Advertisement

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

11:16 PM Jan 08, 2025 | Team Udayavani |

ಸಿಡ್ನಿ: ಭಾರತದೆದುರಿನ ಸರಣಿಯಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ ಆಸ್ಟ್ರೇಲಿಯದ ಯುವ ಆರಂಭಕಾರ ಸ್ಯಾಮ್‌ ಕೋನ್‌ಸ್ಟಾಸ್‌ ಅನಗತ್ಯ ಕಾರಣಗಳಿಂದ ಸುದ್ದಿಯಾದದ್ದೇ ಹೆಚ್ಚು. ಮುಖ್ಯವಾಗಿ ಜಸ್‌ಪ್ರೀತ್‌ ಬುಮ್ರಾ ಜತೆಗಿನ ಅನಗತ್ಯ ವಾಗ್ವಾದ ಅತಿರೇಕಕ್ಕೆ ಹೋಗಿತ್ತು. ಮೊದಲ ಪಂದ್ಯದಲ್ಲೇ ಇಷ್ಟೊಂದು ಸೊಕ್ಕು ಇರಬೇಕಾದರೆ ಮುಂದೆ ಹೇಗೆ ಎಂದು ಎಲ್ಲರೂ ಪ್ರಶ್ನಿಸುವ ರೀತಿಯಲ್ಲಿತ್ತು ಅವರ ವರ್ತನೆ.

Advertisement

ಇದಕ್ಕೀಗ ಸ್ಯಾಮ್‌ ಕೋನ್‌ಸ್ಟಾಸ್‌ ವಿಷಾದ ವ್ಯಕ್ತಪಡಿಸಿದ್ದಾರೆ. ಇಂಥ ಸನ್ನಿವೇಶ ಮುಂದೆ ಎಲ್ಲಾ ದರೂ ಎದುರಾದರೆ ನಾನು ಕೆದ ಕಲು ಹೋಗುವುದಿಲ್ಲ, ಬುಮ್ರಾ ಬಳಿ ಏನನ್ನೂ ಹೇಳದೆ ಸುಮ್ಮನಿದ್ದು ಬಿಡುತ್ತೇನೆ ಎಂದು ಹೇಳಿದ್ದಾರೆ.

“ಈ ಸರಣಿಯಿಂದ ನಾನು ಒಳ್ಳೆಯ ಪಾಠ ಕಲಿತೆ. ಬುಮ್ರಾ ಘಟನೆಗೆ ಸಂಬಂಧಿಸಿ ಹೇಳುವುದಾದರೆ, ಸಮಯವನ್ನು ವ್ಯರ್ಥ ಗೊಳಿಸುವುದು ನನ್ನ ಉದ್ದೇಶವಾಗಿತ್ತು. ಕೊನೆಯ ಹಂತ ದಲ್ಲಿ ಇನ್ನೊಂದು ಓವರ್‌ ಬೇಡ ವಾಗಿತ್ತು. ಆದರೆ ಬುಮ್ರಾ ಕೊನೆ ಯಲ್ಲಿ ಯಶಸ್ಸು ಗಳಿಸಿದರು. ಅವರೋರ್ವ ವಿಶ್ವ ದರ್ಜೆಯ ಬೌಲರ್‌ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದರು.

ನಾವೆಲ್ಲ ಕೊಹ್ಲಿ ಫ್ಯಾನ್ಸ್‌
ಇದಕ್ಕೂ ಮುನ್ನ ಬಾಕ್ಸಿಂಗ್‌ ಡೇ ಟೆಸ್ಟ್‌ ವೇಳೆ ಕೊಹ್ಲಿ ಕೋನ್‌ಸ್ಟಾಸ್‌ಗೆ ಭುಜದಿಂದ ಢಿಕ್ಕಿ ಹೊಡೆದು ದಂಡನೆಗೆ ಒಳಗಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಆಸೀಸ್‌ ಆರಂಭ ಕಾರ, “ಈ ಘಟನೆ ಬಳಿಕ ಕೊಹ್ಲಿ ಬಳಿ ಹೋಗಿ ಮಾತಾಡಿ ದ್ದೇನೆ. ಕೊಹ್ಲಿ ವಿರುದ್ಧ ಆಡುವುದು ನನಗೆ ಸಂದ ಗೌರವ. ನಮ್ಮ ಮನೆ ಯವರೆಲ್ಲರೂ ಕೊಹ್ಲಿ ಫ್ಯಾನ್ಸ್‌. ಅವರು ನನಗೆ ಶುಭ ಹಾರೈಸಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next