Advertisement
ಸ್ನೇಹಿತರಾದ ವರುಣ್ ನಾಯರ್ ಮತ್ತು ಆದಿತ್ಯ ವಿಕ್ರಮ್ ಅವರ ಈ ಸ್ಟಾರ್ಟ್‌ಪ್ ಜುಲೈ 11ರಿಂದ ಕಾರ್ಯಾರಂಭಿಸಿದ್ದು, ಇದನ್ನು ಕಾಲೇಜು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಆರಂಭವಾದ ಈ ಸ್ಟಾರ್ಟಪ್ ಆಗಲೇ 18,000 ಅಧಿಕೃತ ರಕ್ತದಾನಿಗಳನ್ನು ಹೊಂದಿದೆ. ಈ ವರೆಗೆ ಸುಮಾರು 160ಕ್ಕೂ ಅಧಿಕ ಮಂದಿಗೆ ಕಾಲೇಜು ಯುವಕರ ಈ ಹೊಸ ಆಲೋಚನೆ ಮರುಜೀವ ನೀಡಿದೆ. ಈ ವೆಬ್ ಸೈಟ್‌ನಲ್ಲಿ ಪ್ರದೇಶದ ಪಿನ್ ಕೋಡ್ ಹಾಕುವ ಮೂಲಕ ಪ್ರದೇಶದ ರಕ್ತದಾನಿಗಳ ದೂರವಾಣಿ ಸಂಖ್ಯೆಯನ್ನು ಪಡೆಯಬಹುದು.
Advertisement
ತನ್ನ ಮತ್ತು ಜನರ ಕಷ್ಟವನ್ನು ನೋಡಿದ್ದ ಅವರು ನಗರದ ಜನರಿಗೆ ತಮ್ಮ ಆಸುಪಾಸಿನಲ್ಲಿರುವ ಅಧಿಕೃತ ದಾನಿಗಳನ್ನು ತಲುಪಲು ಸುಲಭವಾಗಲು ವೆಬ್ ಸೈಟ್ ಅನ್ನು ಆರಂಭಿಸುವ ಚಿಂತನೆ ನಡೆಸುತ್ತಾರೆ. ತನಗೆ ಕೋಡಿಂಗ್ ಗೊತ್ತಿಲ್ಲದ ಹಿನ್ನೆಲೆ ಸುಮಾರು 128 ಗಂಟೆಗಳ ಕಲಿಕೆಯಲ್ಲಿ ಜಾವಾ, ಪೈತಾನ್ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತು ವೆಬ್ ಸೈಟ್ ರಚಿಸಿದ್ದಾರೆ ಅವರು. ಈ ಸಂದರ್ಭದಲ್ಲಿ ಅವರ ಸಹಾಯಕ್ಕೆ ಬಂದ ಕಂಪ್ಯೂರ್ಟ ಸೈನ್ಸ್ ಎಂಜಿನಿಯರಿಂಗ್ ಕಲಿಯುತ್ತಿರುವ ಸ್ನೇಹಿತ ಆದಿತ್ಯ ವಿಕ್ರಮ್ ಅವರು ವೆಬ್ ಸೈಟ್ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವಂತೆ ಮಾಡುವಲ್ಲಿ ಕೈಜೋಡಿಸಿದ್ದರು.
ಮೊದಮೊದಲು ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳು ಅಧಿಕೃತವಾಗಿರುವಂತೆ ನೋಡಿಕೊಳ್ಳಲು ಎಲ್ಲ ನೋಂದಣಿ ಮಾಡಿಕೊಂಡಿದ್ದ ದಾನಿಗಳಿಗೆ ಕರೆ ಮಾಡಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಬಳಿಕ ಈ ಕೆಲಸ ಸುಲಭ ಮಾಡಲು ಸಾಫ್ಟ್ ವೇರ್ ಕಂಡುಹಿಡಿದಿದ್ದಾರೆ. ಸದ್ಯ ಈ ವೆಬ್‌ಸೈಟ್‌ನಲ್ಲಿ ನಗರದ ಸುಮಾರು 4,000 ರಕ್ತದಾನಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಕಾಲೇಜು ರಾತ್ರಿ ಕೆಲಸ
ಸದ್ಯ ಈ ತಂಡದಲ್ಲಿ ಸುಮಾರು 30 ಮಂದಿ ಕಾಲೇಜು ವಿದ್ಯಾರ್ಥಿಗಳಿದ್ದು, ಪ್ರತಿದಿನ ಕಾಲೇಜು ಮುಗಿದ ಬಳಿಕ ರಾತ್ರಿ ಸುಮಾರು 2-3 ಗಂಟೆಗಳ ಕಾಲ ಕೆಲಸಮಾಡಿ ವೆಬ್‌ಸೈಟ್‌ನನ್ನು ಸಕ್ರಿಯವಾಗಿಡಲಾಗಿದೆ ಎನ್ನುತ್ತಾರೆ ಸಹಸಂಸ್ಥಾಪಕ ಆದಿತ್ಯ ವಿಕ್ರಮ್ ತಂಡ ಇನ್‌ಸ್ಟಾಗ್ರಾಮ್ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೂಲಕ ದಾನಿಗಳು ಮತ್ತು ರಕ್ತದ ಆವಶ್ಯಕತೆ ಇರುವವರನ್ನು ತಲುಪುತ್ತಿದೆ. ಸದ್ಯ ಈ ವೆಬ್ ಸೈಟ್ ತಮಿಳುನಾಡು ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದವರು ಹೇಳಿದ್ದಾರೆ.
*ಜಯಶಂಕರ್