ಇತ್ತೀಚಿನ ವರ್ಷಗಳಲ್ಲಿ ಚಿರತೆಗಳು ಕಾಡು ಬಿಟ್ಟು ನಾಡಿಗೆ ದಾಳಿ ನಡೆಸುತ್ತಿರುವುದು ಸಾಮಾನ್ಯವಾಗಿದ್ದು ಹೀಗೆ ನಾಡಿಗೆ ಬಂದ ಚಿರತೆಗಳನ್ನು ಸೆರೆ ಹಿಡಿಯುವುದೇ ಅರಣ್ಯ ಇಲಾಖೆಗೆ ಬಲುದೊಡ್ಡ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ಹೀಗಿರುವಾಗ ವಿದೇಶದಿಂದ ಚಿರತೆ ವರ್ಗಕ್ಕೆ ಸೇರಿರುವ ಇನ್ನೊಂದು ವನ್ಯಜೀವಿಯಾಗಿರುವ ಚೀತಾವನ್ನು ಕರೆ ತಂದು ದೇಶದ ಅರಣ್ಯಕ್ಕೆ ಬಿಡಲು ಸರಕಾರ ಮುಂದಾದುದಾದರೂ ಏಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ ಈ ಚೀತಾವು ಚಿರತೆಯ ಕುಟುಂಬಕ್ಕೆ ಸೇರಿದ ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ವನ್ಯಜೀವಿಯಾಗಿದೆ. ಶತಮಾನದ ಹಿಂದೆ ದೇಶದ ಕಾಡುಗಳಲ್ಲಿ ಸ್ವತ್ಛಂದವಾಗಿದ್ದ ಚೀತಾಗಳು ವಿವಿಧ ಕಾರಣಗಳಿಂದಾಗಿ ಕಾಲಕ್ರಮೇಣ ಸಂಪೂರ್ಣ ಅಳಿದವು. ಈ ವಿಶಿಷ್ಟ ವನ್ಯಜೀವಿಯನ್ನು ದೇಶಕ್ಕೆ ಮರು ಪರಿಚಯಿಸಿ, ಅವುಗಳ ಸಂತತಿಯನ್ನು ಬೆಳೆಸಲು ಕೇಂದ್ರ ಸರಕಾರ ಹಲವಾರು ಕಾನೂನು ಹೋರಾಟಗಳ ಬಳಿಕ ಚೀತಾ ಸಂರಕ್ಷಣೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಚೀತಾದ ವಿಶೇಷತೆ ಮತ್ತು ಅದರ ಬಗೆಗಿನ ಕೆಲವೊಂದು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.
Advertisement
ಚೀತಾ: ಏನಿದರ ವಿಶೇಷ?ವಿಶ್ವದಲ್ಲೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂದೇ ಪರಿಗಣಿಸಲ್ಪಟ್ಟಿರುವ ಚೀತಾಗಳು ಕಣ್ಣು ಮಿಟುಕಿಸುವುದರೊಳಗೆ ಬೇಟೆಯಾಡಿ ಬಿಡುತ್ತವೆ. ಈ ಕಾರಣದಿಂದಾಗಿಯೇ ಚೀತಾ ಬೇಟೆಯಾಡುವ ಯಂತ್ರ ಎಂದೇ ಹೆಸರುವಾಸಿಯಾಗಿದೆ. ತಾಸಿಗೆ 120 ಕಿ.ಮೀ. ವೇಗದಲ್ಲಿ ಓಡಬಲ್ಲ ಚೀತಾಗಳು ಅತ್ಯಂತ ವೇಗದಲ್ಲಿರುವಾಗ 23 ಅಡಿಗಳಷ್ಟು (7 ಮೀಟರ್) ದೂರಕ್ಕೆ ಹಾರಬಲ್ಲವು. ಓಟದ ವೇಳೆ ಗರಿಷ್ಠ ವೇಗದಲ್ಲಿರುವಾಗ ಒಂದು ಸೆಕೆಂಡ್‌ಗೆ ಇಂಥ 4 ನೆಗೆತಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಒಹಾಯೋದ ವನ್ಯಜೀವಿಗಳ ಸಂಗ್ರಹಾಲಯದಲ್ಲಿದ್ದ ಸಾರಾ ಎನ್ನುವ ಚೀತಾ 2012ರಲ್ಲಿ ಗಂಟೆಗೆ 98 ಕಿ.