Advertisement

ಹಸೆಮಣೆ ಏರಿದ ಚಂದನ್‌ ಶೆಟ್ಟಿ –ನಿವೇದಿತಾ ಜೋಡಿ

11:07 AM Feb 27, 2020 | Lakshmi GovindaRaj |

“ಬಿಗ್‌ ಬಾಸ್‌’ ವಿಜೇತ ಕನ್ನಡ ರಾಪರ್‌ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಬುಧವಾರ ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. “ಬಿಗ್‌ ಬಾಸ್‌’ ರಿಯಾಲಿಟಿ ಶೋ ವೇಳೆ “ಬಿಗ್‌ ಬಾಸ್‌’ ಮನೆಯಲ್ಲಿ ಪರಿಚಿತರಾಗಿದ್ದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ, ಕಳೆದ ವರ್ಷ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಮೈಸೂರು ಜನರ ಮುಂದೆಯೇ ತಮ್ಮ ಪ್ರೇಮ ವಿಚಾರವನ್ನು ಬಹಿರಂಗಪಡಿಸಿದ್ದರು.

Advertisement

ಅದಾದ ಮೇಲೆ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ, ಬುಧವಾರ ಬೆಳಗ್ಗೆ ವೈವಾಹಿಕ ಬದುಕಿಗೆ ಅಡಿಯಿಟ್ಟಿದೆ. ಚಿತ್ರರಂಗದ ಅನೇಕರು ಮತ್ತು ಅಭಿಮಾನಿಗಳು ನೂತನ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭ ಕೋರಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next