Advertisement

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

09:17 PM Jun 09, 2024 | Team Udayavani |

ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ದೇಶದ ಗಮನ ಸೆಳೆದಿದ್ದ ತೆಲುಗು ದೇಶಂ ಪಕ್ಷದ ಚಂದ್ರಶೇಖರ್ ಪೆಮ್ಮಸಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

ಟಿಡಿಪಿ ನಾಯಕ ಚಂದ್ರಶೇಖರ್ ಪೆಮ್ಮಸಾನಿ ಅವರು ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ಸಿಪಿಯ ಕಿಲಾರಿ ವೆಂಕಟ ರೋಸಯ್ಯ ಅವರನ್ನು 3.4 ಲಕ್ಷ ಮತಗಳಿಂದ ಸೋಲಿಸಿ ಸಂಸತ್ ಪ್ರವೇಶಿಸಿ ಸಚಿವನಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಆಪ್ತರಾಗಿರುವ ಪೆಮ್ಮಸಾನಿ ಅವರು 5,700 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದ್ದರು.

ಗುಂಟೂರಿನ ಬುರ್ರಿಪಾಲೆಮ್ ಗ್ರಾಮದಲ್ಲಿ ಜನಿಸಿದ ಚಂದ್ರಶೇಖರ್ ಪೆಮ್ಮಸಾನಿ ಅವರು ಒಸ್ಮಾನಿಯಾ ವಿವಿಯಲ್ಲಿ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿದರು. ಪೆನ್ಸಿಲ್ವೇನಿಯಾದ ಡ್ಯಾನ್‌ವಿಲ್ಲೆಯಲ್ಲಿರುವ ಗೀಸಿಂಗರ್ ವೈದ್ಯಕೀಯ ಕೇಂದ್ರದಲ್ಲಿ ರೆಸಿಡೆನ್ಸಿ, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ-ಸಿನೈ ಆಸ್ಪತ್ರೆಯಲ್ಲಿ ಸುಮಾರು ಐದು ವರ್ಷಗಳ ವೈದ್ಯರಾಗಿ ಕೆಲಸ ಮಾಡಿದ್ದರು.

ಆನ್‌ಲೈನ್ ಕಲಿಕಾ ವೇದಿಕೆಯಾದ UWorld ನ ಸ್ಥಾಪಕ ಮತ್ತು CEO ಆಗಿರುವ 48 ವರ್ಷದ ರಾಜಕಾರಣಿ, ಟಿಡಿಪಿ ಎನ್‌ಆರ್‌ಐ ಸೆಲ್‌ನಲ್ಲಿ ಸಕ್ರಿಯ ನಾಯಕರಾಗಿದ್ದು, ಯುಎಸ್‌ನಲ್ಲಿದ್ದ ವೇಳೆಯೂ ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

Advertisement

ಚಂದ್ರಶೇಖರ್ ಪೆಮ್ಮಸಾನಿ ಅವರು 2020 ರಲ್ಲಿ ಯುಎಸ್‌ನಲ್ಲಿ ಯುವ ಉದ್ಯಮಿಯಾಗಿ ಅರ್ನ್ಸ್ಟ್ ಮತ್ತು ಯಂಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಪೆಮ್ಮಸಾನಿ ಫೌಂಡೇಶನ್ ಅನ್ನು ಸ್ಥಾಪಿಸಿದ್ದು, ಆರೋಗ್ಯ ಶಿಬಿರಗಳನ್ನು ನಡೆಸುವುದನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಗುಂಟೂರು ಮತ್ತು ನರಸರಾವ್ಪೇಟೆಯ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ.

ಕಿಂಜರಾಪುಗೆ ಕ್ಯಾಬಿನೆಟ್ ದರ್ಜೆ

36 ರ ಹರೆಯದ ಟಿಡಿಪಿ ಸಂಸದ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರಿಗೆಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ನಾಯ್ಡು ಶ್ರೀಕಾಕುಳಂ ಲೋಕಸಭಾ ಕ್ಷೇತ್ರದಿಂದ 2014ರಲ್ಲಿ 2019 ರಲ್ಲಿ ಮತ್ತು ಈಗ ಮೂರನೇ ಬಾರಿಗೆ ಜಯ ಸಾಧಿಸಿದ್ದಾರೆ.

ರಾಮ್ ಮೋಹನ್ ಅವರ ಅಜ್ಜ ಕಿಂಜರಾಪು ಯರ್ರಾನ್ ನಾಯ್ಡು ಅವರು ಎಚ್.ಡಿ.ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆಂಧ್ರಪ್ರದೇಶದ ಶಾಸಕರಾಗಿದ್ದ ಅವರು ಹರಿಶ್ಚಂದ್ರಪುರದಿಂದ ನಾಲ್ಕು ಬಾರಿ ಗೆದ್ದಿದ್ದರು. ಇದಲ್ಲದೆ, ಅವರು ನಾಲ್ಕು ಬಾರಿ ಶ್ರೀಕಾಕುಳಂನಿಂದ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next