ದುಬಾೖ: ಶನಿವಾರದ ದ್ವಿತೀಯ ಪಂದ್ಯದ ವಿಶೇಷವೆಂದರೆ, ಕಳೆದ ಸಲದ ಫೈನಲಿಸ್ಟ್ ತಂಡಗಳೆರಡರ ಮುಖಾಮುಖಿ. ಇಲ್ಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ರನ್ನರ್ ಅಪ್ ಇಂಗ್ಲೆಂಡ್ ಎದುರಾಗಲಿವೆ.
2016ರ ಕೋಲ್ಕತಾ ಫೈನಲ್‌ನಲ್ಲಿ 4 ವಿಕೆಟ್ ಸೋಲನುಭವಿಸಿದ ಆಂಗ್ಲರ ಪಡೆ ಇಲ್ಲಿ ಸೇಡಿಗೆ ಹವಣಿಸುತ್ತಿದೆ. ಅಂದಿನ ಫೈನಲ್‌ನಲ್ಲಿ ಕಾರ್ಲೋಸ್ ಬ್ರಾತ್‌ವೇಟ್ ಸತತ 4 ಸಿಕ್ಸರ್ ಸಿಡಿಸಿ ಇಂಗ್ಲೆಂಡಿನ ದ್ವಿತೀಯ ಕಪ್ ಕನಸನ್ನು ