವೆ. ಇನ್ನು, ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗಳಿವೆ.
ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಬ್ರೆಡ್ಸ್ ಸಂಸ್ಥೆ 10 ಜಿಲ್ಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನ (ಕ್ರೀಂ ಯೋಜನೆ) ಮೂಲಕ ಮಕ್ಕಳು, ಶಿಕ್ಷಕರಿಗೆ ತರಬೇತಿ, ಮಕ್ಕಳ ಹಕ್ಕುಗಳ ಕ್ಲಬ್ ಸ್ಥಾಪನೆಯಲ್ಲಿ ಸಹಕಾರ ನೀಡುತ್ತಿದೆ. ಸಂಸ್ಥೆಯಿಂದ “ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು’ ಪುಸ್ತಕವನ್ನು 10ಜಿಲ್ಲೆಗಳಲ್ಲಿ ವಿತರಿಸಲಾಗುವುದು.
● ಜಾಯ್ ನೆಡುಂಪೆರೆಂಬಿಲ್,ಕಾರ್ಯಕಾರಿ ನಿರ್ದೇಶಕರು, ಬ್ರೆಡ್ಸ್ ಸಂಸ್ಥೆ ಮಕ್ಕಳ ಬಗ್ಗೆ ಕಾಳಜಿಯುಳ್ಳ ಪ್ರತಿಯೊಬ್ಬರಿಗೂ “ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು’ ಪುಸ್ತಕ ಉಪ ಯುಕ್ತವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಾಗಿ ಮಕ್ಕಳ ಹಕ್ಕುಗಳ ಬಗ್ಗೆ ಈ ಪುಸ್ತಕದ ಮೂಲಕ ತಿಳಿಸಿಕೊಡ ಬೇಕು ಎನ್ನುವ ಉದ್ದೇಶವನ್ನು ಆಯೋಗ ಹೊಂದಿದೆ.
● ವೈ. ಮರಿಸ್ವಾಮಿ, ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ,
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ. ರಂಗಪ್ಪ ಗಧಾರ