Advertisement

Chenab; ಆ.15ಕ್ಕೆ ಅತೀ ಎತ್ತರದ ರೈಲು ಸೇತುವೆ ಲೋಕಾರ್ಪಣೆ: ವಿಶೇಷತೆಗಳೇನು?

12:54 AM Jul 20, 2024 | Team Udayavani |

ಶ್ರೀನಗರ: ವಿಶ್ವದ ಅತ್ಯಂತ ಎತ್ತರದ ಉಕ್ಕಿನ ಕಮಾನು ಚೆನಾಬ್‌ ರೈಲ್ವೇ ಸೇತುವೆ(Chenab Rail Bridge) ಆ.15ಕ್ಕೆ ಲೋಕಾರ್ಪಣೆ ಗೊಳ್ಳಲಿದೆ.ಜಮ್ಮುವಿನ(Jammu and Kashmir) ರಿಯಾಸಿ ಯಿಂದ ಕಾಶ್ಮೀರದ ಸಂಗಲ್ದಾನ್‌ಗೆ ರೈಲು ಸಂಚಾರವೂ ಶುರುವಾಗಲಿದೆ.

Advertisement

ಈ ಭಾಗದಲ್ಲಿ ರೈಲು ಸಂಚಾರ ಶುರುವಾದರೆ ಶ್ರೀನಗರ- ಉಧಂಪುರ ನಡುವಿನ 277 ಕಿ.ಮೀ.ದೂರದ ಪೈಕಿ 255 ಕಿ.ಮೀ.ದೂರದ ನಡುವೆ ರೈಲು ಸಂಚಾರ ಶುರುವಾದಂತಾಗಲಿದೆ. ಚೆನಾಬ್‌ ನದಿ ಮಟ್ಟದಿಂದ 359 ಮೀಟರ್‌ ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಈ ಮೂಲಕ ಐಫೆಲ್‌ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿರುವ ರಚನೆ ಎಂಬ ಖ್ಯಾತಿ ಗೂ ಪಾತ್ರವಾಗಿದೆ. ಕಳೆದ ತಿಂಗಳು ಸೇತುವೆ ಮೇಲೆ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.

ವಿಶೇಷತೆಗಳು
1.3 ಕಿಮೀ ಉದ್ದದ ಚೆನಾಬ್‌ ರೈಲ್ವೇ ಸೇತುವೆ
ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣ
ನಿರ್ಮಾಣಕ್ಕೆ 25,0000 ಟನ್‌ ಉಕ್ಕು ಬಳಕೆ
ಗಂಟೆಗೆ 260 ಕಿ.ಮೀ. ಗಾಳಿ ತಡೆವ ಸಾಮರ್ಥ್ಯ
ಐಫೆಲ್‌ ಟವರ್‌ಗಿಂತಲೂ 35 ಮೀಟರ್‌ ಎತ್ತರ

Advertisement

Udayavani is now on Telegram. Click here to join our channel and stay updated with the latest news.

Next