Advertisement

Chandrayaan-3ರ ವಿಕ್ರಂ ಲ್ಯಾಂಡರ್‌; ಚಂದ್ರನಲ್ಲೂ ಕಂಪನ?: ಚಂದ್ರಯಾನ-3  ಸಾಕ್ಷ್ಯ

01:35 AM Sep 10, 2024 | Team Udayavani |

ಹೊಸದಿಲ್ಲಿ: ಭೂಮಿಯಲ್ಲಿ ಆಗಾಗ್ಗೆ ಕಂಪನಗಳು ಉಂಟಾದಂತೆ ಚಂದ್ರನಲ್ಲೂ ಉಂಟಾಗುತ್ತದೆಯೇ? ಹೌದು ಎನ್ನುತ್ತಿವೆ ಭಾರತದ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ರವಾನಿಸಿರುವ ದತ್ತಾಂಶಗಳು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುಮಾರು 250 ಕಂಪನ ಸಂಕೇತಗಳನ್ನು ವಿಕ್ರಂ ಲ್ಯಾಂಡರ್‌ ಪತ್ತೆ ಹಚ್ಚಿದೆ ಎಂದು ಇಸ್ರೋ ತಿಳಿಸಿದೆ. ಅಪೋಲೋ ಬಳಿಕ ಚಂದ್ರನ ಮೇಲ್ಮೆ„ನಿಂದ ಕಂಪನಕ್ಕೆ ಸಂಬಂಧಿಸಿದ ದತ್ತಾಂಶ ಸಂಗ್ರಹವಾಗಿದ್ದು ಇದೇ ಮೊದಲು.

Advertisement

ವಿಕ್ರಂ ಲ್ಯಾಂಡರ್‌ನಲ್ಲಿರುವ ಇನ್‌ಸ್ಟ್ರೆಮೆಂಟ್‌ ಫಾರ್‌ ಲ್ಯೂನಾರ್‌ ಸಿಸ್ಮಿಕ್‌ ಆ್ಯಕ್ಟಿವಿಟಿ (ಐಎಲ್‌ಎಸ್‌ಎ) ಸಾಧನವು 2023ರ ಆಗಸ್ಟ್‌ 24ರಿಂದ ಸೆಪ್ಟಂಬರ್‌ 4ರವರೆಗೆ ಒಟ್ಟು 250 ಕಂಪನದ ಸಂಕೇತವನ್ನು ದಾಖಲಿಸಿಕೊಂಡಿದೆ. 250 ಸಿಗ್ನಲ್‌ಗಳ ಪೈಕಿ 200 ಸಂಕೇತಗಳು ಚಂದ್ರಯಾನ-3 ಯೋಜನೆಯ ಚಟುವಟಿಕೆಗಳಿಗೆ ಸಂಬಂಧಿಸಿದ್ದು. ಉಳಿದ 50 ಕಂಪನಗಳು ಎಲ್ಲಿಂದ ಸೃಷ್ಟಿಯಾದವು ಎಂಬ ಮಾಹಿತಿ ದೊರೆತಿಲ್ಲ. ಈ ಕಂಪನ ಸಂಕೇತಗಳು 1 ಹಟ್‌lìನಿಂದ 50 ಹಟ್‌lìವರೆಗಿನ ಫ್ರೀಕ್ವೆನ್ಸಿಗಳನ್ನು ಹೊಂದಿವೆ ಎಂದೂ ಇಸ್ರೋ ತಿಳಿಸಿದೆ. ಚಂದ್ರನ ಮೇಲ್ಮೆ„ ಮೇಲೆ ಸೂಕ್ಷ್ಮ ಉಲ್ಕೆಗಳ ಪ್ರಭಾವದಿಂದಲೂ ಕಂಪನ ಉಂಟಾಗಿರಬಹುದು ಎಂದೂ ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next