Advertisement
ಅರ್ಜುನ್ ಎರಿಗೇಸಿ, ಡಿ. ಗುಕೇಶ್, ಆರ್. ಪ್ರಜ್ಞಾನಂದ, ಪಿ. ಹರಿಕೃಷ್ಣ ಮತ್ತು ಶ್ರೀನಾಥ್ ನಾರಾಯಣನ್ (ನಾಯಕ) ಅವರಿದ್ದ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚೊಚ್ಚಲ ಬಂಗಾರ ಜಯಿಸಿತು. ಬಳಿಕ ದ್ರೋಣವಲ್ಲಿ ಹರಿಕಾ, ದಿವ್ಯಾ ದೇಶ್‌ಮುಖ್, ಆರ್. ವೈಶಾಲಿ ಮತ್ತು ವಂತಿಕಾ ಅಗರ್ವಾಲ್ ಅವರಿದ್ದ ಮಹಿಳಾ ತಂಡವೂ ಚಿನ್ನಕ್ಕೆ ಕೊರಳೊಡ್ಡಿತು. ಪುರುಷರ ತಂಡ ಸ್ಲೊವೇ ನಿಯಾ ವಿರುದ್ಧ ಗೆಲುವು ದಾಖಲಿಸಿತು. ಮಹಿಳಾ ತಂಡ ಅಜರ್‌ಬೈಜಾನ್ ವಿರುದ್ಧ 3.5-0.5ರಿಂದ ಗೆದ್ದು ಬೀಗಿತು.
Related Articles
Advertisement
10ನೇ ಸುತ್ತಿನಲ್ಲಿ ಭಾರತದ ಪುರುಷರ ತಂಡ ಬಲಿಷ್ಠ ಅಮೆರಿಕ ವಿರುದ್ಧ 2.5-1.5 ಅಂತರದಿಂದ ಜಯಿಸಿತು. ಮುಕ್ತ ವಿಭಾಗದಲ್ಲಿ ಅಮೆರಿಕದ ತಾರೆ ಫ್ಯಾಬಿಯಾನೊ ಕರುವಾನ ಎದುರು ಡಿ. ಗುಕೇಶ್ 1-0 ಅಂತರದಿಂದ ಗೆದ್ದು ಗಮನ ಸೆಳೆದರು.
ಇದಕ್ಕೂ ಮುನ್ನ, 2020ರ ಕೋವಿಡ್ ಅವಧಿಯಲ್ಲಿ ನಡೆದ ವರ್ಚುವಲ್ ಒಲಿಂಪಿಯಾಡ್ ಚೆಸ್ ಸ್ಪರ್ಧೆಯಲ್ಲಿ ಭಾರತ-ರಷ್ಯಾ ಚಿನ್ನ ಹಂಚಿಕೊಂಡಿದ್ದವು. 2022 (ಚೆನ್ನೈ) ಮತ್ತು 2014ರ (ನಾರ್ವೆ) ಸ್ಪರ್ಧೆಗಳಲ್ಲಿ ಕಂಚು ಗೆದ್ದ ಸಾಧನೆ ಭಾರತದ್ದಾಗಿತ್ತು.