Advertisement

Daily Horoscope: ಮಕ್ಕಳ ಆರೋಗ್ಯದಲ್ಲಿ ಏರುಪೇರು, ತಾತ್ಕಾಲಿಕ ವಿಘ್ನಗಳಿಂದ ಬಿಡುಗಡೆ

07:24 AM Aug 30, 2024 | Team Udayavani |

ಮೇಷ:ಯಾವುದಕ್ಕೂ ಅವಸರ ಪಡಬೇಡಿ. ಹೊಸ ವಿಭಾಗದಲ್ಲಿ ಜವಾಬ್ದಾರಿ. ಉದ್ಯಮಿಗಳಿಗೆ ಕೊಂಚ ನಷ್ಟದ ಅನುಭವ. ದಂಪತಿಗಳ ನಡುವಿನ ವಿರಸ ಮುಕ್ತಾಯ. ಮಂಗಲ ಕಾರ್ಯದ ನಿಮಿತ್ತ ದೂರ ಪ್ರಯಾಣ.

Advertisement

ವೃಷಭ:ಹಾಕಿಕೊಂಡ ಯೋಜನೆಗಳಲ್ಲಿ ಕೊಂಚ ವ್ಯತ್ಯಾಸ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ರಾಜಕಾರಣಿಗಳ ಸ್ವತ್ಛಂದಕ್ಕೆ ಕಡಿವಾಣ ಬೀಳುವ ಸಾಧ್ಯತೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಫಲದ ಸೂಚನೆ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ಕೀರ್ತಿ.

ಮಿಥುನ: ನಿರುತ್ಸಾಹದಿಂದ ಬಿಡುಗಡೆ. ಹಿರಿಯ ರಾಜಕಾರಣಿಯ ಹಠಾತ್‌ ಭೇಟಿ. ಆಧ್ಯಾತ್ಮಿಕ ಸಾಧನೆಯಲ್ಲಿ ಹೊಸ ಹೊಳಹು. ಸಾಹಿತ್ಯ ರಚನೆಯಲ್ಲಿ ತೊಡಗಿರುವವರಿಗೆ ನವೀನ ಕೆಲಸ. ದಾಂಪತ್ಯ ಜೀವನದಲ್ಲಿ ಸುಖಾನುಭವ.

ಕರ್ಕಾಟಕ: ವಿಷಣ್ಣ ಭಾವದಿಂದ ಹೊರಬರುವಿರಿ. ಮಕ್ಕಳಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿ. ಸೋದರಿಯ ಮನೆಯಿಂದ ಶುಭ ಸಮಾಚಾರ. ಕುಟುಂಬದ ಹಿತೈಷಿಯ ಆಗಮನ.ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಉತ್ತಮ ಲಾಭ.

ಸಿಂಹ: ಸ್ವಂತ ಉದ್ದಿಮೆದಾರರಿಗೆ ಹೊಸ ಸವಾಲುಗಳು.ಪಾಲುದಾರಿಕೆ ವ್ಯವಹಾರಸ್ಥರಿಗೆ ಮಧ್ಯಮ ಲಾಭ.ಪಾತ್ರೆ, ಗೃಹಸಾಮಗ್ರಿ ವ್ಯಾಪಾರಿಗಳಿಗೆ ಶುಭದಿನ. ಹಣದ ಬೆಳೆಗಳ ವ್ಯಾಪಾರಿಗಳಿಗೆ ಮಧ್ಯಮ ಆದಾಯ.ಹಿರಿಯ ಅಧಿಕಾರಿಗಳಿಗೆ ಅಪವಾದದ ಭೀತಿ.

Advertisement

ಕನ್ಯಾ:ಉದ್ಯೋಗದಲ್ಲಿ ಸ್ಥಿರವಾಗುವ ಪ್ರಯತ್ನ ಸಫಲ. ನೂತನ ಗೃಹ ನಿರ್ಮಾಣಕ್ಕೆ ನೀಲನಕ್ಷೆ. ಅವಿವಾಹಿತ ಹುಡುಗರಿಗೆ ಶುಭಶಕುನ. ಮನೆಯಲ್ಲಿ ದೇವತಾರಾಧನೆಯಿಂದ ಸಮಾಧಾನ.

