Advertisement

ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ

08:24 PM Nov 11, 2021 | Team Udayavani |

ನವದೆಹಲಿ: ಖಗೋಳಪ್ರೇಮಿಗಳಿಗೆ ಮುಂದಿನ ವಾರ ಹಬ್ಬ. ನವೆಂಬರ್‌ 18ರ ರಾತ್ರಿ ಈ ಶತಮಾನದ ದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ ನಡೆಯಲಿದ್ದು, ಅಮೆರಿಕದ ಎಲ್ಲ 50 ಪ್ರಾಂತ್ಯಗಳಲ್ಲೂ ಈ ಅದ್ಭುತ ವಿದ್ಯಮಾನ ಗೋಚರಿಸಲಿದೆ.

Advertisement

ಭೂಮಿಯ ನೆರಳು ಪೂರ್ಣಚಂದಿರನ ಶೇ.97ರಷ್ಟು ಭಾಗವನ್ನು ಆವರಿಸಿದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಬರೋಬ್ಬರಿ 3 ಗಂಟೆ 28 ನಿಮಿಷ, 23 ಸೆಕೆಂಡುಗಳ ಕಾಲ ಗ್ರಹಣ ಗೋಚರಿಸಲಿದೆ. ಅಮೆರಿಕದ ಕಾಲಮಾನದಂತೆ ಗ್ರಹಣವು ನ.18ರ ತಡರಾತ್ರಿ 2.19ಕ್ಕೆ ಆರಂಭವಾಗಿ ನ.19ರ ಬೆಳಗಿನ ಜಾವ 4 ಗಂಟೆಗೆ ಗರಿಷ್ಠ ಮಟ್ಟಕ್ಕೆ ತಲುಪಿ, 5.47ರ ವೇಳೆಗೆ ಮುಗಿಯಲಿದೆ ಎಂದು ನಾಸಾ ಹೇಳಿದೆ.

ಇದು ಈ ಶತಮಾನದ ಅತಿ ದೀರ್ಘಾವಧಿಯ ಗ್ರಹಣವಾಗಿದ್ದು, 2018ರಲ್ಲಿ 1 ಗಂಟೆ 43 ನಿಮಿಷಗಳ ಕಾಲ ಗೋಚರಿಸಿದ್ದ ಚಂದ್ರಗ್ರಹಣವೇ ಅತಿ ದೀರ್ಘಾವಧಿಯದ್ದು ಎಂದು ದಾಖಲಾಗಿತ್ತು. ಮುಂದಿನ ವಾರ ಸಂಭವಿಸುವ ಭಾಗಶಃ ಚಂದ್ರಗ್ರಹಣವು ಕಳೆದ 580 ವರ್ಷಗಳಲ್ಲೇ ಅತ್ಯಂತ ದೀರ್ಘ‌ಕಾಲದ ಗ್ರಹಣ ಎಂದು ಇಂಡಿಯಾನಾದ ಬಟ್ಲರ್‌ ವಿವಿಯ ಹಾಲ್‌ಕಾಂಬ್‌ ಆಬ್ಸರ್ವೇಟರಿ ಹೇಳಿದೆ.

ಇದನ್ನೂ ಓದಿ : ಅಪ್ಪನ ಹುಚ್ಚಾಟ : ಪುಟ್ಟ ಮಗಳಿಗೆ ಬೀಡಿ ಸೇದಿಸಿ ಮೂಗಿನಲ್ಲಿ ಹೊಗೆ ಬಿಡಲು ಹೇಳಿದ ಧೂರ್ತ

Advertisement

Udayavani is now on Telegram. Click here to join our channel and stay updated with the latest news.

Next