Advertisement
ಗಿಳಿಯಾರು- ಬೇಳೂರು ಸಂಪರ್ಕಿಸುವ ಈ ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಸವಾರರಿಗೆ ಹಾಗೂ ಕಾರು ಪ್ರಯಾಣಿಕರಿಗೆ ಮೂರ್‍ನಾಲ್ಕು ದಿನಗಳಿಂದ ಚಿರತೆ ಎದುರಾಗುತ್ತಿದ್ದು ಆತಂಕಗೊಂಡು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ಅನಂತರ ಕೋಟ ಗ್ರಾ.ಪಂ. ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿಯವರು ಬ್ರಹ್ಮಾವರ ಉಪವಲಯಾರಣ್ಯಾಧಿಕಾರಿ ಜೀವನದಾಸ್ ಶೆಟ್ಟಿಯವರಿಗೆ ಸುದ್ದಿ ವಿಷಯ ತಿಳಿಸಿದ್ದು, ಅಕ್ಕಪಕ್ಕದಲ್ಲಿ ಹಲವಾರು ಮನೆಗಳು, ಶಾಲೆ ಇರುವುದರಿಂದ ಅಪಾಯವಿದ್ದು ಶೀಘ್ರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.ಬುಧವಾರ ಅರಣ್ಯ ರಕ್ಷಕಿ ಅಕ್ಷತಾ ಅವರೊಂದಿಗೆ ಸ್ಥಳಕ್ಕಾಗಮಿಸಿದ ಉಪ ವಲಯ ಅರಣ್ಯಾಧಿಕಾರಿಗಳು ಬೋನ್ ಅಳವಡಿಸಿ ಸ್ಥಳೀಯರಿಗೆ ಆತಂಕಪಡದಂತೆ ದೈರ್ಯ ತುಂಬಿದ್ದಾರೆ.
ಗಿಳಿಯಾರು ಭಾಗದಲ್ಲಿ ಚಿರತೆ ಸಂಚಾರವಿರುವ ಕುರಿತು ದೂರುಗಳು ಬಂದಿದ್ದು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಪರಿಶೀಲಿಸಿ ಬೋನ್ ಇಡುವ ವ್ಯವಸ್ಥೆ ಮಾಡಲಾಗಿದೆ.ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಇದೇ ರೀತಿ ದೂರುಗಳು ಬಂದಿದ್ದು ಎಲ್ಲ ಕಡೆಗಳಲ್ಲೂ ಬೋನ್ ಇಟ್ಟು ಚಿರತೆ ಸೆರೆಗೆ ಪ್ರಯತ್ನಿಸಲಾಗುತ್ತಿದೆ.
– ಜೀವನ್‌ದಾಸ್ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿಗಳು ಬ್ರಹ್ಮಾವರ