Advertisement

ಬಿಜೆಪಿಯಲ್ಲಿ ಶುರುವಾದ ಚಿಕ್ಕೋಡಿ, ರಾಯಚೂರು ಟಿಕೆಟ್‌ ಬಿಕ್ಕಟ್ಟು

12:29 AM Mar 31, 2019 | Vishnu Das |

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಮುಗಿದು ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದರೂ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಗೊಂದಲ ನಿವಾರಣೆ ಯಾಗಿಲ್ಲ, ಜೆಡಿಎಸ್‌ನಲ್ಲಿ ಒಳ ಏಟಿನ ಆತಂಕವೂದೂರವಾಗಿಲ್ಲ. ಹೀಗಾಗಿ ಈ ಮೂರು ಪಕ್ಷಗಳೂ ಒಳಗೊಳಗೇ
ಬೇಗುದಿ ಅನುಭವಿಸುತ್ತಿವೆ.

Advertisement

ಚಿಕ್ಕೋಡಿ, ರಾಯಚೂರು ಕ್ಷೇತ್ರಗಳ ಟಿಕೆಟ್‌ ಹಂಚಿಕೆ ನಂತರದ ವಿದ್ಯಮಾನಗಳು ಬಿಜೆಪಿಗೆ ತಲೆನೋವು ತಂದಿದ್ದು, ಚಿಕ್ಕೋಡಿ ವಿಚಾರದಲ್ಲಂತೂ ಟಿಕೆಟ್‌ ಕೈ ತಪ್ಪಿದ್ದರಿಂದ ಕತ್ತಿ ಸಹೋದರರು ಕಾಂಗ್ರೆಸ್‌ ಅಥವಾ ಜೆಡಿಎಸ್‌ನತ್ತ ನೋಡುತ್ತಿದ್ದಾರೆ ಎಂದು ಹೇಳಲಾಗಿದೆ.

ಒಂದೊಮ್ಮೆ ರಮೇಶ್‌ಕತ್ತಿ ಕಾಂಗ್ರೆಸ್‌ಗೆ ಬಂದರೆ ಚಿಕ್ಕೋಡಿ ಕ್ಷೇತ್ರ ಅವರಿಗೆ ಬಿಟ್ಟುಕೊಟ್ಟು ಹಾಲಿ ಸಂಸದ ಪ್ರಕಾಶ್‌ ಹುಕ್ಕೇರಿ, ಬೆಳಗಾವಿಗೆ ವರ್ಗಾವಣೆಯಾಗುವ ಸಾಧ್ಯತೆಯೂ ಇವೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಮೇಶ್‌ಕತ್ತಿ ಕಾಂಗ್ರೆಸ್‌ಗೆ ಸೆಳೆದರೆ ಉಮೇಶ್‌ ಕತ್ತಿ ಸಹ ಪಕ್ಷಕ್ಕೆ ಬರಲಿದ್ದು ಆ ಭಾಗದಲ್ಲಿ ಪಕ್ಷ ಬಲಿಷ್ಠವಾಗಲಿದೆ ಎಂಬ ಲೆಕ್ಕಾಚಾರಕಾಂಗ್ರೆಸ್‌ನದು. ಈಗಾಗಲೇ ಸತೀಶ್‌ ಜಾರಕಿಹೊಳಿ ಅವರು ಈ ನಿಟ್ಟಿನಲ್ಲಿ ಉಮೇಶ್‌ ಕತ್ತಿ ಜತೆ ಸಂಪರ್ಕದಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಮತ್ತೂಂದೆಡೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಉಮೇಶ್‌ ಕತ್ತಿ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಬೆಳಗಾವಿ ಭಾಗದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತ ದೆ ಎಂಬ ಉದ್ದೇಶ ಇದರ ಹಿಂದಿದೆ ಎಂದು ತಿಳಿದು ಬಂದಿದೆ.

Advertisement

ಭಾನುವಾರ ರಾಹುಲ್‌ಗಾಂಧಿ ಹಾಗೂ ದೇವೇಗೌಡರ ನೇತೃತ್ವದಲ್ಲಿ ಬೃಹತ್‌ ಸಮಾವೇಶ ಇರುವುದರಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಅದರಲ್ಲಿ ತೊಡಗಿಸಿಕೊಂಡಿದ್ದು ಸೋಮವಾರ ಈ ಕುರಿತು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.

