Advertisement
ಪುಣೆಯಲ್ಲಿ 2018ರಿಂದ ಮಹಾರಾಷ್ಟ್ರ ಓಪನ್ ನಡೆಯಲಿದೆ. ಇದನ್ನು ಕೂಟದ ಸಂಘಟಕರಾದ ಐಎಂಜಿ-ರಿಲೈಯನ್ಸ್ ಹಾಗೂ ಮಹಾರಾಷ್ಟ್ರ ಲಾನ್ ಟೆನಿಸ್ ಸಂಸ್ಥೆ ಶುಕ್ರವಾರ ಘೋಷಿಸಿದವು. ವಿಶ್ವ ಮಟ್ಟದ ಕೂಟವನ್ನು ನಮ್ಮಲ್ಲಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಪ್ರತಿ ವರ್ಷವೂ ಹೊಸ ರೀತಿಯಲ್ಲಿ ಕೂಟವನ್ನು ನಡೆಸಿಕೊಂಡು ಹೋಗುವ ವಿಶ್ವಾಸವಿದೆ. ಚೆನ್ನೈ ಓಪನ್ ಕೂಟಕ್ಕೆ ಹೊಸ ದಿಕ್ಕು ನೀಡಿದ ತಮಿಳುನಾಡು ಸರ್ಕಾರಕ್ಕೆ, ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.