Advertisement

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

11:27 PM May 25, 2022 | Team Udayavani |

ಚೆನ್ನೈ: ಯುವ ಗ್ರ್ಯಾನ್‌ಮಾಸ್ಟರ್‌ ಆರ್‌. ಪ್ರಗ್ನಾನಂದ ನೆದರ್ಲೆಂಡ್ಸ್‌ನ ಗ್ರ್ಯಾನ್‌ಮಾಸ್ಟರ್‌ ಅನೀಶ್‌ ಗಿರಿ ಅವರನ್ನು ಕಠಿನ ಹೋರಾಟ ದಲ್ಲಿ ಕೆಡಹಿ ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌ ಟೂರ್‌ ಚೆಸೇಬಲ್‌ ಮಾಸ್ಟರ್ ಕೂಟದ ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಭಾರತೀಯ ಚೆಸ್‌ ತಾರೆ ತನ ಗಿಂತ ಉನ್ನತ ರ್‍ಯಾಂಕಿನ ಗಿರಿ ಅವ ರನ್ನು 3.5-2.5 ಅಂಕಗಳಿಂದ ಉರುಳಿಸಿ ಆಘಾತಗೊಳಿಸಿದರು. ನಾಲ್ಕು ಪಂದ್ಯಗಳ ರ್ಯಾಪಿಡ್‌ ಆನ್‌ಲೈನ್‌ ಸೆಮಿಫೈನಲ್‌ ಪಂದ್ಯ 2-2 ಸಮಬಲ ಗೊಂಡ ಬಳಿಕ ಟೈಬ್ರೇಕರ್‌ನಲ್ಲಿ ಪ್ರಗ್ನಾನಂದ ಅಮೋಘವಾಗಿ ಆಡಿ ಗಿರಿ ಅವರನ್ನು ಸೋಲಿಸಲು ಯಶಸ್ವಿಯಾದರು.

ಪ್ರಶಸ್ತಿ ಸುತ್ತಿನಲ್ಲಿ ಪ್ರಗ್ನಾನಂದ ವಿಶ್ವದ ಎರಡನೇ ರ್‍ಯಾಂಕಿನ ಚೀನದ ಡಿಂಗ್‌ ಲಿರೆನ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಲಿರೆನ್‌ ಇನ್ನೊಂದು ಸೆಮಿಫೈನಲ್‌ ಹೋರಾಟದಲ್ಲಿ ವಿಶ್ವದ ನಂಬರ್‌ ವನ್‌ ಮ್ಯಾಗ್ನಸ್‌ ಕಾರ್ಲ್ಸನ್‌ ಅವರನ್ನು 2.5-1.5 ಅಂಕಗಳಿಂದ ಸೋಲಿಸಿದ್ದರು.

ಪ್ರಗ್ನಾನಂದ ಮತ್ತು ಗಿರಿ ನಡುವೆ ನಡೆದ ಸೆಮಿಫೈನಲ್‌ ಹೋರಾಟದ ಮೊದಲ ಪಂದ್ಯ ನೀರಸವಾಗಿ ಡ್ರಾ ಗೊಂಡಿತ್ತು. ಆದರೆ ದ್ವಿತೀಯ ಪಂದ್ಯ ದಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿದ ಪ್ರಗ್ನಾನಂದ ಜಯ ಸಾಧಿ ಸಿದರು. ಇದು ಗಿರಿ ಅವರಿಗೆ ಈ ಕೂಟದ ಮೊದಲ ಸೋಲು ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next