ರಾಯಚೂರಿನಲ್ಲಿ ಬೇರೆ ಬೇರೆ ಪಕ್ಷಗಳಲ್ಲಿದ್ದ ರಾಜಾಅಮರೇಶ್‌ ನಾಯಕ್‌ಗೆ ಬಿಜೆಪಿ ಟಿಕೆಟ್‌ ಕೊಟ್ಟಿರುವುದರಿಂದ ಪ್ರಬಲ ಆಕಾಂಕ್ಷಿಯಾಗಿದ್ದ ತಿಪ್ಪರಾಜು ಹವಾಲ್ದಾರ್‌ ಅಸಮಾಧಾನಗೊಂಡಿದ್ದು, ಭಾನುವಾರ ಬೆಂಬಲಿಗರ ಸಭೆ
ನಡೆಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿರುವುದು ರಾಜ್ಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ದಾವಣಗೆರೆಯಲ್ಲಿ ಮುಗಿಯದ ಗೊಂದಲ: ಕಾಂಗ್ರೆಸ್‌ಗೆ ದಾವಣಗೆರೆ ಕ್ಷೇತ್ರದ ಟಿಕೆಟ್‌ ಸಮಸ್ಯೆಯಾಗಿದೆ. ಹೈಕಮಾಂಡ್‌ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್‌ ನೀಡಿದ್ದರೂ ಅವರು ಸ್ಪರ್ಧೆಗೆ ನಿರಾಕರಿಸಿ, ಹೈಕಮಾಂಡ್‌ ಮುಂದೆ ಸಚಿವಗಿರಿ ಬೇಡಿಕೆ ಇಟ್ಟಿದ್ದಾರೆ. ಅವರ ಪುತ್ರ ಮಲ್ಲಿಕಾರ್ಜುನ್‌ ಸಹ ಸ್ಪರ್ಧೆಗೆ ಒಲವು ಹೊಂದಿಲ್ಲ. ಆದರೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣಗೋಪಾಲ್‌ ಅವರು ಮಲ್ಲಿಕಾರ್ಜುನ್‌ ಸಂಪರ್ಕದಲ್ಲಿದ್ದು ಪರ್ಯಾಯ ಅಭ್ಯರ್ಥಿಯ ತಲಾಷೆಯೂ ನಡೆದಿದೆ.
ಇನ್ನು, ಧಾರವಾಡ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಬೇಕೋ, ಲಿಂಗಾಯಿತ ಸಮುದಾಯಕ್ಕೆ ಕೊಡಬೇಕೋ ಎಂಬುದು ಹೈಕಮಾಂಡ್‌ಗೂ ತಲೆನೋವು ತಂದಿದೆ.

ಹಾವೇರಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಸಿಗದ ಕಾರಣ ಇದೀಗ ಧಾರವಾಡದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕೊಡುವ ಅನಿವಾರ್ಯತೆ ಎದುರಾಗಿದೆ. ಅಲ್ಲಿ ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಪುತ್ರ ಶಾಕೀರ್‌ ಸನದಿ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ,ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರ ಪುತ್ರಿ ಸಮೀನಾ ಸುಲ್ತಾನ್‌ ಹೆಸರು ಕೇಳಿಬರುತ್ತಿದೆ. ಮಾಜಿ ಸಚಿವ ವಿನಯಕುಲಕರ್ಣಿ ಇನ್ನೂ ಪ್ರಯತ್ನ ಬಿಟ್ಟಿಲ್ಲ.

ಜೆಡಿಎಸ್‌ನಲ್ಲಿ ಆತಂಕ: ಜೆಡಿಎಸ್‌
ನಲ್ಲಿ ಟಿಕೆಟ್‌ ಹಂಚಿಕೆ ಸಮಸ್ಯೆ ಇಲ್ಲವಾದರೂ ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕರು ಪೂರ್ಣ ಮನಸ್ಸಿನಿಂದ ಜೆಡಿಎಸ್‌ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿಲ್ಲ, ಮಂಡ್ಯ, ಹಾಸನದಲ್ಲಂತೂ ಇದೇ ವಿಚಾರಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗಳಲ್ಲಿ ಮಾರಾ ಮಾರಿ ಸಹ ನಡೆದಿದೆ. ಶುಕ್ರವಾರ ಅರಸೀಕೆರೆಯಲ್ಲಿ ರೇವಣ್ಣ ಎದುರಿಗೇ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೇ ಓಟು ಹಾಕುತ್ತೇವೆ
ಎಂದು ಹೇಳಿ ಎದ್ದುಹೋಗಿದ್ದರೆ, ಶನಿವಾರ ಶ್ರೀರಂಗಪಟ್ಟ ಣದಲ್ಲಿ ಇಂಥದ್ದೇ ಘಟನೆ ನಡೆದಿದೆ.ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಸಹಕಾರ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಅದರಲ್ಲೂ ಮೈಸೂರು ಕ್ಷೇತ್ರದಲ್ಲಿ ವ್ಯತ್ಯಾಸವಾಗುವ ಭಯ ಕಾಂಗ್ರೆಸ್‌ಗೂ ಇದೆ.