ಮೀ. ವೇಗದಲ್ಲಿ ಓಡಿ ದಾಖಲೆಯನ್ನು ನಿರ್ಮಿಸಿತ್ತು. ಅದು 2016ರಲ್ಲಿ 15ನೇ ವಯಸ್ಸಿಗೆ ಸಾವನ್ನಪ್ಪಿತ್ತು. ಚೀತಾ ಒಂದು ನಿಮಿಷ ಕಾಲ ಮಾತ್ರ ಗರಿಷ್ಠ ವೇಗದಲ್ಲಿ ಓಡಬಹುದಾಗಿದ್ದು, 450 ಮೀಟರ್ ದೂರದವರೆಗೆ ಹೆಚ್ಚಿನ ವೇಗದಲ್ಲಿ ಓಡಬಲ್ಲವು. ಕೇವಲ ಮೂರು ಸೆಕೆಂಡ್‌ಗಳಲ್ಲಿ ತಾಸಿಗೆ 96 ಕಿ.ಮೀ.ಗೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ (ಫೋರ್ಡ್-ಜಿಟಿ ಸೂಪರ್ ಕಾರ್ ಮಾದರಿಯಲ್ಲಿ). ಇದೇ ವೇಳೆ ಕೇವಲ ಮೂರು ಸೆಕೆಂಡ್‌ಗಳಲ್ಲಿ ಅದು ತನ್ನ ವೇಗವನ್ನು ತಾಸಿಗೆ 96 ಕಿ.ಮೀ. ಗಳಿಂದ 23 ಕಿ.ಮೀ.ಗೆ ಕಡಿತಗೊಳಿಸಲು ಕೂಡ ಸಶಕ್ತವಾಗಿದೆ. ಇದಕ್ಕೆಲ್ಲ ಚೀತಾದ ದೇಹ ಸಂರಚನೆಯೇ ಪ್ರಮುಖ ಕಾರಣವಾಗಿದೆ.
– ಭಾರತದಲ್ಲಿ ಚೀತಾದ ಸಂತತಿ ನಾಶವಾಗಲು ಇವುಗಳ ಬೇಟೆ, ವನ್ಯಜೀವಿ ಸಂಘರ್ಷ ಪ್ರಮುಖ ಕಾರಣ.
– 1947ರಲ್ಲಿ ಭಾರತದಲ್ಲಿದ್ದ ಕೊನೆಯ ಚೀತಾವನ್ನು ಛತ್ತೀಸ್‌ಗಢದಲ್ಲಿ ಶಿಕಾರಿ ಮಾಡಲಾಯಿತು.
– 1952ರಲ್ಲಿ ಭಾರತ ಸರಕಾರವು ದೇಶದಲ್ಲಿ ಯಾವುದೇ ಚೀತಾ ಉಳಿದಿಲ್ಲ ಎಂದು ಘೋಷಣೆ ಮಾಡಿತ್ತು. ಹೇಗಿದೆ ಚೀತಾದ ದೇಹ ಸಂರಚನೆ?
- ಚೀತಾದ ಬೆನ್ನುಮೂಳೆ ಉದ್ದವಾಗಿದ್ದು, ನಮ್ಯತೆ ಯಿಂದ ಕೂಡಿದೆ. ಯಾವುದೇ ಭಂಗಿಗೂ ಇದು ಹೊಂದಿ ಕೊಳ್ಳುತ್ತದೆ. ಇದರ ಕಾಲುಗಳು ಉದ್ದ ವಾಗಿದ್ದು ಓಡುವಾಗ ಅದರ ಹಿಂದಿನ ಕಾಲುಗಳು ಮುಂದಿನ ಕಾಲುಗಳಿಗಿಂತಲೂ ಮುಂದಿರುವುದು.
- ಹೆಚ್ಚು ವೇಗವಾಗಿ ಓಡಬೇಕಾದರೆ ಉದ್ದ ವಾದ ಬೆನ್ನೆಲುಬಿನೊಂದಿಗೆ ದೇಹದ ತೂಕ ಕಡಿಮೆ ಇರುವುದು ಅತೀ ಅಗತ್ಯ. ಇದೇ ದೇಹರಚನೆಯನ್ನು ಹೊಂದಿರುವ ಚೀತಾ ಗಳಿಗೆ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವುದು ಸಾಧ್ಯವಾಗದು. ಹೀಗಾಗಿ ಅದು ಹಸಿವನ್ನು ನೀಗಿಸಿಕೊಳ್ಳಲು ಆಗಾಗ ಬೇಟೆ ಯಾಡುವುದು ಅನಿವಾರ್ಯವಾಗಿದೆ.
