Advertisement

Chandrayaan 3 ಸೂಪರ್ ಸಕ್ಸಸ್ ; ಪ್ರಧಾನಿ ಮೋದಿ ಸಂಭ್ರಮದ ಮಾತುಗಳು

06:27 PM Aug 23, 2023 | Team Udayavani |

ಹೊಸದಿಲ್ಲಿ: ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ 06.03ಕ್ಕೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ”ಅಮೃತ ಕಾಲದ ಮೊದಲ ಬೆಳಕಿನಲ್ಲಿ ಈ ಯಶಸ್ಸಿನ ಅಮೃತ ಮಳೆ ಸುರಿದಿದೆ. ನಾವು ಭೂಮಿಯ ಮೇಲೆ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಅದನ್ನು ಚಂದ್ರನ ಮೇಲೆ ನಿಜಗೊಳಿಸಿದ್ದೇವೆ. ನಮ್ಮ ವೈಜ್ಞಾನಿಕ ಸಹೋದ್ಯೋಗಿಗಳು ಹೇಳಿದಂತೆ ಭಾರತ ಈಗ ಚಂದ್ರನ ಮೇಲಿದೆ. ಇದೊಂದು ಐತಿಹಾಸಿಕ ಕ್ಷಣ” ಎಂದಿದ್ದಾರೆ.

Advertisement

ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನೇರಪ್ರಸಾರ ವೀಕ್ಷಿಸಿ ಯಶಸ್ಸಿನ ಸಂಭ್ರಮದ ಬೆನ್ನಲ್ಲೇ ಅಭಿನಂದನಾ ನುಡಿಗಳನ್ನಾಡಿದರು. ಹೊಸ ಇತಿಹಾಸ ನಿರ್ಮಾಣವಾಗುತ್ತಿದ್ದಂತೆಯೇ ಪ್ರತಿಯೊಬ್ಬ ಭಾರತೀಯನೂ ಸಂಭ್ರಮಾಚರಣೆಯಲ್ಲಿ ಮಗ್ನನಾಗುತ್ತಾನೆ, ಪ್ರತಿ ಮನೆಯಲ್ಲೂ ಸಂಭ್ರಮಾಚರಣೆ ಶುರುವಾಗಿದೆ.ಈ ಕ್ಷಣಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ ಚಂದ್ರಯಾನ ತಂಡ, ಇಸ್ರೋ ಮತ್ತು ದೇಶದ ಎಲ್ಲಾ ವಿಜ್ಞಾನಿಗಳನ್ನು ನಾನು ಅಭಿನಂದಿಸುತ್ತೇನೆ ಎಂದರು.

“ಈ ಹಿಂದೆ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ಇಂದು ನಾವು ಬಾಹ್ಯಾಕಾಶದಲ್ಲಿ ನವ ಭಾರತದ ಹೊಸ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ.ನಾನು ಪ್ರಸ್ತುತ ಬ್ರಿಕ್ಸ್‌ನಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದಲ್ಲಿದ್ದೇನೆ, ಆದರೆ ಪ್ರತಿಯೊಬ್ಬ ದೇಶವಾಸಿಗಳಂತೆ ನನ್ನ ಮನಸ್ಸು ಕೂಡ ಚಂದ್ರಯಾನ ಮಹಾ ಅಭಿಯಾನದಲ್ಲಿ ತೊಡಗಿಸಿಕೊಂಡಿದೆ ಎಂದರು.

ಈ ಕ್ಷಣ ಅವಿಸ್ಮರಣೀಯ, ಈ ಕ್ಷಣ ಅಸಾಧಾರಣವಾಗಿದೆ, ಈ ಕ್ಷಣ ಅಭಿವೃದ್ಧಿ ಹೊಂದಿದ ಭಾರತದ ಶಂಖ ನಾದ ,ಇದು ನವ ಭಾರತದ ಸಂಭ್ರಮದ ಕ್ಷಣ. ಕಷ್ಟಗಳ ಸಾಗರವನ್ನು ದಾಟುವ ಕ್ಷಣ. ಇದು ವಿಜಯದ ಚಂದ್ರನ ಹಾದಿಯಲ್ಲಿ ನಡೆಯಲು ಕ್ಷಣ. ಈ ಕ್ಷಣವು 140 ಕೋಟಿ ಹೃದಯಗಳ ಬಡಿತಗಳ ಶಕ್ತಿಯಾಗಿದೆ. ಇದು ಭಾರತದಲ್ಲಿ ಹೊಸ ಶಕ್ತಿ, ಹೊಸ ನಂಬಿಕೆ, ಹೊಸ ಪ್ರಜ್ಞೆಯ ಕ್ಷಣವಾಗಿದೆ.ಭಾರತದ ಉದಯೋನ್ಮುಖ ಭವಿಷ್ಯಕ್ಕಾಗಿ ಕರೆ ನೀಡುವ ಕ್ಷಣವಿದು ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next