Advertisement
“ಪ್ರಾಕೃತಿಕ ಕಂಪನಗಳು, ಕೃತಕ ಘಟನೆಗಳು ಹಾಗೂ ಪರಿಣಾಮಗಳನ್ನು ಅಳೆಯುವುದು ಇನ್ಸ್ ಸ್ಟ್ರೆ ಮೆಂಟ್ ಫಾರ್ ದಿ ಲೂನಾರ್ ಸಿಸ್ಮಿಕ್ ಆ್ಯಕ್ಟಿವಿಟಿ(ಐಎಲ್‌ಎಸ್‌ಎ)ನ ಪ್ರಾಥಮಿಕ ಉದ್ದೇಶವಾಗಿದೆ. ಆ.25ರಂದು ರೋವರ್‌ನ ಚಲನವನಗಳನ್ನು ಐಎಲ್‌ಎಸ್‌ಎ ದಾಖಲಿತು. ಇದೇ ರೀತಿ ಆ.26ರಂದು ಕೂಡ ಚಲನವನಗಳನ್ನು ದಾಖಲಿಸಿದೆ. ಚಲನವಲನಗಳು ಸಹಜವಾಗಿ ಕಂಡುಬಂದಿದೆ. ಐಎಲ್‌ಎಸ್‌ಎ ತನ್ನ ಕಾರ್ಯವನ್ನು ಮುಂದುವರಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಮಾರ್ಗವನ್ನು ಹುಡುಕಲಾಗುತ್ತಿದೆ. ಅದಕ್ಕಾಗಿ ರೋವರ್ ಅನ್ನು ಸುರಕ್ಷಿತ ಮಾರ್ಗಕ್ಕೆ ತಿರುಗಿಸಲಾಗಿದೆ. ಅದರ ದೃಶ್ಯವು ಲ್ಯಾಂಡರ್ ನಲ್ಲಿನ ನ್ಯಾವಿಗೇಶನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಇಸ್ರೋ ತಿಳಿಸಿದೆ. ಬೆಂಗಳೂರಿನಲ್ಲಿರುವ ಎಲೆಕ್ಟ್ರೊ-ಆಪ್ಟಿಕ್ಸ್ ಸಿಸ್ಟಮ್ಸ್ ಐಎಲ್‌ಎಸ್‌ಎ ಅನ್ನು ಅಭಿವೃದ್ಧಿಪಡಿಸಿದೆ. ಹೆಚ್ಚಿನ ಸಂವೇದನೆಯ 6 ವೇಗವರ್ಧಕಗಳನ್ನು ಐಎಲ್‌ಎಸ್‌ಎ ಹೊಂದಿದೆ. ಇದನ್ನು ಸಿಲಿಕಾನ್ ಮೈಕ್ರೋಮ್ಯಾಚಿನಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
Related Articles
Advertisement
ಚಂದಮಾಮನ ಮೇಲೆ ಪುಟ್ಟ ಮಗು ಆಟ ಈ ದೃಶ್ಯವು(ವಿಕ್ರಮ್-ಪ್ರಜ್ಞಾನ್ ಚಿತ್ರ) ಪುಟ್ಟ ಮಗುವೊಂದು(ರೋವರ್) ಚಂದಮಾಮನ ಮೇಲೆ ಕುಣಿಯುತ್ತ ಆಟವಾಡುತ್ತಿದ್ದು, ಅಮ್ಮ(ಲ್ಯಾಂಡರ್) ಅದನ್ನು ಪ್ರೀತಿಯಿಂದ ನೋಡುವಂತಿದೆ ಎಂದು ಇಸ್ರೋ ಈ ದೃಶಕ್ಕೆ ಕ್ಯಾಪ್ಷನ್ ಕೊಟ್ಟಿದೆ.
ಇಸ್ರೋ ಅಧ್ಯಕ್ಷರಿಗೆ ಸ್ವಾಗತ ಇಂಡಿಗೋ ವಿಮಾನದ ಗಗನಸಖಿಯರು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಆತ್ಮೀಯ ಸ್ವಾಗತ ನೀಡಿದ್ದಾರೆ. ಈ ಕುರಿತು ವಿಡಿಯೊ ಅನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಗಗನಸಖಿ ಪೂಜಾ ಶಾ ಹಂಚಿಕೊಂಡಿದ್ದಾರೆ. ಸೋಮನಾಥ್ ಅವರು ವಿಮಾನ ಪ್ರವೇಶಿಸುತ್ತಿದ್ದಂತೆ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಗಗನಸಖಿಯರು, ಅವರನ್ನು ಆಸನದಲ್ಲಿ ಕೂರಿಸಿದ್ದಾರೆ. ನಂತರ, “ನಮ್ಮ ರಾಷ್ಟ್ರೀಯ ಹೀರೊಗೆ ಭವ್ಯ ಸ್ವಾಗತ. ಅವರನ್ನು ಕರತಾಡನದ ಮೂಲಕ ಎಲ್ಲರೂಸ್ವಾಗತಿಸೋಣ. ಇಂದು ನಮ್ಮೊಂದಿಗೆ ನೀವು ಪ್ರಯಾಣಿಸುತ್ತಿರುವುದೇ ಹೆಮ್ಮೆಯ ಸಂಗತಿ. ಭಾರತವನ್ನು ಹೆಮ್ಮೆಯ ರಾಷ್ಟ್ರವನ್ನಾಗಿಸಿದ್ದಕ್ಕೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು’ ಎಂದು ಗಗನಸಖಿ ಹೇಳಿದ್ದಾರೆ.