Advertisement

ಚೆಕ್‌ ಡ್ಯಾಂ ನಿರ್ಮಾಣ ಹಂತದಲ್ಲೇ ಕಳಪೆ!

01:24 PM May 29, 2022 | Team Udayavani |

ಮುದಗಲ್ಲ: ಸಮೀಪದ ನಾಗಲಾಪುರ ಹಿರೇ ಹಳ್ಳಕ್ಕೆ ಸೆ.ನಂ.5ರ ಹತ್ತಿರ ನಿರ್ಮಿಸುತ್ತಿರುವ ಚೆಕ್‌ ಡ್ಯಾಂ ಕಾಮಗಾರಿ ನಿರ್ಮಾಣ ಹಂತದಲ್ಲಿಯೇ ಕಿತ್ತು ಹೋಗಿರುವುದು ಕಳಪೆ ಕಾಮಗಾರಿ ಎಂಬುವುದು ಬಯಲಾದಂತಾಗಿದೆ.

Advertisement

2020-21ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯಡಿ ಸುಮಾರು ಒಂದು ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡುತ್ತಿರುವ ಚೆಕ್‌ ಡ್ಯಾಂ ಕಾಮಗಾರಿ ಎರಡು ತಿಂಗಳಿಂದ ಆರಂಭಿಸಲಾಗಿತ್ತು. ಕಾಮಗಾರಿ ನಡೆಸಲಾದ ಹಿರೇ ಹಳ್ಳದ ಅಕ್ಕಪಕ್ಕದಲ್ಲಿ ಸುಮಾರು ಆರು ಜನ ರೈತರ ಹೊಲಗಳ ದಡದಲ್ಲಿ ಗಿಡಗಂಟಿತೆರವುಗೊಳಿಸಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಚೆಕ್‌ ಡ್ಯಾಂನ ಎಡಭಾಗ ಮಳೆನೀರಿನ ರಬಸಕ್ಕೆ ಕಿತ್ತು ಹೋಗಿದೆ.

ಬೀರಮ್ಮ ಎಂಬುವರ ಜಮೀನು ಮತ್ತು ಕೊಳವೆ ಬಾವಿ ಹಾಳಾಗಿದೆ. ಹಿರೇ ಹಳ್ಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬರುವುದರಿಂದ ಹಳ್ಳದ ನೀರು ಜಮೀನಿಗೆ ನುಗ್ಗಿದೆ ಎಂದು ಹೊಲದ ಮಾಲೀಕರು ತಮ್ಮ ಅಳಲು ತೊಡಿಕೊಂಡಿದ್ದಾರೆ. ನಿಮ್ಮ ಹೊಲದ ಹತ್ತಿರ ಚೆಕ್‌ ಡ್ಯಾಂ ಮಂಜೂರಾಗಿದೆ. ಚೆಕ್‌ ಡ್ಯಾಂನಿಂದ ನಿಮ್ಮ ಕೊಳವೆ ಬಾವಿಗಳಿಗೆ ಅಂರ್ತಜಲ ಹೆಚ್ಚಾಗುತ್ತದೆ ಎಂದು ಹೇಳಿ ಚೆಕ್‌ ಡ್ಯಾಂ ನಿರ್ಮಿಸಲು ಮುಂದಾದ ಅಧಿಕಾರಿಗಳು, ಚೆಕ್‌ ಡ್ಯಾಂ ಕಿತ್ತುಕೊಂಡು ಹೊಲ, ಬೋರ್‌ ವೆಲ್‌ ಹಾಳಾದರು ಬಂದು ನೋಡಿಲ್ಲ ಎಂದು ರೈತ ಮಹಿಳೆ ಬೀರಮ್ಮ ದೂರಿದ್ದಾಳೆ.

ಕಾಮಗಾರಿ ನಡೆಯುತ್ತಿರುವಾಗ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದು ಹಳ್ಳ ಬಂದಿದ್ದರಿಂದ ಚೆಕ್‌ ಡ್ಯಾಂ ಪಕ್ಕದಲ್ಲಿ ಮಣ್ಣು ಕೊರೆದು ಕಂದಕ ಉಂಟಾಗಿದೆ. ಪ್ರಹ್ಲಾದ್ಬಿಜ್ಜೂರ, ಕಿರಿಯ ಅಭಿಯಂತರ, ಸಣ್ಣ ನೀರಾವರಿ ಇಲಾಖೆ ಕುಷ್ಟಗಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next