ದಾವಣಗೆರೆ: ಅಡಿಕೆ ನಾಡು, ಮಾಜಿ ಸಿಎಂ ದಿ| ಜೆ.ಎಚ್. ಪಟೇಲರ ಕಾರ್ಯಕ್ಷೇತ್ರ ಚನ್ನಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣ ಕಾವು ಏರುತ್ತಿದೆ.
ಪ್ರಸಕ್ತ ಚುನಾವಣೆ ಹೊಸ್ತಿಲಲ್ಲೇ ಕ್ಷೇತ್ರದ ಹಾಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಲೋಕಾಯುಕ್ತ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೇ ಕಾರಣಕ್ಕಾಗಿ ಬಿಜೆಪಿ ಈ ಬಾರಿ ಹಾಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಹಾಗೂ ಕುಟುಂಬದವರಿಗೆ ಟಿಕೆಟ್ ನೀಡಿಲ್ಲ. ಆದರೆ ಮಾಡಾಳು ಮಲ್ಲಿಕಾರ್ಜುನ್ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿರುವುದು ರಣಕಣದ ಕೌತುಕ ಹೆಚ್ಚಿಸಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಜಿದ್ದಾಜಿದ್ದಿ ನಡೆದಿದೆ. ಆದರೆ ಈ ಸಲದ ಕಣದಲ್ಲಿ ಹಾಲಿ, ಮಾಜಿ ಶಾಸಕರಾರೂ ಇಲ್ಲದೇ ಇರುವುದು ಮತ್ತೂಂದು ವಿಶೇಷ. ಪ್ರತೀ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುವ ಕ್ಷೇತ್ರದಲ್ಲಿ ಈ ಬಾರಿ ಆಖಾಡದಲ್ಲಿರುವ ಪ್ರಮುಖರೆಲ್ಲ ಮೊದಲ ಬಾರಿಗೆ ಶಾಸಕರಾಗುವ ಹಂಬಲದಲ್ಲಿರುವುದು ಗಮನಾರ್ಹವಾಗಿದೆ.
ಕಾಂಗ್ರೆಸ್‌ನಿಂದ ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ಬಸವರಾಜ್ ವಿ. ಶಿವಗಂಗಾ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿ ದ್ದಾರೆ. 2013ರಲ್ಲಿ ಸ್ಪರ್ಧಿಸಿ ಸೋತಿದ್ದ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಬಿಜೆಪಿಯಿಂದ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೆ ರಾಜ್ಯ ಕಬ್ಬು ಬೆಳೆ ಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಕೊನೆಯ ಗಳಿಗೆಯಲ್ಲಿ ಜೆಡಿಎಸ್ ಹುರಿಯಾಳಾಗಿ ಕಣಕ್ಕಿಳಿದಿದ್ದಾರೆ. ಶಾಸಕ ಮಾಡಾಳು ಮಲ್ಲಿಕಾರ್ಜುನ್ ಪಕ್ಷೇತರರಾಗಿ ನಿಂತು ಕಣವನ್ನು ಕೆಂಡವಾಗಿಸಿದ್ದಾರೆ.
ಭ್ರಷ್ಟಾಚಾರದ್ದೇ ಸದ್ದು: ಕ್ಷೇತ್ರದಲ್ಲಿ ಈ ಬಾರಿ ಭ್ರಷ್ಟಾಚಾರ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಕ್ಷೇತ್ರದ ಹಾಲಿ ಶಾಸಕ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜೈಲುವಾಸ ಅನುಭವಿಸಿದ ವಿಚಾರ ಕ್ಷೇತ್ರಾದ್ಯಂತ ಚರ್ಚೆಯಾಗುತ್ತಿದೆ. ಎದುರಾಳಿ ಪಕ್ಷ ಗಳು ಪ್ರಾಮಾಣಿಕರಿಗೆ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಮತ ಕೊಡಿ ಎಂದು ಕೋರು ತ್ತಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಮಾಡಾಳು ಮಲ್ಲಿಕಾರ್ಜುನ್ ಸುಳ್ಳು ಆರೋಪದಲ್ಲಿ ತಮ್ಮ ತಂದೆಯನ್ನು ಸಿಲುಕಿಸಲಾಗಿದೆ ಎನ್ನುತ್ತ ಕ್ಷೇತ್ರದ ಮತದಾರರ ಅನುಕಂಪಗಿಟ್ಟಿಸುವ ಪ್ರಯತ್ನವೂ ನಡೆಸಿದ್ದಾರೆ.
