ಬಹುನಿರೀಕ್ಷಿತ ಕಾಚೇನಹಳ್ಳಿ ಏತನೀರಾವರಿ ಯೋಜನೆಗೆ 1991 ಡಿ.27ರಂದು ಅಂದಿನ ಕಾಂಗ್ರೆಸ್ ಸರ್ಕಾರ ಕೇವಲ 8.9 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಕಾಮಗಾರಿಗೆ ಚಾಲನೆ ನೀಡಿತ್ತು. ದಂಡಿಗನಹಳ್ಳಿ, ಶಾಂತಿಗ್ರಾಮ, ದುದ್ದು, ಗಂಡಸಿ ಹೋಬಳಿಯ 12,600 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮೂರು ಹಂತದಲ್ಲಿ ನೀರು ಹರಿಸುವ ಈ ಯೋಜನೆಕುಂಟುತ್ತಾ ಸಾಗಿದೆ.
Advertisement
ಈಗಾಗಲೇ 2002ರ ಅ.19 ಮತ್ತು 2007ರ ಜೂ.30 ರಂದು 2ನೇ ಬಾರಿಗೆ 165 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿ ಮಾಡಿ ಅನುಮೋದನೆ ನೀಡಿದ್ದು, ಮೊದಲನೇ ಹಂತಕ್ಕೆ 57.10 ಕೋಟಿ ರೂ. ಮತ್ತು 2ನೇ ಹಂತಕ್ಕೆ 47.38 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿತ್ತು. ಇದನ್ನು ಮೀರಿ ಕಾಮಗಾರಿಗೆ ಹಣ ವೆಚ್ಚ ಮಾಡಿದ್ದರೂ ಕಾಮಗಾರಿ ಮುಗಿಯುವ ಲಕ್ಷಣಗಳುಕಾಣುತ್ತಿಲ್ಲ.
Related Articles
Advertisement
ಕೆಲವು ಕಡೆ ಭೂ ಸ್ವಾಧೀನ ಆಗಿಲ್ಲ: ಕಾಮಗಾರಿ ಪ್ರಾರಂಭವಾಗಿ 29 ವರ್ಷ ಕಳೆದರೂ ಕೆಲವು ಕಡೆ ಇನ್ನೂ ಭೂ ಸ್ವಾಧೀನ ಆಗಿಲ್ಲ, ದಂಡಿಗನಹಳ್ಳಿ, ಮುರಾರನಹಳ್ಳಿ, ತೆಂಕನಹಳ್ಳಿ, ಅವೇರಹಳ್ಳಿಕೊಪ್ಪಲು, ತಿಮ್ಮಲಾಪುರ, ದೊತನೂರು ಕಾವಲು ಗ್ರಾಮಗಳಲ್ಲಿ 280 ಮೀಟರ್‌ಕಾಮಗಾರಿಆಗಬೇಕಿದೆ. 14.17 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರ ನೀಡಬೇಕಿದೆ. ಸದ್ಯ 18.52 ಕೋಟಿ ರೂ. ಹಣ ಮಾತ್ರ ಯೋಜನೆಗೆ ಇದೆ. ಈ ಹಣವನ್ನು ಭೂಸ್ವಾಧೀನಕ್ಕೆ ಬಳಸಿದರೆ ಕಾಮಗಾರಿ ನಿಲ್ಲಿಸಬೇಕಾಗುತ್ತದೆ, ಕಾಮಗಾರಿ ಮಾಡಿದರೆ ಭೂ ಸ್ವಾಧೀನ ಆಗದ ಕಡೆಯಲ್ಲಿ ನಾಲೆ ಮಾಡದೆ ನೀರು ಮುಂದಕ್ಕೆ ಹರಿಯುವುದಿಲ್ಲ.
3ನೇ ಹಂತಕ್ಕೆ ನೂರು ಕೋಟಿ ರೂ.: ಯೋಜನೆಯ ಎರಡನೇ ಹಂತಕ್ಕೆ ಇಷ್ಟೊಂದು ಅಡೆತಡೆಗಳು ಇರುವಾಗಲೇ ಮೂರನೇ ಹಂತಕ್ಕೆ ನಾಲಾ ವ್ಯಾಪ್ತಿಯ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಪಟ್ಟು ಹಿಡಿದು ಮೈತ್ರಿ ಸರ್ಕಾರದ ವೇಳೆ ಅಂದಿನ ಮುಖ್ಯಮಂತ್ರಿ ಕರೆಯಿಸಿ 3ನೇ ಹಂತಕ್ಕೆ ಭೂಮಿ ಪೂಜೆ ನೆರವೇರಿಸಿ, ಬಜೆಟ್‌ನಲ್ಲಿ 100ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದಾರೆ. ಈ ಯೋಜನೆ ಯಾವಾಗ ಮುಕ್ತಾಯವಾಗಲಿದೆ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ.
– ಶಾಮಸುಂದರ್ ಅಣ್ಣೇನಹಳ್ಳಿ