ಐಟಿ ಅಧಿಕಾರಿಗಳ ವಿರುದ್ಧ  ಸಿಎಂ ಗರಂ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ಬೆಳಗಿನ ಜಾವ 4 ಗಂಟೆಗೆ ದಾಳಿ ಮಾಡಿ ಸ್ಪೈ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಆರೋಪಿಸಿದರು. ರೈಲ್ವೆ ಅಧಿಕಾರಿಗಳ ಸೋಗಿನಲ್ಲಿ ಕಾರು ಬಾಡಿಗೆ ಪಡೆದು ಮೈಸೂರಿನಲ್ಲಿ ಸಿಎಫ್ಟಿಆರ್‌ಐನಲ್ಲಿ ತಂಗಿರುವ ಅವರು ಕಾರ್ಯಕರ್ತರನ್ನು ಬೆದರಿಸಲು ಈ ತಂತ್ರಗಳನ್ನು ಹಣೆದಿದ್ದಾರೆ ಎಂದು ಟೀಕಿಸಿದರು. ಈ ಸಂಬಂಧ ಚುನಾವಣಾ ಆಯೋಗ ಕೂಡಲೇ ಮಧ್ಯ ಪ್ರವೇಶಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ಮೋಸದ ರಾಜಕಾರಣ
ಸಿಎಂ ಕುಮಾರಸ್ವಾಮಿಯವರಿಗೆ ನನ್ನ ಸ್ಪರ್ಧೆಯಿಂದ ಸೋಲಿನ ಭೀತಿ ಕಾಡುತ್ತಿದೆ. ಮಗನನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದು ಮೋಸ, ಸುಳ್ಳಿನ ರಾಜ ಕಾರಣ ಮಾಡುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ
ಸುಮಲತಾ ಅವರು ಆರೋಪಿಸಿದ್ದಾರೆ. ನನ್ನ ಕ್ರಮ ಸಂಖ್ಯೆ  20
ಆಗಿದ್ದು, ನನ್ನ ಹೆಸರಿನ ಮೇಲೆ ಹಾಗೂ ಕೆಳ ಗೆ ಬೇರೆ ಸುಮ ಲತಾ
ಅವರ ಹೆಸರುಗಳು ಬರುವಂತೆ ನೋಡಿ ಕೊಂಡು ಜನರಲ್ಲಿ ಗೊಂದಲ
ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಇದರಲ್ಲಿ ಅವರು ಯಶ ಸ್ವಿಯಾಗುವುದಿಲ್ಲ. ಏಕೆಂದರೆ ನನ್ನ ಕ್ರಮ ಸಂಖ್ಯೆಯ ಪಕ್ಕದಲ್ಲೇ ಫೋಟೋ ಇರು ತ್ತದೆ. ಫೋಟೋ ನೋಡಿ ಜನರು ಮತ ಹಾಕು ತ್ತಾರೆ ಎಂದಿದ್ದಾರೆ

ಕೋರ್ಟ್‌ಗೆ ಹೋಗಲಿ
ಸುಮಲತಾ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹೆಸರು 20 ನೇ ಕ್ರಮ ಸಂಖ್ಯೆಯಲ್ಲಿ ಇರುವುದು ಸರಿಯಾಗಿಯೇ ಇದೆ ಎಂದು ಸ್ಪಷ್ಟಪಡಿಸಿ
ದ್ದಾರೆ. ತಾಂತ್ರಿಕವಾಗಿ ಚುನಾವಣಾಧಿಕಾರಿಗಳ ಕ್ರಮ ಸರಿಯಾಗಿದೆ. ಅಷ್ಟಕ್ಕೂ ಸುಮಲತಾ ಅವರಿಗೆ ಆಕ್ಷೇಪಣೆ ಇದ್ದರೆ ನ್ಯಾಯಾಲಯದ ಮೊರೆ ಹೋಗಬಹು ದು ಎಂದು ಹೇಳಿದರು. ಇವಿಎಂ ಯಂತ್ರದಲ್ಲಿ ಮೊದಲಿಗೆ ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ನಂತರ ಪಕ್ಷೇತರ
ಅಭ್ಯರ್ಥಿಗಳು (ಅಕ್ಷರಮಾಲೆ) ಪ್ರಕಾರ ಹೆಸರುಗಳು ಸೇರಿಸಲಾ ಗುತ್ತದೆ. ಸುಮಲತಾ ಅವರು ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿಯವರು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next