- ಚೀತಾದ ತಲೆ ಸಿಂಹ, ಹುಲಿ, ಚಿರತೆ, ಜಾಗ್ವಾರ್‌ಗಳ ತಲೆಗಿಂತ ಸಣ್ಣದಾಗಿರುತ್ತದೆ. ತೆಳುವಾದ ಎಲು ಬು ಗಳಿಂದ ಕೂಡಿರುವ ತಲೆಬರುಡೆಯಿಂದಾಗಿ ಚೀತಾದ ತಲೆಯ ಭಾರವು ಕಡಿಮೆ ಇರುತ್ತದೆ. ಹೀಗಾಗಿ ಇದು ಗಾಳಿಯನ್ನು ಸೀಳಿಕೊಂಡು ಹೆಚ್ಚು ವೇಗವಾಗಿ ಓಡಲು ಸಾಧ್ಯವಾಗುತ್ತದೆ.
- ಚೀತಾಗಳ ಕಿವಿಯು ಸಣ್ಣದಾಗಿದ್ದು, ಗಾಳಿಯ ಪ್ರತಿರೋಧವನ್ನು ಎದುರಿಸಬಲ್ಲದು.
- ಗರಿಷ್ಠ ವೇಗದಲ್ಲಿ ಓಡುವ ಚೀತಾದ ದೇಹದಲ್ಲಿನ ರಕ್ತದ ತಾಪಮಾನ ಅತೀ ಶೀಘ್ರದಲ್ಲೇ ಹೆಚ್ಚಾಗುತ್ತದೆ. ಗಾತ್ರದಲ್ಲಿ ಸಣ್ಣದಾಗಿರುವ ತಲೆ, ಕಿವಿ ಮತ್ತು ಮೆದು ಳಿನ ಕಾರಣದಿಂದ ರಕ್ತದ ಉಷ್ಣತೆಯು ಶೀಘ್ರದಲ್ಲಿ ತಣ್ಣ ಗಾಗು ವುದಿಲ್ಲ. ಚೀತಾದ ಮೆದುಳಿಗೆ ಈ ಶಾಖವನ್ನು ತಡೆದುಕೊಳ್ಳುವುದು ಅಸಾಧ್ಯವಾದ್ದರಿಂದ ಅವುಗಳು ಇದ್ದಕ್ಕಿದ್ದಂತೆ ಓಡುವುದನ್ನು ನಿಲ್ಲಿಸುತ್ತವೆ. ಹೀಗಾಗಿ ಚೀತಾ ಗಳಿಗೆ ಓಡುವಾಗ ಗರಿಷ್ಠ ವೇಗವನ್ನು ಕೇವಲ ಒಂದು ನಿಮಿಷ ಮಾತ್ರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
- ಚೀತಾಗಳು ಗರಿಷ್ಠ ವೇಗದಲ್ಲಿ ಓಡಲು ಸಾಕಷ್ಟು ಆಮ್ಲಜನಕದ ಅಗತ್ಯವಿರುತ್ತದೆ. ಇದನ್ನು ಪೂರೈಸಲು ಚೀತಾಗಳ ಮೂಗಿನ ಹೊಳ್ಳೆಗಳು ದೊಡ್ಡದಾಗಿದ್ದು ದಪ್ಪವಾಗಿರುತ್ತವೆ. ಹೀಗಾಗಿ ಅವುಗಳು ಕಡಿಮೆ ಬಾರಿ ಉಸಿರಾಡಿ ಹೆಚ್ಚು ಆಮ್ಲಜನಕವನ್ನು ದೇಹಕ್ಕೆ ಒದಗಿಸು ತ್ತವೆ. ಅಲ್ಲದೆ ಚೀತಾಗಳ ಹೃದಯವು ಸಿಂಹದ ಹೃದ ಯ ಕ್ಕಿಂತ ಮೂರೂವರೆ ಪಟ್ಟು ದೊಡ್ಡ ದಾಗಿ ರುತ್ತದೆ. ಓಡುವಾಗ ಸಾಕಷ್ಟು ಆಮ್ಲ ಜನಕ ಪಡೆಯು ವುದಕ್ಕೆ ಇದರಿಂದ ಸಾಧ್ಯವಾಗುತ್ತದೆ.
