Advertisement

ರೈತರ ಹೋರಾಟ ಹತ್ತಿಕ್ಕುವ ತಂತ್ರ ಕೈಬಿಡಿ

05:25 PM Jan 24, 2021 | |

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ಕೈಬಿಡುವಂತೆ ರೈತರು ನಡೆಸುತ್ತಿರುವ ಹೋರಾಟವನ್ನು ವಿಫಲಗೊಳಿಸಲು ಸರ್ಕಾರ ನಡೆಸುತ್ತಿರುವ ತಂತ್ರಗಳನ್ನು ಕೈಬಿಡಬೇಕೆಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸದೆ ಅನುಮೋದನೆ ಪಡೆದುಕೊಂಡಿದೆ. ಕೊರೊನಾ ಸಂದರ್ಭದಲ್ಲಿ ಜನರ ಬಾಯಿಗೆ ಬಟ್ಟೆ ಕಟ್ಟಿ ಬೀದಿಗೆ ಇಳಿಯದಂತೆ ಪೊಲೀಸರ ಲಾಠಿಗೆ ಅ ಧಿಕಾರ ನೀಡಿ ಪ್ರತಿಭಟನೆಗೆ ಅವಕಾಶ ನೀಡದಂತೆ ಮಾಡಲಾಯಿತು. ಸಂಕಷ್ಟದ ಸಮಯದಲ್ಲಿ ಕಾಯ್ದೆ ತರುವ ಅನಿವಾರ್ಯತೆ ಸರ್ಕಾರಕ್ಕೆ ಏನಿತ್ತು ಎಂದು ಪ್ರಶ್ನಿಸಿದ ಅವರು, ದೇಶದ ರೈತರ ಬದುಕನ್ನು ಹಸನುಗೊಳಿಸುವತ್ತ ಗಮನ ಹರಿಸಬೇಕಾದ ಸರ್ಕಾರ ಖಾಸಗಿ ಕಂಪನಿ ಪರ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವುದು
ಸರಿಯಲ್ಲ ಎಂದರು.

Advertisement

ಓದಿ :  ಸಿಎಂ ತಮ್ಮ ಮಗನ ಪೊಲೀಸ್‌ ಭದ್ರತೆ ಹೆಚ್ಚಿಸಲಿ

ರೈತರು ಪ್ರತಿಭಟನೆ ಆರಂಭಿಸಿ ಎರಡು ತಿಂಗಳು ಕಳೆದಿದೆ. ಚಳಿ, ಗಾಳಿ, ಮಳೆ ತಡೆಯಲಾಗದೆ 140 ರೈತರು ಮೃತಪಟ್ಟಿದ್ದಾರೆ. ಸರ್ಕಾರದ 11 ಸುತ್ತಿನ ಸಭೆಯೂ ವಿಫಲವಾಗಿದೆ. ಪ್ರತಿಭಟನೆ ಮುಂದುವರಿಸಿದ್ದರಿಂದ 2 ವರ್ಷಗಳ ಕಾಲ ಕಾಯ್ದೆಯನ್ನು ತಡೆಹಿಡಿಯುವ ಭರವಸೆ ಸರ್ಕಾರ ನೀಡಿ ಹೋರಾಟವನ್ನು ಮೊಟಕುಗೊಳಿಸುವ ತಂತ್ರ ಅನುಸರಿಸುತ್ತಿದ್ದು, ರೈತರು ಮಣಿಯುವುದಿಲ್ಲ ಎಂದರು.