ಜಾತಿ ಲೆಕ್ಕಾಚಾರ ಹೇಗಿದೆ?: ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಸಾದರ ಲಿಂಗಾಯತ ಸಮಾಜದವರೇ ಆಗಿದ್ದಾರೆ. ಬಂಡಾಯ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್ ಸಹ ಅದೇ ಸಮುದಾಯದವರು. ಜೆಡಿಎಸ್‌ನ ತೇಜಸ್ವಿ ಪಟೇಲ್ ಪಂಚಮಸಾಲಿ ಸಮಾಜದವರು. ಕ್ಷೇತ್ರಾದ್ಯಂತ ವೀರಶೈವ ಸಮುದಾಯದ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಖ್ಯವಾಗಿ ಸಾದರ ಲಿಂಗಾಯತ ಸಮಾಜದವರ ಒಲವು ಗಳಿಸಿದವರು ಗೆಲ್ಲುತ್ತಾರೆ ಎಂಬ ಮಾತಿದೆ. ಕ್ಷೇತ್ರದಲ್ಲಿ ನಾಯಕರು, ಕುರುಬರು, ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾಕರು ಗಣನೀಯ ಸಂಖ್ಯೆಯಲ್ಲಿದ್ದು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.
ಪ್ಲಸ್-ಮೈನಸ್ ಏನು?
ಬಿಜೆಪಿಯ ಎಚ್.ಎಸ್. ಶಿವಕುಮಾರ್‌ಗೆ 2013ರಲ್ಲಿ ಸೋತ ಅನುಕಂಪ, ಸ್ಥಳೀಯರು ಹಾಗೂ ತುಮೊRàಸ್ ಅಧ್ಯಕ್ಷರಾಗಿದ್ದು ರೈತರೊಂದಿಗೆ ಹೊಂದಿದ ಒಡನಾಟ ಪ್ಲಸ್. ಆದರೆ ಮಾಡಾಳು ಲಂಚ ಪ್ರಕರಣ ಮೈನಸ್ ಆಗಬಹುದು. ಕಾಂಗ್ರೆಸ್‌ನ ಬಸವರಾಜ್ ವಿ. ಶಿವಗಂಗಾ ಅವ ರಿ ಗೆ ಕೊರೊನಾ ವೇಳೆ ಮಾಡಿದ ಸಮಾಜಸೇವೆ, ಯುವ ಉತ್ಸಾಹಿ ಪ್ಲಸ್. ಆದರೆ ಕ್ಷೇತ್ರದಲ್ಲಿ ಹೊಸ ಸಂಪರ್ಕ, ಟಿಕೆಟ್ ವಂಚಿತ ಸ್ವಪಕ್ಷೀಯರ ಅಸಮಾಧಾನ ಮೈನಸ್ ಆಗಬಹುದು. ಜೆಡಿಎಸ್ ಅಭ್ಯರ್ಥಿ ತೇಜಸ್ವಿ ಪಟೇಲ್‌ಗೆ ಜೆ.ಎಚ್. ಪಟೇಲರ ಕುಟುಂಬದ ಹಿನ್ನೆಲೆ, ರೈತಪರ ಹೋರಾಟ ಪ್ಲಸ್. ಆದರೆ ಕೊನೆ ಗಳಿಗೆಯಲ್ಲಿ ಜೆಡಿಎಸ್ ಸೇರಿದ್ದು ಮೈನಸ್ ಎನ್ನ ಲಾ ಗಿ ದೆ. ಮಾಡಾಳು ಮಲ್ಲಿಕಾರ್ಜುನ್‌ಗೆ ತಂದೆ ಪ್ರಭಾವ ಪ್ಲಸ್. ಆದರೆ ಲಂಚ ಪ್ರಕ ರಣ ಮೈನಸ್ ಆಗುವ ಸಾಧ್ಯತೆ ಇದೆ.
~ ಎಚ್.ಕೆ.ನಟರಾಜ