ಚಿಕ್ಕಮಗಳೂರು : ಯಮಸ್ವರೂಪಿ ಟಿಪ್ಪರ್ ಗೆ ಅಮಾಯಕ ಜೀವವೊಂದು ಬಲಿಯಾದ ಘಟನೆ ಚಿಕ್ಕಮಗಳೂರು ನಗರದ ಎನ್ ಎಂ ಸಿ ಸರ್ಕಲ್ ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಟಿಪ್ಪರ್ ಉದ್ಯಮಿ ಸುದರ್ಶನ್ ಎಂಬುವವರಿಗೆ ಸೇರಿದ್ದಾಗಿದ್ದು, ಚಾಲಕನ ಅತೀವೇಗದ ಚಾಲನೆಯಿಂದ ಬೈಕ್, ಹಾಗೂ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಹಗಲು ಹೊತ್ತಿನಲ್ಲಿ ನಗರಪ್ರದೇಶಕ್ಕೆ ಟಿಪ್ಪರ್ ಗಳಿಗೆ ಪ್ರವೇಶ ಇಲ್ಲದಿದ್ದರೂ ಟಿಪ್ಪರ್ ಚಾಲಕರು ಅನಧಿಕೃತ ಸಂಚಾರ ನಡೆಸುತ್ತಿದ್ದಾರೆ, ಇದರಿಂದ ಹಲವಾರು ಬಾರಿ ಇಂತಹ ಘಟನೆಗಳು ನಡೆದಿದೆ ಎನ್ನಲಾಗಿದೆ.
ಹೆಚ್ಚಿನ ಭಾರವನ್ನು ಹಾಕಿಕೊಂಡು ಯಮಸ್ವರೂಪಿಯಂತೆ ನಗರ ರಸ್ತೆಗಳಲ್ಲಿ ಸಂಚರಿಸುತ್ತಿರುವ ಟಿಪ್ಪರ್ ಗಳನ್ನು ಕಂಡರೆ ಇಲ್ಲಿನ ಜನಸಾಮಾನ್ಯರಿಗೆ ಮಾತ್ರವಲ್ಲ ಲಘು ವಾಹನ ಸವಾರರು ಭಯಭೀತರಾಗುತ್ತಾರೆ.
ಹಗಲು ಹೊತ್ತಿನಲ್ಲಿ ನಗರಕ್ಕೆ ಪ್ರವೇಶ ನಿರ್ಬಂಧಿಸಿದ್ದರೂ ಟಿಪ್ಪರ್ ಮಾತ್ರ ಪೊಲೀಸರು, ಆರ್ ಟಿಓ ಅಧಿಕಾರಿಗಳಿಗೆ ಕ್ಯಾರೇ ಎನ್ನದೆ ರಾಜಾರೋಷವಾಗಿ ಸಂಚರಿಸುತ್ತಿವೆ ಅಲ್ಲದೆ ಅದನ್ನೆಲ್ಲ ಗಮನಿಸುತ್ತಿರುವ ಅಧಿಕಾರಿಗಳೂ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.
ಘಟನೆ ಕುರಿತು ನಗರದಲ್ಲಿ ಜನಸಾಮಾನ್ಯರಿಗೊಂದು ಕಾನೂನು, ಬಲಾಢ್ಯರಿಗೊಂದು ಕಾನೂನಾ..? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಫೆಬ್ರವರಿಯಲ್ಲಿ ಬೆಂಗಳೂರು 13 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