ಕಡೂರು: ಪಕ್ಷಕ್ಕಿಂತ ರಾಷ್ಟ್ರದ ಹಿತವೇ ಮುಖ್ಯ ಎಂಬ ದೃಢ ನಿರ್ಧಾರದಿಂದ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿರುವುದು ರಾಜ್ಯದ ಅಭಿವೃದ್ಧಿಗೂ ಪೂರಕ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು. ತಾಲೂಕಿನ ಮಚ್ಚೇರಿಯ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಜಂಟಿ ಸಮನ್ವಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
Advertisement
ವಿಶ್ವವೇ ತಿರುಗಿ ನೋಡುವಂತಹ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಿ ಭಾರತ ದೇಶ ವಿಶ್ವನಾಯಕ ಸ್ಥಾನಕ್ಕೇರು ವುದರಲ್ಲಿ ಯಾವ ಅನುಮಾನವಿಲ್ಲ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
Related Articles
Advertisement
ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ವಕ್ತಾರ ಕೆ.ಆರ್. ಮಹೇಶ್ ಒಡೆಯರ್, ಟಿ.ಆರ್. ಲಕ್ಕಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಸೋನಾಲ್ ಧರ್ಮೆಗೌಡ, ಚೇತನ್ ಕೆಂಪರಾಜ್, ಕೆ.ಎಂ. ವಿನಾಯಕ, ಶೂದ್ರ ಶ್ರೀನಿವಾಸ್, ಸವಿತಾ ರಮೇಶ್, ಕೆ.ಎಂ. ಬೊಮ್ಮಣ್ಣ, ಬಿ.ಪಿ. ನಾಗರಾಜ್, ಸುನೀತಾ ಜಗದೀಶ್, ಶೂದ್ರ ಶ್ರೀನಿವಾಸ, ಬಿ.ಟಿ.ಗಂಗಾಧರನಾಯ್ಕ ಮತ್ತಿತರರು ಇದ್ದರು.
ವೇದಿಕೆಯಲ್ಲಿ ಒಟ್ಟಿಗೆ ಕುಳಿದ ಮಾಜಿ ಶಾಸಕರುಕೇವಲ ಹತ್ತು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾ ಜಿದ್ದಿಯ ಹೋರಾಟ ನಡೆಸಿದ್ದ ಮಾಜಿ ಶಾಸಕರಾದ ವೈಎಸ್.ವಿ. ದತ್ತ ಮತ್ತು ಬೆಳ್ಳಿಪ್ರಕಾಶ್ ಇಬ್ಬರೂ ಪ್ರಥಮ ಬಾರಿ ವೇದಿಕೆ ಹಂಚಿಕೊಂಡರು. ಕೋಮುವಾದಿ ಪಕ್ಷ ಎಂದೇ ಸದಾ ಹೇಳುತ್ತಿದ್ದ ದತ್ತ ಬಿಜೆಪಿಯ ಮತ್ತು ಬೆಳ್ಳಿಪ್ರಕಾಶ್ ಜೆಡಿಎಸ್ ಶಾಲು ಧರಿಸಿ ಗಮನ ಸೆಳೆದರು. ಮಾತಿನ ಮಧ್ಯೆ ದತ್ತ ಅವರು ಬೆಳ್ಳಿ ನನ್ನ ಶಿಷ್ಯ. ಆತನ ನೇತೃತ್ವದಲ್ಲೇ ಕಾರ್ಯಕರ್ತರು ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರೆ ನೀಡಿದರು. ಬೆಳ್ಳಿಪ್ರಕಾಶ್ ಸಹ ನನ್ನ ಗುರುಗಳಾದ ದತ್ತ ಎಂದು ಹೇಳಿ ಒಗ್ಗಟ್ಟು ಪ್ರದರ್ಶಿಸಿದರು.