Advertisement

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

08:51 PM Dec 27, 2024 | Team Udayavani |

ಕಾರ್ಕಳ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ಗ್ರಾಹಕನ ಸೋಗಿನಲ್ಲಿ ನುಗ್ಗಿದ ಕಳ್ಳನೊರ್ವ ಲಕ್ಷಾಂತರ ಮೌಲ್ಯದ ಒಡವೆಗಳನ್ನು ಕದ್ದು ಪರಾರಿಯಾದ ಘಟನೆ ಕಾರ್ಕಳದ ರಥಬೀದಿಯಲ್ಲಿ ಶುಕ್ರವಾರ (ಡಿ.27ರಂದು) ನಡೆದಿದೆ.

Advertisement

ಇಲ್ಲಿನ ರಥಬೀದಿ ರಸ್ತೆಯಲ್ಲಿರುವ ಪ್ರಕಾಶ್‌ ವಸಂತ್‌ ಜಾದವ್‌ ಮಾಲಕತ್ವದ ಪ್ರಣವ್‌ ಜ್ಯುವೆಲರಿ ಶಾಪ್‌ ಇದ್ದು, ಘಟನೆ ಸಂದರ್ಭ ಪ್ರಕಾಶ್‌ ಅವರು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅವರ ಪತ್ನಿ ಜ್ಯುವೆಲರಿ ಶಾಪ್‌ ನೋಡಿಕೊಳ್ಳುತ್ತಿದ್ದರು.

ಮಧ್ಯಾಹ್ನ 1.30ರ ಸುಮಾರಿಗೆ ಗ್ರಾಹಕನ ರೀತಿ ಶಾಪ್‌ ಒಳ ಪ್ರವೇಶಿಸಿದ ಯುವಕ ಚಿನ್ನಾಭರಣ ಖರೀದಿ ಬಗ್ಗೆ ಕನ್ನಡದಲ್ಲಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮಾಲಕರು ಹೊರ ಹೋಗಿದ್ದು, ಅವರು ಆಗಮಿಸಿದ ಅನಂತರ ಚಿನ್ನಾಭರಣ ತೋರಿಸುವುದಾಗಿ ಹೇಳಿದ್ದಾರೆ. ಗ್ಯಾಲರಿಯಲ್ಲಿ ಒಂದು ಕಟ್ಟಿನಲ್ಲಿ ಇರಿಸಿದ 26 ಗ್ರಾಂ. ಮೌಲ್ಯದ ಚಿನ್ನದ ಉಂಗುರ, ಜುಮ್ಕಿ ಆಭರಣವನ್ನು ಎತ್ತಿಕೊಂಡಿದ್ದಾನೆ. ಇದನ್ನು ಮುಟ್ಟಬೇಡಿ ಎಂದು ವಾಪಸ್‌ ತೆಗೆದುಕೊಳ್ಳುವಷ್ಟರಲ್ಲಿ ಕಳ್ಳ ಕ್ಷಣಮಾತ್ರದಲ್ಲಿ ಈ ಬಂಗಾರಗಳನ್ನು ಕದ್ದು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಕೃತ್ಯ ದಾಖಲಾಗಿದ್ದು, ಆರೋಪಿ ಸ್ಕೂಟರ್‌ನಲ್ಲಿ ಆಗಮಿಸಿ ಕೃತ್ಯ ಎಸಗಿದ್ದಾನೆ.

ಕಾರ್ಕಳ ನಗರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next