- ಮೂಗಿನ ದೊಡ್ಡ ಹೊಳ್ಳೆಗಳಿಗೆ ಸರಿಯಾಗಿರಲು ದವ ಡೆಯ ಮೂಲೆ ಯಲ್ಲಿ ಸಣ್ಣ ನಾಲ್ಕು ಕೋರೆ ಹಲ್ಲು ಗಳನ್ನು ಹೊಂದಿದೆ. ದವಡೆಯ ಸ್ನಾಯುಗಳು ದುರ್ಬಲ ವಾಗಿ ರುವು ದರಿಂದ ಇದಕ್ಕೆ ಸಿಕ್ಕ ಬೇಟೆ ಶೀಘ್ರ ದಲ್ಲಿ ತಪ್ಪಿಸಿ ಕೊಂಡು ಓಡಲು ಸಾಧ್ಯವಾಗುತ್ತದೆ.
- ಚೀತಾದ ಕಣ್ಣುಗಳು ನೇರವಾಗಿದ್ದು, ಅನೇಕ ಮೈಲುಗಳ ದೂರದವರೆಗೆ ಸುಲಭವಾಗಿ ನೋಡ ಬಲ್ಲವು. ಬೇಟೆ ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಇದು ಅದಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ಓಡುವಾಗಲೂ ಅದು ತನ್ನ ಬೇಟೆಯ ಮೇಲೆ ಪೂರ್ಣ ಗಮನವಿರಿಸಲು ಸಾಧ್ಯವಾಗುತ್ತದೆ.
- ಚೀತಾದ ಕಾಲುಗಳ ಉಗುರು ಬಾಗಿದ್ದು, ಬೇಟೆಯ ಮೇಲಿನ ಹಿಡಿತ ಸಾಧಿಸಲು ಪೂರಕ ವಾಗಿರುತ್ತದೆ. ಓಡುವಾಗ ಉಗುರುಗಳ ಸಹಾಯ ದಿಂದ ನೆಲದ ಮೇಲೆ ಹಿಡಿತ ಸಾಧಿಸುತ್ತದೆ. ಸುಲಭವಾಗಿ ಜಿಗಿಯಲು ಮತ್ತು ಬೇಟೆಯನ್ನು ಬಲ ವಾಗಿ ಹಿಡಿದುಕೊಳ್ಳಲು ಇದು ಸಹಕಾರಿಯಾಗಿದೆ.
- ಚೀತಾದ ಬಾಲವು 31 ಇಂಚು ಅಂದರೆ 80 ಸೆ.ಮೀ. ಉದ್ದವಿದ್ದು, ತಿರುವುಗಳಲ್ಲಿ ಸಮತೋಲನ ಸಾಧಿಸಲು ಇದು ಉಪಯುಕ್ತವಾಗಿವೆ.
- ಚೀತಾಗಳು ಸಾಮಾನ್ಯವಾಗಿ 60-70 ಮೀಟರ್ ವ್ಯಾಪ್ತಿಯಲ್ಲಿ ಬೇಟೆಯನ್ನು ಹಿಡಿಯುತ್ತವೆ. ಬೇಟೆ ಹತ್ತಿರ ಬರುವವರೆಗೆ ಅಡಗಿಕೊಳ್ಳುತ್ತದೆ. ಒಂದು ನಿಮಿಷ ದಲ್ಲಿ ಚೀತಾಗೆ ಬೇಟೆಯಾಡಲು ಸಾಧ್ಯ ವಾಗದೇ ಹೋದರೆ ಅದು ತನ್ನ ಉಗುರಿನಿಂದ ಬೇಟೆಯ ಬೆನ್ನಿನ ಮೂಳೆಗೆ ದಾಳಿ ಮಾಡಿ ಕೊಲ್ಲುತ್ತದೆ.
- ಪ್ರತೀ ದಿನ ಬೇಟೆಯಾಡುವ ಜತೆಜತೆಗೆ ತನ್ನ ಮರಿಗಳನ್ನೂ ಸುರಕ್ಷಿತವಾಗಿರಿಸುವುದು ತಾಯಿ ಚಿರತೆಯ ಜವಾಬ್ದಾರಿಯಾಗಿದೆ.
