Advertisement

Daily Horoscope: ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ, ನಿರೀಕ್ಷಿತ ಆರ್ಥಿಕ ನೆರವು

06:47 PM Aug 14, 2024 | Team Udayavani |

ಮೇಷ: ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸದಿಂದ ತಾತ್ಕಾಲಿಕ ತೊಂದರೆ. ದೈವಾನುಗ್ರಹದಿಂದ ಅನಾರೋಗ್ಯ ನಿವಾರಣೆ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ.

Advertisement

ವೃಷಭ: ಸತ್ಕಾರ್ಯಗಳಿಗೆ ಪ್ರೇರಣೆ. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆಗಳು. ವ್ಯವಹಾರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ಮೊದಲಾದ ವಸ್ತುಗಳ ವ್ಯಾಪಾರಿಗಳಿಗೆ ಶುಭ ಸೂಚನೆ.

ಮಿಥುನ: ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ. ಕ್ಷಣಿಕ ಅನಾರೋಗ್ಯಕ್ಕೆ ಹೆದರುವುದು ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ.ಮನೆಯಲ್ಲಿ ಸಮಾಧಾನದ ವಾತಾವರಣ.

ಕರ್ಕಾಟಕ: ವ್ಯವಹಾರ ರಂಗದಲ್ಲಿ ವೇಗದ ಓಟಕ್ಕೆ ಪ್ರಯತ್ನ. ನಿರೀಕ್ಷಿತ ನೆರವು ವಿಳಂಬವಾದರೂ ಮುನ್ನಡೆ ಅಬಾಧಿತ. ಗೃಹಿಣಿಯರ ಆರ್ಥಿಕ ಸ್ವಾವ ಲಂಬನೆ ಪ್ರಯತ್ನದಲ್ಲಿ ಮುನ್ನಡೆ. ಮಕ್ಕಳ ವ್ಯಾಸಂಗಕ್ಕೆ ವಿಶೇಷ ಉತ್ತೇಜನ ಅವಶ್ಯ.

ಸಿಂಹ: ಕಾರ್ಯಸಾಧನೆಯಲ್ಲಿ ಅನೂಹ್ಯ ಮುನ್ನಡೆ. ಕಾರ್ಯರಂಗದ ವಿಸ್ತರಣೆಗೆ ಆಹ್ವಾನ. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ.ಹಿರಿಯರ ಯೋಗ ಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ.ಮಕ್ಕಳಿಂದ ಸಂತಸ.

Advertisement

ಕನ್ಯಾ: ಕುಲದೇವರ ದರ್ಶನದಿಂದ ದೀರ್ಘ‌ ಕಾಲೀನ ಸಮಸ್ಯೆ ನಿವಾರಣೆ.ಸಣ್ಣ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಮಾನಸಿಕ ಸಮಸ್ಯೆ ಸಂತ್ರಸ್ತರ ಪಾಲಕರಿಗೆ ಶುಭ ಸಮಾಚಾರ.

ತುಲಾ: ಸಾಂಸಾರಿಕ ಸುಖ ವೃದ್ಧಿ. ಭಗವತ್‌ ಕೈಂಕರ್ಯದಿಂದ ಜೀವನ ಯಾತ್ರೆಯ ಎಡರು ತೊಡರುಗಳ ನಿವಾರಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ದೂರದಲ್ಲಿರುವ ಮಿತ್ರರಿಂದ ಅಮೂಲ್ಯ ಸಲಹೆ.

ವೃಶ್ಚಿಕ: ಅಪರೂಪದ ಕಾರ್ಯಕ್ರಮದಲ್ಲಿ ಭಾಗಿ ಯಾಗುವ ಅವಕಾಶ. ಸ್ವತಂತ್ರ ವ್ಯವಹಾರಸ್ಥರಿಗೆ ಅನುಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ. ವಿದೇಶದಲ್ಲಿರುವ ಪುತ್ರನಿಗೆ ಪದೋನ್ನತಿ.

ಧನು: ಆಪ್ತವರ್ಗದವರ ಕೌಟುಂಬಿಕ ಸಮಸ್ಯೆ ಪರಿಹರಿಸಲು ಸಹಾಯ. ಧಾರ್ಮಿಕ ಕ್ಷೇತ್ರದಲ್ಲಿ ಗೌರವ. ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಕೃಷ್ಯುತ್ಪನ್ನ ಮಾರಾ ಟದಿಂದ ಸಾಮಾನ್ಯ ಆದಾಯ.

ಮಕರ: ದೈನಂದಿನ ತರಾತುರಿಗೆ ವಿರಾಮ.ಸಾಂಸಾರಿಕ ಕ್ಷೇತ್ರದಲ್ಲಿ ಹರ್ಷದ ವಾತಾವರಣ. ಅನುಭವ ಇರುವ ಕೆಲಸವೊಂದನ್ನು ವಹಿಸಿಕೊಳ್ಳಲು ಆಹ್ವಾನ. ವಾಹನ ದುರಸ್ತಿ ಕೆಲಸಗಾರರಿಗೆ, ತಾಯಿಯ ಆರೋಗ್ಯ ಸುಧಾರಣೆ.

ಕುಂಭ: ಏಳೂವರೆ ಶನಿಯ ಪ್ರಭಾವದಿಂದ ಕೊಂಚ ಕಿರಿಕಿರಿ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಆಯ್ದ ವ್ಯಾಪಾರಿಗಳಿಗೆ ಬೇಡಿಕೆಗೆ ಸ್ಪಂದಿಸುವ ಸವಾಲು. ದೂರದಲ್ಲಿರುವ ಬಂಧುಗಳ ಆಗಮನ. ಆಪ್ತವರ್ಗದಲ್ಲಿ ಶುಭಕಾರ್ಯಕ್ಕೆ ನೆರವು.

ಮೀನ: ಉದ್ಯೋಗಸ್ಥರಿಗೆ ವಿರಾಮ. ಸಾಮಾಜಿಕ ರಂಗದಿಂದ ಒತ್ತಡ. ಪೂರ್ವದಿಕ್ಕಿಗೆ ಪ್ರಯಾಣದ ಸಾಧ್ಯತೆ. ಹೊಸ ವ್ಯವಹಾರ ಆರಂಭಿಸುವ ಕುರಿತು ಮಾತುಕತೆ. ಸ್ವಂತ ವ್ಯವಹಾರಸ್ಥರಿಂದ ನಾಳೆಯ ಕೆಲಸಗಳ ಸಿದ್ಧತೆ.

Advertisement

Udayavani is now on Telegram. Click here to join our channel and stay updated with the latest news.

Next