Advertisement

Daily Horoscope: ಉದ್ಯೋಗದಲ್ಲಿ ವಿಶೇಷ ಅವಕಾಶಗಳು ಮತ್ತು ಜವಾಬ್ದಾರಿಗಳು

07:41 AM Aug 31, 2024 | Team Udayavani |

ಮೇಷ: ವಾರಾಂತ್ಯದ ಮೊದಲೇ ಕೆಲಸ ಮುಗಿಸುವ ತರಾತುರಿ. ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ. ಎಣಿಸಿದ ವೇಗದಲ್ಲಿ ಕಾರ್ಯ ಮುಗಿಸಲು ಎಲ್ಲರ ಸಹಕಾರ. ಊರಿನಿಂದ ಬಂದ ನೆಂಟರ ಜೊತೆಯಲ್ಲಿ ದೇವಾಲಯ ದರ್ಶನ.

Advertisement

ವೃಷಭ: ಹಲವು ಬಗೆಯ ಸಂಪಾದನಾ ಮಾರ್ಗಗಳಲ್ಲಿ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಸಹಕಾರ ವೃದ್ಧಿಗೆ ವಿಶೇಷ ಬಳಗ ನಿರ್ಮಾಣ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ.

ಮಿಥುನ:ಉದ್ಯೋಗದಲ್ಲಿ ವಿಶೇಷ ಅವಕಾಶಗಳು ಮತ್ತು ಜವಾಬ್ದಾರಿಗಳು. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ. ಪಿತ್ರಾರ್ಜಿತ ಆಸ್ತಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ ಪ್ರೀತಿ, ಸಾಮರಸ್ಯ ವೃದ್ಧಿ.

ಕರ್ಕಾಟಕ: ಪರಿಸರದ ಪ್ರಭಾವದಿಂದ ಮನಸ್ಸು ಮಲಿನವಾಗದಿರಲಿ. ಉದ್ಯೋಗ ಸ್ಥಾನದಲ್ಲಿ ಆಮಿಷಗಳ ಬಗೆಗೆ ಎಚ್ಚರ. ಹಿರಿಯರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ದೇವತಾರಾಧನೆ, ಸತ್ಸಂಗಗಳ ಕಡೆಗೆ ಸೆಳೆತ.

ಸಿಂಹ: ಸಪ್ತಾಹ ಕೊನೆಯಾಗುತ್ತಿದ್ದಂತೆ ಕಾರ್ಯ ಮುಗಿಸುವ ಆತುರ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್‌ ಕೆಲಸಗಾರರಿಗೆ ಕೈತುಂಬಾ ಕೆಲಸ.

Advertisement

ಕನ್ಯಾ: ದಿನವೂ ಹೊಸ ಅನುಭವಗಳಿಂದ ವೃದ್ಧಿಯಾದ ಜೀವನಾಸಕ್ತಿ. ಇಲೆಕ್ಟ್ರಾನಿಕ್ಸ್‌, ಇಲೆಕ್ಟ್ರಿಕಲ್ಸ… ವ್ಯಾಪಾರ ವೃದ್ಧಿ. ವೃತ್ತಿ ಪರಿಣತಿ ಹೆಚ್ಚಿಸಿ ಕೊಳ್ಳಲು ನುರಿತವರ ಮಾರ್ಗದರ್ಶನ. ವರಾನ್ವೇಷಣೆ ಯಲ್ಲಿ ಯಶಸ್ವಿಯಾದ ಸಮಾಧಾನ.

ತುಲಾ: ನಿರಂತರ ಸಾಧನೆಯಿಂದ ಸಾಧಿಸಿದ ಚಿತ್ತಸ್ಥೈರ್ಯ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ಮೂಡಿಸುವ ವಾತಾವರಣ. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ.

ವೃಶ್ಚಿಕ: ಸಪ್ತಾಹದ ಕೊನೆಯಲ್ಲಿ ನಿಶ್ಚಿಂತೆಯಿಂದ ಕಾರ್ಯಪ್ರವೃತ್ತರಾಗುವ ಅವಕಾಶ. ಉದ್ಯೋಗಸ್ಥರಿಗೆ ಹರ್ಷದ ಸನ್ನಿವೇಶ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಸಂಗೀತ ಶ್ರವಣದಲ್ಲಿ ಆಸಕ್ತಿ.

ಧನು: ನಿಮ್ಮ ಕ್ರಿಯಾಶೀಲತೆಗೆ ಸವಾಲಾಗುವಷ್ಟು ಕೆಲಸಗಳ ಹೊರೆ. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಯಥೋಚಿತ ಮಾರ್ಗದರ್ಶನ. ಮನೆಯಲ್ಲಿ ಇಷ್ಟದೇವತಾರ್ಚನೆ.

ಮಕರ: ಏಕಕಾಲದಲ್ಲಿ ಸಂಸಾರ, ಉದ್ಯೋಗ ಇವೆರಡರ ನಿರ್ವಹಣೆಯ ಸವಾಲು. ಸಹೋದ್ಯೋಗಿಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಕಾರ್ಯರಂಗದ ಕರೆಗಳಿಗೆ ಸ್ಪಂದನ. ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ಉದ್ಯೋಗಾಸಕ್ತರಿಗೆ ಮಾರ್ಗದರ್ಶನ.

ಮೀನ: ವಾರದ ಅಂತ್ಯದ ದಿನ ಕೆಲಸಗಳ ಒತ್ತಡ. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದುವರಿಕೆ. ನಿರ್ಮಾಣ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ. ಮಕ್ಕಳಿಗೆ ಧಾರ್ಮಿಕ ವಿಧಿಗಳಲ್ಲಿ ಶಿಕ್ಷಣ ನೀಡುವ ಕ್ರಮಗಳ ಶುಭಾರಂಭ.

Advertisement

Udayavani is now on Telegram. Click here to join our channel and stay updated with the latest news.