Advertisement
ಅವ್ಯವಸ್ಥಿತ ನಗರವಾಗಿದ್ದ ಚೆರ್ಕಳ ಪೇಟೆ ಸಮಸ್ಯೆಗಳ ಆಗರವಾಗಿದ್ದ ಸಂದರ್ಭದಲ್ಲಿ ಜನರ ಸತತ ಬೇಡಿಕೆಗೆ ಪ್ರತಿಫಲವೆಂಬಂತೆ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಿಸಲಾಯಿತು. ಮಾತ್ರವಲ್ಲದೆ ಪೇಟೆಯ ಹೃದಯಭಾಗದಲ್ಲಿ ಟ್ರಾಫಿಕ್ ವೃತ್ತ ಹಾಗೂ ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ವಾಹನ ನಿಲುಗಡೆಗೊಳಿಸಲು ಅನುವಾಗುವಂತೆ ಹಿರಿದಾದ ವೃತ್ತವೊಂದನ್ನು ನಿರ್ಮಿಸಲಾಯಿತು. ಆದರೆ ಅನುಕೂಲಕ್ಕಾಗಿ ನಿರ್ಮಿಸಿದ ವೃತ್ತ ನಿರ್ಮಾಣ ಹಂತದಲ್ಲಿಯೇ ವಾಹನ ಚಾಲಕರ ಹಾಗೂ ಪ್ರಯಾಣಿಕರ ವಿರೋಧಕ್ಕೆ ಕಾರಣವಾಗಿತ್ತು.
ಇತ್ತೀಚೆಗೆ ಕಾಸರಗೋಡಿಗೆ ಆಗಮಿಸಿದ ಸಚಿವ ಜಿ.ಸುಧಾಕರನ್ ವೃತ್ತದ ಕಾಮಗಾರಿ ಪುನರಾರಂಭಿಸುವಂತೆ ಸೂಚಿಸಿದ್ದಾರೆ. ಇದಕ್ಕಾಗಿ 75 ಲಕ್ಷ ರೂ. ಮೊತ್ತವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೊತ್ತ ಬಿಡುಗಡೆಯಾದಲ್ಲಿ ಈ ಆರ್ಥಿಕ ವರ್ಷದಲ್ಲಿಯೇ ವೃತ್ತದ ಪುನರ್‌ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
-ಎನ್.ಎ. ನೆಲ್ಲಿಕುನ್ನು, ಕಾಸರಗೋಡು ಶಾಸಕ