Advertisement

ಕೌಂಟಿ ಜತೆ ಪೂಜಾರ ಒಪ್ಪಂದ ರದ್ದು

10:40 PM Apr 09, 2020 | Sriram |

ಹೊಸದಿಲ್ಲಿ: ಕೋವಿಡ್ 19 ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೌಂಟಿ ಚಾಂಪಿಯನ್‌ಶಿಪ್‌ನ ಮೊದಲ ಆರು ಪಂದ್ಯಗಳಿಗೆ ಭಾರತದ ಖ್ಯಾತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅವರು ಗ್ಲೌಸೆಸ್ಟರ್‌ಶೈರ್‌ ಕೌಂಟಿ ಜತೆ ಮಾಡಿಕೊಂಡ ಒಪ್ಪಂದವು ರದ್ದುಗೊಂಡಿದೆ.

Advertisement

ಪೂಜಾರ ಕೌಂಟಿಯ ಮೊದಲ ಅವಧಿಯಲ್ಲಿ ಕ್ಲಬ್‌ ಪರ ಆರು ಪಂದ್ಯಗಳಲ್ಲಿ ಆಡಬೇಕಿತ್ತು. ಆದರೆ ಜಾಗತಿಕವಾಗಿ ಆರೋಗ್ಯ ಸಮಸ್ಯೆ ಕಾಡುತ್ತಿರುವ ಕಾರಣ ಇಂಗ್ಲೆಂಡ್‌ ಮಂಡಳಿ ಮೇ 28ರ ವರೆಗಿನ ಎಲ್ಲ ಕ್ರಿಕೆಟ್‌ ಪಂದ್ಯಗಳನ್ನು ರದ್ದುಗೊಳಿಸಿದ್ದ ರಿಂದ ಪೂಜಾರ ಆಡುತ್ತಿಲ್ಲ.
ಕೋವಿಡ್ 19ದಿಂದ ಸದ್ಯ ಮೇ ಅಂತ್ಯದವರೆಗೆ ಕ್ರಿಕೆಟ್‌ ಆಟ ರದ್ದುಗೊಂಡಿದೆ. ಆದರೆ ಇದು ಮುಂದುವರಿಯುವ ಸಾಧ್ಯತೆ ಬಲವಾಗಿದೆ. ಹೀಗಾಗಿ ಪೂಜಾರ ಅವರ ಆಟವನ್ನು ನೋಡುವ ಅವಕಾಶದಿಂದ ವಂಚಿತರಾಗಿದ್ದೇವೆ ಎಂದು ಕ್ಲಬ್‌ನ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next