Advertisement

ISRO ಶಿವಶಕ್ತಿ ಸುತ್ತಿದ ರೋವರ್‌; ಇಸ್ರೋದಿಂದ ಮತ್ತೊಂದು ವಿಡಿಯೋ ರಿಲೀಸ್‌

09:34 PM Aug 26, 2023 | Team Udayavani |

ನವದೆಹಲಿ/ಇಸ್ಲಾಮಾಬಾದ್‌:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಕುರಿತಾದ ನೂತನ ವಿಡಿಯೋ ಒಂದನ್ನು ಶನಿವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಹಂಚಿಕೊಂಡಿದ್ದು, ಅದರದಲ್ಲಿ ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್‌ ಇಳಿದಿರುವ ಜಾಗ “ಶಿವಶಕ್ತಿ’ಯ ಸುತ್ತಾ ಪ್ರಜ್ಞಾನ್‌ ರೋವರ್‌ ತಿರುಗುವುದನ್ನು ಸೆರೆ ಹಿಡಿಯಲಾಗಿದೆ. ಇಸ್ರೋದ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ರೋವರ್‌ ಯಶಸ್ವಿಯಾಗಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸುತ್ತಿರುವುದು ಕಂಡು ಬಂದಿದೆ.

Advertisement

ಪಾಕ್‌ ಮತ್ತೊಮ್ಮೆ ಪ್ರಶಂಸೆ:
ಇನ್ನೊಂದೆಡೆ, ಭಾರತದ ಸಾಧನೆಯನ್ನು ನೆರೆ ರಾಷ್ಟ್ರ ಪಾಕಿಸ್ತಾನ ಪ್ರಶಂಸಿಸುವುದು ಮುಂದುವರಿಸಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿ ವ್ಯವಹಾರಗಳ ವಕ್ತಾರೆ ಮುಮ್ತಾಜ್‌ ಝಾರಾ ಬಲೂಚ್‌, ಶ್ರೀಮಂತ ರಾಷ್ಟ್ರಗಳು ಈ ವರೆಗೆ ಸಾಧಿಸಲು ಅಸಾಧ್ಯವಾದದ್ದನ್ನು ಭಾರತ ಕಡಿಮೆ ವೆಚ್ಚದಲ್ಲಿ ಸಾಧಿಸಿ ತೋರಿಸಿದೆ.

ಚಂದ್ರಯಾನ-3 ಅತಿದೊಡ್ಡ ವೈಜ್ಞಾನಿಕ ಸಾಧನೆಯಾಗಿದ್ದು, ಅದರ ಸಂಪೂರ್ಣ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕು ಎಂದಿದ್ದಾರೆ.

ಕೈ-ಬಿಜೆಪಿ ಜಗಳ:
ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನಲ್ಲಿ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರು ನೀಡಲು ಪ್ರಧಾನಿ ಮೋದಿಯವರಿಗೆ ಅಧಿಕಾರ ನೀಡಿದ್ದು ಯಾರು ಎಂದು ಕಾಂಗ್ರೆಸ್‌ ನಾಯಕ ರಶೀದ್‌ ಅಳ್ವಿ ಪ್ರಶ್ನಿಸಿದ್ದಾರೆ. ಸುದ್ದಿವಾಹಿನಿಯ ಚರ್ಚೆಯ ವೇಳೆ ಅವರು ಬಗ್ಗೆ ಪ್ರಶ್ನೆಯನ್ನೆತ್ತಿದ್ದರು. “ಚಂದ್ರನ ಮೇಲಿನ ಸ್ಥಳಕ್ಕೆ ಪ್ರಧಾನಿ ಹೆಸರು ಇರಿಸುವುದು ಎಂದರೆ ಅದು ಹಾಸ್ಯಾಸ್ಪದ. ಅವರಿಗೆ ಅಂಥ ಅಧಿಕಾರ ಕೊಟ್ಟವರು ಯಾರು? ಈ ವಿಚಾರ ಕೇಳಿದ ಜಗತ್ತಿನ ಜನರು ನಮ್ಮನ್ನು ನೋಡಿ ಲೇವಡಿ ಮಾಡಲಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದದ್ದು ನಮ್ಮ ಸಾಧನೆಯನ್ನು ಒಪ್ಪಿಕೊಳ್ಳೋಣ’ ಎಂದು ಹೇಳಿದ್ದಾರೆ.

ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲ “ಕಾಂಗ್ರೆಸ್‌ ಹಿಂದೂ ವಿರೋಧಿ ಎನ್ನುವುದನ್ನುಮತ್ತೊಮ್ಮೆ ಸ್ಪಷ್ಟಪಡಿಸಿದೆ. ಹಿಂದೊಮ್ಮೆ ಆ ಪಕ್ಷ ರಾಮ ಇದ್ದದ್ದು ಹೌದೇ ಎಂದು ಪ್ರಶ್ನೆ ಮಾಡಿತ್ತು. ರಾಮ ಮಂದಿರಕ್ಕೆ ವಿರೋಧ ಮಾಡಿತ್ತು. ಶಿವಶಕ್ತಿ ಮತ್ತು ತಿರಂಗ ಎನ್ನುವ ಹೆಸರು ದೇಶಕ್ಕೆ ಸಂಬಂಧ ಇರುವ ಹೆಸರು. ಲ್ಯಾಂಡರ್‌ ವಿಕ್ರಮ ಹೆಸರನ್ನು ವಿಕ್ರಂ ಸಾರಾಭಾಯಿ ಹೆಸರಿನ ನೆನಪಿನಲ್ಲಿ ನೀಡಲಾಗಿದೆ. ಯುಪಿಎ ಅವಧಿಯಲ್ಲಿ ಆಗಿದ್ದರೆ ಚಂದ್ರಯಾನಕ್ಕೆ ಇಂದಿರಾ ಪಾಯಿಂಟ್‌, ರಾಜೀವ್‌ ಪಾಯಿಂಟ್‌ ಎಂದು ಹೆಸರಿಸುತ್ತಿದ್ದರು. ಕಾಂಗ್ರೆಸ್‌ ನಾಯಕರೇನಿದ್ದರೂ ಗಾಂಧಿ ಪರಿವಾರವನ್ನೇ ಹೊಗಳುತ್ತಾರೆ’ ಎಂದು ಟೀಕಿಸಿದ್ದಾರೆ.

Advertisement

ಎಲ್ಲಿದೆ ಜವಾಹರ್‌ ಪಾಯಿಂಟ್‌?
ಇಸ್ರೋ 2008ರಲ್ಲಿ ಕೈಗೊಂಡಿದ್ದ ಚಂದ್ರಯಾನ-1 ಇಳಿದಿದ್ದ ಸ್ಥಳಕ್ಕೆ ಜವಾಹರ್‌ ಪಾಯಿಂಟ್‌ ಎಂದು ಹೆಸರಿಸಲಾಗಿತ್ತು. ಚಂದ್ರಯಾನ-1 ನೌಕೆ ಕ್ರಾಶ್‌ ಲ್ಯಾಂಡ್‌ ಆದ ಚಂದ್ರನಮೇಲ್ಮೈ ಭಾಗದ ಶಾಕ್ಲೆಟನ್‌ ಕ್ರೇಟರ್‌ ಪ್ರದೇಶದ ಸಮೀಪ ಇದೆ. ಪ್ರತಿ ವರ್ಷದ ನ.14ರಂದು ಜವಹಾರ್‌ಲಾಲ್‌ ನೆಹರೂ ಹುಟ್ಟಿದ ದಿನ. ಹೀಗಾಗಿ, ಆ ಸ್ಥಳವನ್ನು ಮೊತ್ತಮೊದಲ ಪ್ರಧಾನಿ ಹೆಸರಿನಿಂದಲೇ ಗುರುತಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next