Advertisement

Charmadi Ghat: ಶೌಚಾಲಯ ದುರಸ್ತಿ ಪಡಿಸಲು ಸಾರ್ವಜನಿಕರ ಆಗ್ರಹ

05:21 PM Sep 16, 2023 | Team Udayavani |

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಬಳಿ ನಿರ್ಮಿಸಿರುವ ಶೌಚಾಲಯದ ಮೇಲ್ಛಾವಣಿ ಮೇಲೆ ಮರ ಬಿದ್ದು ಜಖಂಗೊಂಡಿದ್ದು ಸಾರ್ವಜನಿಕ ಪ್ರವಾಸಿಗರಿಗೆ ತುಂಬಾ ತೊಂದರೆಯಾಗಿದೆ.

Advertisement

ಕಳೆದ ಬಾರಿ ಪಾದಯಾತ್ರಿಕರ ಅನುಕೂಲಕ್ಕಾಗಿ ಹಾಗೂ ಅಣ್ಣಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡುವ ಪ್ರವಾಸಿಗರಿಗಾಗಿ ಶೌಚಾಲಯಕ್ಕೆ ಸರಿಯಾದ ಮೇಲ್ಛಾವಣಿ ನೂತನವಾಗಿ ನಿರ್ಮಿಸಿ ಸರ್ಕಾರದ ವತಿಯಿಂದ ದುರಸ್ತಿ ಪಡಿಸಲಾಗಿತ್ತು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಪಕ್ಕದಲ್ಲಿದ್ದ ಮರವು ಮೇಲ್ಛಾವಣಿ ಮೇಲೆ ಉರುಳಿ ಮೇಲ್ಛಾವಣಿ ಜಖಂಗೊಂಡಿದೆ.ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.ಸಾರ್ವಜನಿಕ ಸ್ಥಳದಲ್ಲಿ ಎಲ್ಲಾ ಅಧಿಕಾರಿಗಳು ಈ ಭಾಗದಲ್ಲಿ ಸಂಚರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರಿಗೆ, ಪಾದಯಾತ್ರಿಕರಿಗೆ ಹೈಟೆಕ್ ಶೌಚಾಲಯದ ಅಗತ್ಯವಿದೆ.ಘಾಟ್ ನಲ್ಲಿ ಒಂದೇ ಶೌಚಾಲಯ ಇರುವುದರಿಂದ ಎಲ್ಲರಿಗೂ ಅನುಕೂಲವಾಗುವಂತೆ ಶೌಚಾಲಯ ದುರಸ್ತಿ ಪಡಿಸಿ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊಟ್ಟಿಗೆಹಾರದಿಂದ ಧರ್ಮಸ್ಥಳ, ಮಂಗಳೂರಿಗೆ ಸಾವಿರಾರು ಪ್ರವಾಸಿಗರು, ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ.ಅವರು ಶೌಚಾಲಯಕ್ಕೆ ಹೋಗಲು ಪರದಾಡುವಂತಾಗಿದೆ.ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಶೌಚಾಲಯ ತುಂಬಾ ಅಗತ್ಯವಾಗಿದ್ದು ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಬಗ್ಗೆ ಗಮನ ಹರಿಸಬೇಕು
-ಸಂಜಯ್ ಗೌಡ, ಸಮಾಜ ಸೇವಕ,ಕೊಟ್ಟಿಗೆಹಾರ

Advertisement

Udayavani is now on Telegram. Click here to join our channel and stay updated with the latest news.

Next