ತುಲಾ: ಚಿತ್ತಚಾಂಚಲ್ಯದಿಂದ ಕಾರ್ಯಭಂಗ. ಮನೆಯವರ ಆರೋಗ್ಯ ಸುಧಾರಣೆ. ಉದ್ಯೋಗಸ್ಥರಿಗೆ ಹಿತಶತ್ರುಗಳ ಪೀಡೆ. ಉದ್ಯಮಿಗಳ ವ್ಯವಹಾರ ಸುಧಾರಣೆ. ವ್ಯವಹಾರ ನಿಮಿತ್ತ ಪೂರ್ವಕ್ಕೆ ಪ್ರಯಾಣ.

ವೃಶ್ಚಿಕ: ಚೇಳು ಕುಟುಕಿದಂತೆ ಮಾತಾಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ. ಬಂಧುಗಳ ನಡುವಿನ ವಿವಾದ ಸಂವಾದದಲ್ಲಿ ಪರಿಹಾರ. ಹತ್ತಿರದ ದೇವಾಲಯಕ್ಕೆ ಭೇಟಿ. ಉದ್ಯೋಗ ಅರಸುವಿಕೆ ಫಲಿಸುವ ಸೂಚನೆ.

ಧನು: ಬಂಧುಗಳಿಂದ ಅನಿರೀಕ್ಷಿತ ಸಹಾಯ. ಕುಟುಂಬದ ಯಜಮಾನರ ಆರೋಗ್ಯ ಸುಧಾ ರಣೆ. ಸಣ್ಣ ಪ್ರಮಾಣದ ವ್ಯಾಪಾರ ಕೈಗೊಳ್ಳಲು ಸಿದ್ಧತೆ. ಸಹೋದ್ಯೋಗಿಯ ಮನೆಯಲ್ಲಿ ದೇವತಾ ಕಾರ್ಯ, ಗುರು ಸಮಾನರ ಭೇಟಿಯಾಗಿ ಉಪಯುಕ್ತ ಸಲಹೆಗಳು ಲಭ್ಯ.

ಮಕರ: ಮಕ್ಕಳ ಆರೋಗ್ಯದಲ್ಲಿ ಏರುಪೇರು. ವೃತ್ತಿಪರ ಉದ್ಯೋಗಸ್ಥರಿಗೆ ಸಮಯದೊಂದಿಗೆ ಸೆಣಸಾಟ. ದೂರಪ್ರಯಾಣದ ಯೋಜನೆ ಮುಂದೂಡಿಕೆ. ಸರಕಾರಿ ಕಾರ್ಯಾಲಯಗಳಲ್ಲಿ ವಿಳಂಬ. ನ್ಯಾಯಾಲಯ ವ್ಯವಹಾರಗಳಲ್ಲಿ ಜಯ.

ಕುಂಭ: ಕಾನೂನಿನ ತೊಂದರೆಗಳಿಂದ ಮುಕ್ತಿ. ಸರಕಾರಿ ಉದ್ಯೋಗಿಗಳಿಗೆ ನೆಮ್ಮದಿಯ ಅನುಭವ.ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ- ಪೂರೈಕೆಯ ಸವಾಲು. ಸಮಾಜಸೇವಾ ಕಾರ್ಯಗಳಿಗೆ ಸಮಯ ಹೊಂದಾಣಿಕೆ.

ಮೀನ: ತಾತ್ಕಾಲಿಕ ವಿಘ್ನಗಳಿಂದ ಸುಲಭವಾಗಿ ಬಿಡುಗಡೆ. ಸುಲಭವಾಗುತ್ತಿರುವ ಉದ್ಯೋಗ ನಿರ್ವಹಣೆ. ಸೋದರಿಯ ಕುಟುಂಬದಲ್ಲಿ ಶುಭಕಾರ್ಯ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಧಾರ್ಮಿಕ ಕ್ಷೇತ್ರ ಸಂದರ್ಶನಕ್ಕಾಗಿ ಪ್ರಯಾಣ.

Advertisement

Udayavani is now on Telegram. Click here to join our channel and stay updated with the latest news.