ಚಿಕ್ಕಜಾಜೂರು: ಗ್ರಾಮ ಪಂಚಾಯಿತಿಯ ಸಿಸಿ ಕ್ಯಾಮೆರಾ ಡಿವಿಆರ್ ಡಿಸ್ಕ್ ಕಳ್ಳರು ಕದ್ದ ಘಟನೆ ಸೋಮವಾರ ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ಮುಂಜಾನೆ ನಡೆದಿರಬಹುದೆಂದು ಊಹಿಸಲಾಗಿದೆ,
ಕಚೇರಿಯ ಜವಾನ ಅಶೋಕ್ ಎಂದಿನಂತೆ ಸೋಮವಾರ ಬೆಳಿಗ್ಗೆ ಏಳು ಮೂವತ್ತರ ಸುಮಾರಿಗೆ ಕಚೇರಿಯನ್ನು ಸ್ವಚ್ಛಗೊಳಿಸಲು ಬಂದು ಬೀಗ ತೆಗೆಯಲು ಮುಂಭಾಗದ ಬೀಗ ಒಡೆದಿರುವುದನ್ನು ಕಂಡು ತಕ್ಷಣವೇ ಬಿಲ್ ಕಲೆಕ್ಟರ್ ಹಾಗೂ ಅಧ್ಯಕ್ಷರಿಗೆ ವಿಚಾರ ತಿಳಿಸಿ ಕದ ತೆಗೆಯಲು ಹೋದಾಗ ಒಳಗಡೆ ಚಿಲಕ ಹಾಕಿರುವುದು ಗೊತ್ತಾಗುತ್ತದೆ. ಕಚೇರಿಯ ಹಿಂದಿನ ಬಾಗಿಲು ತೆರೆದಿರುವುದನ್ನು ನೋಡಿ ಗಾಬರಿಗೊಂಡ ಜವಾನ ಕೂಡಲೇ ಅಧ್ಯಕ್ಷರ ಸೂಚನೆ ಮೇರೆಗೆ ಪೋಲಿಸ್ ಠಾಣೆಗೆ ಘಟನೆ ಬಗ್ಗೆ ತಿಳಿಸಿದನು, ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಜೂರು ಪಿಎಸ್ಐ ಬಾಹುಬಲಿ ಪಡನಾಡ ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಕಚೇರಿ ಪರಿಶೀಲಿಸುವ ವೇಳೆ ಗ್ರಾಮ ಪಂಚಾಯಿತಿಯ 6 ಗೊಡ್ರೆಜ್ ಬೀರುವುಗಳ ಲಾಕರ್ ಒಡೆದಿರುವುದು ಕಂಡುಬಂದಿದೆ, ಹಾಗೂ ಬಿಲ್ ಕಲೆಕ್ಟರ್, ಪಿಡಿಒ ಗೆ ಸಂಬಂಧಿಸಿದ ಬೀರುಗಳಲ್ಲಿ ಕದೀಮರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ,
ಉಪಾಧ್ಯಕ್ಷರ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರ ಗಳ ಹಾರ್ಡ್ ಡಿಸ್ಕ್ ಹಾಗೂ ಅದರ ಸಿಸ್ಟಮನ್ನು ಸಂಪೂರ್ಣವಾಗಿ ಕಿತ್ತು ನಾಶಪಡಿಸಿ ಅಲ್ಲಿಂದ ಕದ್ದೊಯ್ದಿರುವುದು ಅನುಮಾನಕ್ಕೆ ಎಡೆಮಾಡಿದೆ, ಇನ್ನುಳಿದಂತೆ ಕಚೇರಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರ ಗಳಲ್ಲಿ 2 ಸಿಸಿ ಕ್ಯಾಮರಾ ಗಳನ್ನು ಕಿತ್ತು ಎಲ್ಲೆಂದರಲ್ಲಿ ಬಿಸಾಡಿದ್ದು ಕಂಡುಬಂತು,
ತಕ್ಷಣವೇ ಪಿಎಸ್ಐ ರವರು ಹೊಳಲ್ಕೆರೆ ವೃತ್ತ ನಿರೀಕ್ಷಕರಿಗೆ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದರು,
ಘಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ರವೀಶ್ ಭೇಟಿ ಸ್ಥಳ ಪರಿಶೀಲಿಸಿದರು, ಚಿತ್ರದುರ್ಗದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸಿ ಮಾಹಿತಿ ಕಲೆಹಾಕಿ ಪಿಡಿಒಯಿಂದ ವಿವರಣೆ ಪಡೆದರು,
ಒಂದು ಲ್ಯಾಪ್ ಟ್ಯಾಪ್ , ಡಿವಿಆರ್ ಸೇರಿದಂತೆ ಅಂದಾಜು 70 ರಿಂದ 80 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ಹೇಳಲಾಗಿದೆ
ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.