Advertisement

22ರಂದು ಡಾ|ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ

11:30 AM Dec 11, 2021 | Team Udayavani |

ಭಾಲ್ಕಿ: ಕಲ್ಯಾಣ ಕರ್ನಾಟಕ ಭಾಗದ ನಡೆದಾಡುವ ದೇವರಾಗಿದ್ದ ಲಿಂ| ಡಾ| ಚನ್ನಬಸವ ಪಟ್ಟದ್ದೇವರ 132ನೆಯ ಜಯಂತ್ಯುತ್ಸವ ನಿಮಿತ್ತ ಪೂರ್ವಭಾವಿ ಸಭೆ ನಡೆಸಲಾಯಿತು.

Advertisement

ಸಭೆಯ ನೇತೃತ್ವ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ| ಚನ್ನಬಸವ ಪಟ್ಟದ್ದೇವರು 109 ವರ್ಷ ಕಾಲ ಗಂಧದಂತೆ ಬದುಕು ಸವಿಸಿ ಈ ಭಾಗಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ತತ್ವಗಳನ್ನು ಜೀವನದುದ್ದಕ್ಕೂ ಪಾಲಿಸಿ ಈ ಭಾಗದ ಕಲ್ಯಾಣಕ್ಕಾಗಿ ಪಟ್ಟದ್ದೇವರು ಶ್ರಮಿಸಿದ್ದಾರೆ. ಅಂತಹ ಮಹಾ ಪುರುಷರ ಜಯಂತ್ಯುತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಡಿ.22ರಂದು ಚನ್ನಬಸವಾಶ್ರಮದ ಹರ್ಡೇಕರ್‌ ಮಂಜಪ್ಪನವರ ವೇದಿಕೆಯಲ್ಲಿ ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಜಯಂತ್ಯುತ್ಸವ ಅಂಗವಾಗಿ ಅಂದು ದಿನವಿಡಿ ಡಾ| ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಹಲವು ಕಾರ್ಯಕ್ರಮ ಜರುಗಲಿವೆ.

ಇದಕ್ಕೂ ಮುನ್ನ ಪಟ್ಟದ್ದೇವರ ಜನ್ಮಸ್ಥಳವಾದ ಕಮಲನಗರದಿಂದ ಡಿ.12ರಂದು ಬಸವಜ್ಯೋತಿ ಪಾದಯಾತ್ರೆ ನಡೆಯಲಿದೆ. ಡಿ.21ರಿಂದ 22ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ಸಾಣೆಹಳ್ಳಿ ಶಿವಕುಮಾರ ಕಲಾ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ. 22ರಂದು ಬೆಳಗ್ಗೆ 5:30ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮದ ವರೆಗೂ ಪಥ ಸಂಚಲನ ನಡೆಯಲಿದೆ. ಅಂದು ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಿಸಲಾಗುತ್ತದೆ. 9ಕ್ಕೆ ತೊಟ್ಟಿಲು ಕಾರ್ಯಕ್ರಮ, 10ಕ್ಕೆ ಉದ್ಘಾಟನೆ, ಕಾಯಕ ಪ್ರಶಸ್ತಿ ಪ್ರದಾನ, ಅಕ್ಕಮಹಾದೇವಿ ಮೂರ್ತಿ ಅನಾವರಣ ಸೇರಿ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಾದ ವ್ಯವಸ್ಥೆ ಇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಶಶಿಧರ ಕೋಸಂಬೆ ಮಾತನಾಡಿ, ಪಟ್ಟದ್ದೇವರ ಜಯಂತ್ಯುತ್ಸವ ನಿಮಿತ್ತ ಡಿ.12ರಂದು ಕಮಲನಗರದಿಂದ ಬಸವ ಜ್ಯೋತಿ ಪಾದಯಾತ್ರೆ ಹೊರಟು 13ರಂದು ಭಾಲ್ಕಿಗೆ ತಲುಪಲಿದೆ. ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಸದಸ್ಯ ವಿಜಯಕುಮಾರ ರಾಜಭವನ, ಪ್ರಮುಖರಾದ ವಿಶ್ವನಾಥಪ್ಪ ಬಿರಾದಾರ, ಸೋಮನಾಥ ಅಷ್ಟೊರೆ, ಚಂದ್ರಕಾಂತ ಬಿರಾದಾರ್‌, ಸಿದ್ದಯ್ಯ ಕವಡಿಮಠ, ಶಶಿಧರ ಕೋಸಂಬೆ, ಸಂಗಮೇಶ ಮದಕಟ್ಟಿ, ಶಿವಪುತ್ರ ದಾಬಶೆಟ್ಟಿ, ಸಂಗಮೇಶ ಗುಮ್ಮೆ, ಬಸವರಾಜ ಮರೆ, ಶಂಭುಲಿಂಗ ಕಾಮಣ್ಣ, ಶಿವಾನಂದ ಗುಂದಗಿ, ರಾಜಕುಮಾರ ಬಿರಾದಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next