Advertisement

Moon: ಚಂದ್ರನಲ್ಲಿಗೆ ಜಪಾನ್‌ ಲ್ಯಾಂಡರ್‌ ಇಳಿಕೆಗೆ ಚಂದ್ರಯಾನ-2 ಆರ್ಬಿಟರ್‌ ನೆರವು

09:41 PM Jan 27, 2024 | Team Udayavani |

ಟೋಕಿಯೋ/ನವದೆಹಲಿ: ಇತ್ತೀಚೆಗಷ್ಟೇ ಚಂದ್ರನ ಮೇಲ್ಮೆ„ಯನ್ನು ಸ್ಪರ್ಶಿಸಿದ ಜಪಾನ್‌ನ “ಸ್ಲಿಮ್‌'(ಸ್ಮಾರ್ಟ್‌ ಲ್ಯಾಂಡರ್‌ ಫಾರ್‌ ಇನ್‌ವೆಸ್ಟಿಗೇಟಿಂಗ್‌ ಮೂನ್‌) ಬಾಹ್ಯಾಕಾಶ ನೌಕೆಗೆ ಶಶಾಂಕನ ನೆಲದಲ್ಲಿ ಇಳಿಯಲು ಸಹಾಯ ಮಾಡಿದ್ದು ಯಾರು ಗೊತ್ತೇ? ಭಾರತದ ಚಂದ್ರಯಾನ-2 ಆರ್ಬಿಟರ್‌! ಹೌದು, ಚಂದ್ರಯಾನ-2ರ ಆರ್ಬಿಟರ್‌ನಲ್ಲಿ ಬಳಸಿರುವ ಸುಧಾರಿತ ತಂತ್ರಜ್ಞಾನಗಳು ಸ್ಲಿಮ್‌ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಯೋಜನೆಗಳಿಗೆ “ಆಪ್ತಮಿತ್ರ’ನಾಗಿ ಕಾರ್ಯನಿರ್ವಹಿಸುತ್ತಿವೆ.

Advertisement

ಇತ್ತೀಚೆಗೆ ಜಪಾನ್‌ನ ಸ್ಲಿಮ್‌ ನೌಕೆಯು ಚಂದ್ರನ ಸಮೀಪ ಬಂದು, ಉದ್ದೇಶಿತ ಪ್ರದೇಶದ 100 ಮೀಟರ್‌ ವ್ಯಾಪ್ತಿಯೊಳಗೆ ನಿಖರವಾಗಿ ಇಳಿಯಲು, ಚಂದ್ರಯಾನ-2ರ ಆರ್ಬಿಟರ್‌ ಸೆರೆಹಿಡಿದ ಚಿತ್ರಗಳ ಸಹಾಯ ಪಡೆಯಿತು. ಭಾರತದ ಆರ್ಬಿಟರ್‌ ನೀಡಿದ ಮಾಹಿತಿಯ ಆಧಾರದಲ್ಲೇ ಸ್ಲಿಮ್‌ ಚಂದ್ರನ ಮೇಲ್ಮೆ„ನಲ್ಲಿ ಯಶಸ್ವಿಯಾಗಿ ಲ್ಯಾಂಡ್‌ ಆಯಿತು. ನಂತರದಲ್ಲಿ, ಸ್ಲಿಮ್‌ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಿಲ್ಲವಾದರೂ, ಅದರ ಯಶಸ್ವಿ ಲ್ಯಾಂಡಿಂಗ್‌ ಸಾಧ್ಯವಾಗಿದ್ದು ಮಾತ್ರ ಚಂದ್ರಯಾನ-2ರ ಆರ್ಬಿಟರ್‌ನಿಂದಲೇ.

ಇಸ್ರೋದ ಚಂದ್ರಯಾನ-2 ಯೋಜನೆ ಯಶಸ್ಸು ಕಾಣದಿದ್ದರೂ, ಅದರ ಆರ್ಬಿಟರ್‌ ಮಾತ್ರ ಈಗಲೂ ಚಂದಿರನ ಸಮೀಪದಲ್ಲೇ ಸುತ್ತುತ್ತಾ, ಅಲ್ಲಿನ ಮೇಲ್ಮೆ„ ಸ್ವರೂಪ, ಖನಿಜಗಳ ಮಾಹಿತಿ, ಮಂಜುಗಡ್ಡೆಯ ಶೋಧ ಮುಂತಾದ ಅಧ್ಯಯನದಲ್ಲಿ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next