Advertisement

ಛತ್ತೀಸ್‌ಗಢ: ಸೋಲಿನಿಂದ ಕಲಿತ ಪಾಠ

12:03 PM May 24, 2019 | Team Udayavani |

ಛತ್ತೀಸ್‌ಗಢದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಅನಭವಿಸಿದ ಸೋಲಿನಿಂದ ಪಾಠ ಕಲಿತಂತಿದೆ. ಕೆಲವೇ ತಿಂಗಳುಗಳ ಹಿಂದೆ ನಡೆದಿದ್ದ ವಿಧಾನಸಬೆ ಚುನಾವಣೆಯಲ್ಲಿ ಸೋಲುತ್ತಿದ್ದಂತೆಯೇ ಎಲ್ಲ 11 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಆಡಳಿತ ವಿರೋಧಿ ಅಲೆಯನ್ನೂ ಸದೆಬಡಿದು ಇಡೀ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಲಾಗಿತ್ತು. ಇತರ ಪರಿಣಾಮವೇ 11 ರಲ್ಲಿ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. 2014 ರಲ್ಲೂ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಈ ಬಾರಿಯೂ ಒಂದು ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದೆ.

Advertisement

ನಿರೀಕ್ಷೆಯಂತೆಯೇ ಇಲ್ಲಿನ ಹಲವು ಕ್ಷೇತ್ರಗಳು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿಯನ್ನು ದಾಖಲಿಸಿವೆ. ಹಲವು ಕ್ಷೇತ್ರಗಳಲ್ಲಿ 2014ರಂತೆಯೇ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 2014 ರಲ್ಲಿ ಕೊರ್ಬಾದಲ್ಲಿ ಬಿಜೆಪಿಯ ಬನ್ಷಿಲಾಲ್‌ ಮಹತೋ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಅಜಿತ್‌ ಜೋಗಿ ವಿರುದ್ಧ ಕೇವಲ 1217 ಮತಗಳಿಂದ ಮಹಾಸಮುಂದ್‌ನಲ್ಲಿ ಬಿಜೆಪಿಯ ಚಂದು ಲಾಲ್‌ ಗೆಲುವು ಸಾಧಿಸಿದ್ದರು.


ಗೆದ್ದ ಪ್ರಮುಖರು

ಅರುಣ್‌ ಸಾವೋ (ಬಿಜೆಪಿ), ಬಿಲಾಸ್‌ಪುರ
ದೀಪಕ್‌ ಬೈಜ್‌ (ಕಾಂಗ್ರೆಸ್‌), ಬಸ್ತಾರ್‌
ಸೋತ ಪ್ರಮುಖರು
ತಾಮ್ರಧ್ವಜ ಸಾಹು (ಕಾಂಗ್ರೆಸ್‌), ದುರ್ಗ
ವಿಷ್ಣು ದೇವ್‌ ಸಾಯಿ (ಬಿಜೆಪಿ), ರಾಯಗಢ

Advertisement

Udayavani is now on Telegram. Click here to join our channel and stay updated with the latest news.

Next