Advertisement

ಈ ವರ್ಷದ ಬದಲು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ ಚಂದ್ರಯಾನ-3 ಉಡಾವಣೆ

12:26 PM Sep 07, 2020 | keerthan |

ಹೊಸದಿಲ್ಲಿ: ಭಾರತದ ಮಹತ್ವದ ಚಂದ್ರಯಾನ-3 ಯೋಜನೆ ಈ ವರ್ಷದ ಬದಲಿಗೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

Advertisement

ಈ ವರ್ಷ ಕೋವಿಡ್-19 ಸೋಂಕು ಕಾರಣದಿಂದ ಈ ವರ್ಷದ ಅಂತ್ಯದಲ್ಲಿ ಉಡಾವಣೆಯಾಗಬೇಕಿದ್ದ ಚಂದ್ರಯಾನ -3 ಮುಂದಿನ ವರ್ಷಕ್ಕೆ ಮುಂದೂಡಕೆಯಾಗಿದೆ. 2021ರ ಆರಂಭದಲ್ಲಿ ಚಂದ್ರಯಾನ-3 ನೌಕೆ ಚಂದ್ರನತ್ತ ಹಾರಲಿದೆ ಎಂದು ಸಚಿವರು ಹೇಳಿದರು.

ಚಂದ್ರಯಾನ-3ರಲ್ಲಿ ರೋವರ್ ಮತ್ತು ಲ್ಯಾಂಡರ್ ಮಾತ್ರ ಇರಲಿದೆ. ಆರ್ಬಿಟರ್ ಇರುವುದಿಲ್ಲ ಎನ್ನಲಾಗಿದೆ. ಚಂದ್ರಯಾನ-2 2019ರ ಜುಲೈ 22ರಂದು ಉಡಾಯಿಸಲಾಗಿತ್ತು. ಆದರೆ ಸಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಲು ವಿಫಲವಾಗಿತ್ತು. ಆದರೆ ಅದರ ಆರ್ಬಿಟರ್ ಇನ್ನೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹತ್ವದ ಡಾಟಗಳನ್ನು ಭೂಮಿಗೆ ಕಳುಹಿಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ನಾಯಕತ್ವ ವಿರುದ್ಧ ಮತ್ತೂಂದು ಲೆಟರ್‌ “ಬಾಂಬ್‌:’ ಪರಿವಾರದ ಮೋಹದಿಂದ ಹೊರಬನ್ನಿ

ಇಸ್ರೋದ ಮೊದಲ ಚಂದ್ರಯಾನ ಯೋಜನೆ ಶಶಿಯ ಅಂಗಳದಲ್ಲಿ ನೀರಿನ ಅಂಶವಿರುವುದನ್ನು ಪತ್ತೆಹಚ್ಚಿತ್ತು. ಅದಲ್ಲದೆ ಚಂದ್ರನ ಧ್ರುವಗಳ ಉದ್ದಕ್ಕೂ ತುಕ್ಕು ಹಿಡಿಯಬಹುದೆಂದು ಸೂಚಿಸುವ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು.

Advertisement

ಈಗ ಭಾರತದ ಚಂದ್ರಯಾನ-3 ಯೋಜನೆ ಬಗ್ಗೆ ಜಗತ್ತಿನ ಹಲವು ವಿಜ್ಞಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಭಾರತದ ಮೊತ್ತಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ತಯಾರಿ ಜೋರಾಗಿ ನಡೆಯುತ್ತಿದೆ. ಇದರ ಗಗನಯಾತ್ರಿಗಳ ತರಬೇತಿ ಕಾರ್ಯಗಳು ಚಾಲನೆಯಲ್ಲಿವೆ. ಕೋವಿಡ್ ಕಾರಣದಿಂದ ತುಸು ಹಿನ್ನಡೆಯಾದರೂ 2022ರ ಆಸುಪಾಸಿನ ವೇಳೆಗೆ ಮಾನವಸಹಿತ ಗಗನಯಾನ ಲಾಂಚ್ ಆಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next