- ಗಂಡು ಚೀತಾಗಳು ತಮ್ಮದೇ ಗುಂಪು ಹೊಂದಿ ರುತ್ತವೆ. ಒಂದು ಹಿಂಡಿನಲ್ಲಿ 4-5 ಚೀತಾಗಳು ಮಾತ್ರ ಇರುತ್ತವೆ.
– ಹೆಣ್ಣು ಚೀತಾಗಳು ಸಂತತಿ ಅಭಿವೃದ್ಧಿಗಾಗಿ ಮಾತ್ರ ಗಂಡು ಚೀತಾಗಳ ಬಳಿ ತೆರಳುತ್ತವೆ. ಬಳಿಕ ಬೇರೆಯಾಗುತ್ತವೆ.
– ಶೇ. 95ರಷ್ಟು ಚೀತಾಗಳು ಪ್ರೌಢಾವಸ್ಥೆಗೆ ಬರುವ ಮುನ್ನವೇ ಸಾಯುತ್ತವೆ. 100 ಚೀತಾ ಗಳಲ್ಲಿ ಕೇವಲ 5 ಮಾತ್ರ ಬೆಳೆಯಬಲ್ಲವು. ಇತರ ಪ್ರಾಣಿಗಳು ಚೀತಾಗಳನ್ನು ಬೇಟೆ ಯಾಡುವುದು, ಮಾನವನ ಹಸ್ತಕ್ಷೇಪ ಅವುಗಳ ಸಂತತಿಯ ನಾಶಕ್ಕೆ ಮುಖ್ಯ ಕಾರಣ ಎಂದು ಗುರುತಿಸಲಾಗಿದೆ.
Related Articles
- ಚೀತಾಗಳಲ್ಲಿ ಕಣ್ಣಿನಿಂದ ಬಾಯಿಯವರೆಗೆ ಕಪ್ಪನೆಯ ಗೆರೆ ಇರುತ್ತದೆ.
- ಚೀತಾಗಳು ಗರ್ಜಿಸುವುದಿಲ್ಲ. ಬೆಕ್ಕಿನಂತೆ ಗುರುಗುಟ್ಟುತ್ತವೆ. ಕೆಲವೊಂದು ಬೊಗಳುವ ಸ್ವಭಾವ ಹೊಂದಿವೆ.
- 2 ಕಿ.ಮೀ. ದೂರದಿಂದಲೂ ಶಬ್ದವನ್ನು ಕೇಳಿಸಿಕೊಳ್ಳುತ್ತವೆ.
- 8 ತಿಂಗಳ ಮರಿ ಚೀತಾಗಳು ತಮ್ಮ ಬೇಟೆಯನ್ನು ತಾವೇ ಹುಡುಕಿಕೊಳ್ಳುತ್ತವೆ.
- ಬೇಟೆ ವೇಳೆ ಅವು ಅಡಗಿಕೊಳ್ಳಲು ತಮ್ಮ ದೇಹದಲ್ಲಿರುವ ದುಂಡಾಕಾರದ ಕಪ್ಪು ಚುಕ್ಕೆಗಳನ್ನು ಬಳಸಿಕೊಳ್ಳುತ್ತವೆ.
- ಮೂರು ವಾರದ ಚೀತಾಗಳು ಮಾಂಸ ತಿನ್ನಲು ಪ್ರಾರಂಭಿಸುತ್ತವೆ.
- ಚೀತಾಗಳಿಗೆ ರಾತ್ರಿ ವೇಳೆಗೆ ಕಣ್ಣು ಕಾಣಿಸದಿರುವುದರಿಂದ ಹಗಲಲ್ಲಿ ಮಾತ್ರ ಬೇಟೆಯಾಡುತ್ತವೆ.
- ಸಾಮಾನ್ಯವಾಗಿ ಏಕಕಾಲಕ್ಕೆ ಒಂದು ಚೀತಾ 3- 5 ಮರಿಗಳನ್ನಿಡುತ್ತವೆ.
- ಚೀತಾದ ಭಾರ 36- 65 ಕೆ.ಜಿ. ಇರುತ್ತದೆ.
- ಚೀತಾದ ಜೀವಿತಾವಧಿ 10- 12 ವರ್ಷ ಆಗಿರುತ್ತದೆ.
Advertisement
-ವಿದ್ಯಾ ಇರ್ವತ್ತೂರು