ಕೇಂದ್ರ ಸರ್ಕಾರದ ಕಾಯ್ದೆಗಳನ್ನು ಯಥಾವತ್ತಾಗಿ ಜಾರಿಗೆ ತಂದು ಶಹಬ್ಟಾಸ್‌ಗಿರಿ ಪಡೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿ ಸಿ ಕರ್ನಾಟಕದಲ್ಲೂ ರೈತ ಸಂಘಟನೆಗಳು ಜ.26ರಂದು ಪ್ರತಿಭಟನೆಗೆ ಮುಂದಾಗಿವೆ ಎಂದು ತಿಳಿಸಿದರು.
ಜ.26ರಂದು ಸರ್ಕಾರದ ಗಣರಾಜ್ಯೋತ್ಸವದ ನಂತರ ರೈತರು ಜನರ ಗಣರಾಜ್ಯೋತ್ಸವ ನಡೆಸಲು ನಿರ್ಧಾರಿಸಿದ್ದು, ಟ್ರಾಕ್ಟರ್‌ಗಳಿಗೆ
ರಾಷ್ಟ್ರಧ್ವಜ ಮತ್ತು ಹಸಿರು ಬಾವುಟಗಳನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗಣರಾಜ್ಯೋತ್ಸವ ಸಂದೇಶದ ಬಳಿಕ ರೈತರು ಜನರ ಗಣರಾಜ್ಯೋತ್ಸವ ನಡೆಸಲು ನಿರ್ಧಾರಿಸಿದ್ದಾರೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚಿ ಅವುಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ಮುಂದಾಗಿವೆ. ಈಗಾಗಲೇ ಸೇವಾ ವಲಯಗಳನ್ನು ಬಂಡವಾಳಶಾಹಿಗಳಿಗೆ ವಹಿಸಿಕೊಡಲಾಗುತ್ತಿದೆ. ವಿದ್ಯುತ್‌ ಕಂಪೆನಿ, ವಿಮಾನ ನಿಲ್ದಾಣ ಮತ್ತು ರೈಲು ಮಾರ್ಗಗಳಿಗೆ ಕಾರ್ಪೋರೆಟ್‌ ಕಂಪೆನಿಗಳ ಪ್ರವೇಶವಾಗಿದೆ ಎಂದರು.

ಅರುಣಾಚಲ ಪ್ರದೇಶದಲ್ಲಿ ಚೀನಾದವರು ಹಳ್ಳಿಗಳನ್ನು ನಿರ್ಮಿಸುತ್ತಿದ್ದು, ಇದರತ್ತ ಗಮನ ಹರಿಸದೆ, ಆರ್ಥಿಕ ಕುಸಿತವನ್ನು ತಡೆಯಲು ಮುಂದಾಗದ ಕೇಂದ್ರ ಸರ್ಕಾರ ರೈತರ ಚಳವಳಿಯನ್ನು ಹತ್ತಿಕ್ಕುವ ತಂತ್ರವನ್ನು ಹೆಣೆಯುತ್ತಿದೆ ಎಂದು ಟೀಕಿಸಿದರು. ರೈತರ ಹೋರಾಟ ವಿದೇಶಗಳ ಗಮನವನ್ನು ಸೆಳೆದಿದ್ದು, ಜ.26ರೊಳಗೆ ರೈತ ವಿರೋಧಿ  ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ದೇಶವ್ಯಾಪಿ ಮತ್ತೂಂದು
ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾಧ್ಯಕ್ಷ ಡಿ.ಆರ್‌.ದುಗ್ಗಪ್ಪಗೌಡ, ರಾಜ್ಯ ಮುಖಂಡ ತರೀಕೆರೆ ಮಹೇಶ್‌, ಮುಖಂಡರಾದ ನಾಗೇಶ್‌, ಮಂಜೇಗೌಡ, ಓಂಕಾರಪ್ಪ ಇದ್ದರು.

Advertisement

ಓದಿ : ಕೃಷಿ ಉತ್ಪನ್ನ ಸಾಗಿಸಲು ದ್ವಿಚಕ್ರ ವಾಹನಕ್ಕೆ ಟ್ರೈಲರ್‌ : ಎಲ್ಲರ ಗಮನ ಸೆಳೆದ ವಿನೂತನ ಪ್ರಯೋಗ

Advertisement

Udayavani is now on Telegram. Click here to join our channel and stay updated with the latest news.

Next