Advertisement

ಪತ್ರಕರ್ತನ ಕೊಲೆ ಕೇಸ್‌ : ಶಹಾಬುದ್ದೀನ್‌ ವಿರುದ್ಧ ಚಾರ್ಜ್‌ ಶೀಟ್‌

01:53 PM Jan 29, 2019 | Team Udayavani |

ಪಟ್ನಾ : ಬಿಹಾರದ ಸಿವನ್‌ ನ ಪತ್ರಕರ್ತ ರಾಜದೇವ್‌ ರಂಜನ್‌ ಕೊಲೆ ಕೇಸಿಗೆ ಸಂಬಂಧಿಸಿ ಮಾಜಿ ಸಂಸದ ಮೊಹಮ್ಮದ್‌ ಶಹಾಬುದ್ದೀನ್‌  ಮತ್ತು ಇತರ ಏಳು ಮಂದಿಯ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.12ಕ್ಕೆ ನಿಗದಿಸಲಾಗಿದೆ. 

Advertisement

ಸಿಬಿಐ ಈ ಪ್ರಕರಣದಲ್ಲಿ ಕಳೆದ ವರ್ಷ ಆರ್‌ಜೆಡಿ ನಾಯಕ ಶಹಾಬುದ್ದೀನ್‌ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿತ್ತು. 

2016ರ ಮೇ 13ರಂದು ತನ್ನ ಕಚೇರಿಯಿಂದ ಮರಳುತ್ತಿದ್ದ ವೇಳೆ ಪತ್ರಕರ್ತ ರಾಜ್‌ದೇವ್‌ ಅವರನ್ನು ಸಿವನ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next