Advertisement

Special Train: ಗಣೇಶ, ದೀಪಾವಳಿ, ದಸರಾ ಹಬ್ಬದ ಪ್ರಯುಕ್ತ 22 ವಿಶೇಷ ರೈಲು ಸಂಚಾರ

01:44 AM Sep 05, 2024 | Team Udayavani |

ಬೆಂಗಳೂರು: ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ಅಂಗವಾಗಿ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದಿಂದ ಒಟ್ಟು 22 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

Advertisement

ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸೆ.5 ರಿಂದ 7ರ ವರೆಗೆ ಬೆಂಗಳೂರು-ಕಲಬುರಗಿ ವಿಶೇಷ ರೈಲು ರಾತ್ರಿ 9.15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ನಿಲ್ದಾಣ ಪ್ರವೇಶಿಸಲಿದೆ. ಸೆ.6 ರಿಂದ 8ರಂದು ಕಲಬುರಗಿ- ಬೆಂಗಳೂರು ವಿಶೇಷ ರೈಲು ಬೆಳಗ್ಗೆ 9.35ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟ ರೈಲು ಅದೇ ದಿನ ರಾತ್ರಿ 8ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ದೀಪಾವಳಿ ಹಬ್ಬ ವಿಶೇಷ ರೈಲು:
ಅ.30 ಮತ್ತು ನ.2 ರಂದು ಮೈಸೂರು -ವಿಜಯಪುರ ಮಾರ್ಗ, ಅ.31 ಹಾಗೂ ನ.3ರಂದು ವಿಜಯಪುರ-ಮೈಸೂರು ಮಾರ್ಗ, ಅ.30 ಮತ್ತು ನ.1ರಂದು ಯಶವಂತಪುರ-ಬೆಳಗಾವಿ, ಅ.31 ಮತ್ತು ನ.3ರಂದು ಬೆಳಗಾವಿ-ಯಶವಂತಪುರ ಮಾರ್ಗವಾಗಿ ವಿಶೇಷ ರೈಲು ಸಂಚರಿಸಲಿದೆ.

ದಸರಾ ಹಬ್ಬದ ವಿಶೇಷ ರೈಲು:
ದಸರಾ ಹಬ್ಬದ ಅಂಗವಾಗಿ ಅ.9ಮತ್ತು 12ರಂದು ಎಸ್‌ಎಂವಿಟಿ-ವಿಜಯಪುರ ಮಾರ್ಗ, ಅ.10 ಮತ್ತು 13ರಂದು ವಿಜಯಪುರ- ಎಸ್‌ಎಂವಿಟಿ ಬೆಂಗಳೂರು, ಅ.9 ಮತ್ತು 12ರಂದು ಯಶವಂತಪುರ ಬೆಳಗಾವಿ, ಅ.10 ಮತ್ತು 13ರಂದು ಬೆಳಗಾವಿ-ಯಶವಂತಪುರ ಮಾರ್ಗ, ಅ.9 ರಿಂದ 13ರ ವರೆಗೆ ಮೈಸೂರು-ಕೆಎಸ್‌ಆರ್‌ ಬೆಂಗಳೂರು , ಅ.10ರಿಂದ 14ವರೆಗೆ ಕೆಎಸ್‌ಆರ್‌ ಬೆಂಗಳೂರು- ಮೈಸೂರು ಮಾರ್ಗ, ಅ.9ರಿಂದ ಅ.14ರ ವರೆಗೆ ಚಾಮರಾಜನಗರ -ಮೈಸೂರು ಮಾರ್ಗ, ಅ.10ರಿಂದ ಅ.14ರ ವರೆಗೆ ಮೈಸೂರು -ಚಾಮರಾಜನಗರ ಮಾರ್ಗವಾಗಿ ವಿಶೇಷ ರೈಲುಗಳ ಸಂಚರಿಸಲಿದೆ. ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್‌  ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.