Advertisement

Cheap Politics; ಮಹುವಾ ಮೊಯಿತ್ರಾರೊಂದಿಗಿನ ಫೋಟೋ ವೈರಲ್: ಶಶಿ ತರೂರ್ ಕಿಡಿ

10:56 PM Oct 23, 2023 | |

ಕೊಟ್ಟಾಯಂ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕ,ಸಂಸದ ಶಶಿ ತರೂರ್ ಅವರು ಖಾಸಗಿ ಪಾರ್ಟಿಯಲ್ಲಿ ಇರುವ ಫೋಟೋಗಳು ವೈರಲ್ ಆಗಿವೆ. ಈ ಬಗ್ಗೆ ತರೂರ್ ಪ್ರತಿಕ್ರಿಯಿಸಿದ್ದು “ಅಗ್ಗದ ರಾಜಕಾರಣ” ಎಂದು ಕಿಡಿ ಕಾರಿದ್ದಾರೆ. ತನ್ನ ಸಹೋದರಿ ಸೇರಿದಂತೆ ಸುಮಾರು 15 ಜನರು ಭಾಗವಹಿಸಿದ್ದ ಮೊಯಿತ್ರಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಾನು ಹಾಜರಿದ್ದೆ ಎಂದು ತಿರುವನಂತಪುರಂ ಸಂಸದ ತರೂರ್ ಸ್ಪಷ್ಟಪಡಿಸಿದ್ದಾರೆ.

Advertisement

ಸಮಾರಂಭದ ವೇಳೆ ತೆಗೆದ ಚಿತ್ರದ ಕ್ರಾಪ್ ಮಾಡಿ ಅದನ್ನೇ ವೈರಲ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಇದು ಕೇವಲ ಅಗ್ಗದ ರಾಜಕೀಯ, ಇದು ಆ ಮಗುವಿನ ಹುಟ್ಟುಹಬ್ಬದ ಪಾರ್ಟಿ. ಸರಿ, ಅವಳು ಮಗು ಅಲ್ಲ, ಆದರೆ ನನಗೆ ಅವಳು ಮಗಳಂತೆ. ಆಕೆ ನನಗಿಂತ ಸುಮಾರು 20 ವರ್ಷ ಚಿಕ್ಕವಳು. ಇಂತಹ ಟ್ರೋಲ್‌ಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಮತ್ತು ಜನರಿಗಾಗಿ ಕೆಲಸ ಮಾಡುವುದರಲ್ಲಿ ನಿರತರಾಗುತ್ತೇನೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

“ಖಾಸಗಿ ಸಭೆ ಎಂದು ಸುದ್ದಿ ಹರಡುತ್ತಿದ್ದಾರೆ, ಹಾಗಾದರೆ ಫೋಟೋವನ್ನು ಕ್ಲಿಕ್ ಮಾಡಿದವರು ಯಾರು ಎಂದು ತರೂರ್ ಪ್ರಶ್ನಿಸಿದರು.

“ಬಿಜೆಪಿಯ ಟ್ರೋಲ್ ಸೇನೆ” ಯಿಂದ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಕೆಲವು ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡುವುದನ್ನು ನೋಡಿ “ಅತ್ಯಂತ ಖುಷಿಪಟ್ಟಿದ್ದೇನೆ” ಎಂದು ಮೊಯಿತ್ರಾ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next