Advertisement

ಚೆಕ್‌ ಡ್ಯಾಂ ಅವ್ಯವಹಾರ: ನಾಲ್ವರು ಪಿಡಿಒ ವಿರುದ್ಧ ಕ್ರಿಮಿನಲ್‌ ಕೇಸ್‌

02:45 PM Jun 08, 2020 | Suhan S |

ಕುಷ್ಟಗಿ: ಬಹುಕಮಾನು ತಡೆಗೋಡೆ (ಮ್ಲಟಿ ಆರ್ಚ್‌ ಚೆಕ್‌ ಡ್ಯಾಂ)ಯೋಜನೆಯ ಅನುದಾನ ದುರುಪಯೋಗದ ಹಿನ್ನೆಲೆಯಲ್ಲಿ ನಾಲ್ವರು ಪಿಡಿಒ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ.

Advertisement

ಆಯುಕ್ತರು ಕಾಮಗಾರಿ ಸ್ಥಾನಿಕ ಪರಿಶೀಲಿಸಿ ವರದಿ ನೀಡಿದನ್ವಯ ತಾಪಂ ಇಒ ಕೆ. ತಿಮ್ಮಪ್ಪ ಅವರು, ತಳವಗೇರಾ ಪಿಡಿಒ ಶಿವಪುತ್ರಪ್ಪ ಬರಿದೆಲಿ ಅವರ ವಿರುದ್ಧ ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ, ಹಾಬಲಕಟ್ಟಿ ಪಿಡಿಒ ಚಂದಪ್ಪ ಕವಡಿಕಾಯಿ, ಹಿರೇಗೊಣ್ಣಾಗರ ಪಿಡಿಒ ಯಮನಪ್ಪ ರಾತ್ನಾಳ ಹನುಮಸಾಗರ ಪೊಲೀಸ್‌ ಠಾಣೆಯಲ್ಲಿ ಹಾಗೂ ಮುದೇನೂರು ಪಿಡಿಒ ವೆಂಕಟೇಶ ಪವಾರ ವಿರುದ್ಧ ತಾವರಗೇರಾ ಪೊಲೀಸ್‌ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಹಿನ್ನೆಲೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಮಲ್ಟಿ ಆರ್ಚ್‌ ಚೆಕ್‌ ಡ್ಯಾಂ ಕಾಮಗಾರಿ ಮಂಜೂರಾಗಿದ್ದವು. ಕುಷ್ಟಗಿ ತಾಲೂಕಿನಲ್ಲೇ 635 ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ ಫೋಟೋ ದಾಖಲೆಗಾಗಿ ನಿರ್ಮಿಸಿದ್ದರು. ಕಳೆದ ವರ್ಷದ ಮೊದಲ ಮಳೆಗೆ ಡ್ಯಾಂ ಕೊಚ್ಚಿ ಹೋಗಿದ್ದರಿಂದ ಪ್ರಕರಣ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿಂಬೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್‌ ನಯೀಮ್‌ ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರಿಗೆ ದೂರು ನೀಡಿದ್ದರು. ಸಚಿವರ ಆದೇಶದ ಮೇರೆಗೆ ನಾಲ್ವರು ಪಿಡಿಒ ವಿರುದ್ಧ ಸರ್ಕಾರಕ್ಕೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ತಳವಗೇರಾ ಪಿಡಿಒ ಶಿವಪುತ್ರಪ್ಪ ಬರೆದೆಲಿ ಅವರು 2 ಎಫ್‌ಟಿಒ (ಫಂಡ್‌ ಟ್ರಾನ್ಸಫರ್‌ ಆರ್ಡರ್‌) ಮೂಲಕ 10,46,446 ರೂ., ಹಾಬಲಕಟ್ಟಿ ಪಿಡಿಒ ಚಂದಪ್ಪ ಕವಡಿಕಾಯಿ ಅವರು 2 ಎಫ್‌ಟಿಒ ಮೂಲಕ 33,23,628 ರೂ., ಹಿರೇಗೊಣ್ಣಾಗರ ಪಿಡಿಒ ಯಮನಪ್ಪ ರಾಮತ್ನಾಳ ಅವರು 1 ಎಫ್‌ಟಿಒ ಮೂಲಕ3,76,155 ರೂ. ಹಾಗೂ ಮುದೇನೂರು ಪಿಡಿಒ ವೆಂಕಟೇಶ ಪವಾರ ಅವರು 23 ಎಫ್‌ಟಿಒ ಮೂಲಕ 1,04,31,771 ರೂ. ದುರುಪಯೋಗ ಮಾಡಿಕೊಂಡಿರುವ ಆರೋಪವಿದೆ.

Advertisement

Udayavani is now on Telegram. Click here to join our channel and stay updated with the latest news.

Next