Advertisement

ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ

06:28 AM Jun 11, 2020 | Lakshmi GovindaRaj |

ಚನ್ನಪಟ್ಟಣ: ಕೋವಿಡ್‌ 19 ಸಂಕಷ್ಟದಲ್ಲಿ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂದು ಬಾಲು ಪಬ್ಲಿಕ್‌ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚೆಟ್ಟಿ ಹೇಳಿದರು.ಪಟ್ಟಣದ ಬಾಲು ಪಬ್ಲಿಕ್‌ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೋಷಕರ ಸಭೆಯಲ್ಲಿ ಮಾತನಾಡಿ,  ಆರೋಗ್ಯದಿಂದಿದ್ದರೆ ಶಿಕ್ಷಣ ಪಡೆಯಬಹುದು.

Advertisement

ಸರ್ಕಾರ ನೀಡುವ ಆದೇಶದ ಮೇಲೆ ಕೋವಿಡ್‌ 19 ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಆರೋಗ್ಯದ ಮೇಲೆ  ದುಷ್ಪರಿಣಾಮ  ಬೀರದಂತೆ ಎಚ್ಚರಿಕೆ ವಹಿಸಿ ಪೋಷಕರ ಅಭಿಪ್ರಾಯ ಪಡೆದು ಶಾಲೆ ಪ್ರಾರಂಭಕ್ಕೆ ಸಿದಟಛಿತೆ ಮಾಡಿಕೊಳ್ಳಲಾಗುವುದು ಎಂದರು. ಕೋವಿಡ್‌ 19 ಹಾವಳಿಯ ಸಂದರ್ಭದಲ್ಲಿ ಶಾಲೆ ಆರಂಭಿಸಬೇಕೋ ಬೇಡವೋ ಎಂಬ ಬಗ್ಗೆ ಪೋಷಕರ ಅಭಿಪ್ರಾಯ ಪಡೆಯಲಾಗುತ್ತಿದೆ.

ಒಬ್ಬರಿಂದ ಒಬ್ಬರಿಗೆ  ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗೆ ಪ್ರತಿ ಗಂಟೆಗೊಮ್ಮೆ ಶುಚಿಗೊಳಿಸಬೇಕು. ಮುಖಕ್ಕೆ ಮಾಸ್ಕ್ ಹಾಕುವುದರ ಜೊತೆಗೆ ಅನಾರೋಗ್ಯ ಪೀಡಿತರೊಂದಿಗಿನ ಸಂಪರ್ಕ  ಬಿಡಬೇಕು ಎಂದು ತಿಳಿಸಿದರು. ಶಾಲೆ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ಮಾತನಾಡಿ, ಶಾಲೆ ಆರಂಭಿಸುವುದು ಮುಖ್ಯವಲ್ಲ. ಮಕ್ಕಳ ಆರೋಗ್ಯ ಮುಖ್ಯ.

ಭವಿಷ್ಯದ ಮುಂದಿನ ಪ್ರಜೆಗಳಾದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ  ಪರಿಣಾಮ ಬೀರದಂತೆ ಜಾಗ್ರತೆ ವಹಿಸುವುದು ನಮ್ಮ ಜವಾಬ್ದಾರಿ ಎಂದರು. ಕೆಲ ಪೋಷಕರು ಕೋವಿಡ್‌ 19 ಹರಡುತ್ತಿರುವಾಗ ಶಾಲೆ ಆರಂಭಿಸುವುದು ಸರಿಯಲ್ಲ ಎಂದರೆ ಕೆಲವರು ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಂಡು ಆರಂಭಿಸಬಹುದು ಎಂದರು. ಶಾಲೆ ಪ್ರಾಂಶುಪಾಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next