ಬೆಂಗಳೂರು: “ಚಂದ್ರಯಾನ-2′ ಯೋಜನೆಯ ಅಡಿಯಲ್ಲಿ 2019ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಆರ್ಬಿಟರ್, ಚಂದ್ರನನ್ನು ಈವರೆಗೆ9,000ಕ್ಕೂ ಹೆಚ್ಚು ಬಾರಿಸುತ್ತಿ ಬಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಕೆ. ಶಿವನ್ ಹೇಳಿದ್ದಾರೆ.
“ಚಂದ್ರಯಾನ-2′ ಯೋಜನೆ ಅನುಷ್ಠಾನಗೊಂಡು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೇಂದ್ರಕಚೇರಿಯಲ್ಲಿ ಇಸ್ರೋ ವತಿಯಿಂದ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, “ಆರ್ಬಿಟರ್‌ನಲ್ಲಿರುವ ಎಂಟು ಪರಿಕರಗಳು ಚಂದ್ರನ ಮೇಲ್ಮೈ ನಿಂದ ಸುಮಾರು
100 ಕಿ.ಮೀ. ದೂರದಲ್ಲಿ ಚಂದ್ರನ ಮೇಲ್ಮೈ ಯನ್ನು ಸತತವಾಗಿ ಅವಗಾಹನೆ ಮಾಡುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಸಚಿವ ಮಾಧುಸ್ವಾಮಿ
ಇದೇ ವೇಳೆ, ಆರ್ಬಿಟರ್ ರವಾನಿಸಿರುವ ಕೆಲವು ದತ್ತಾಂಶಗಳನ್ನು ಅವರು ಬಿಡುಗಡೆ ಮಾಡಿದರು. “ಈ ದತ್ತಾಂಶಗಳನ್ನು ಗಮನಿಸಿದರೆ ನಮಗೆ ಮುಂದೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಸ್ಫೂರ್ತಿ ಸಿಕ್ಕಿದೆ” ಎಂದು ಅವರು ತಿಳಿಸಿದರು.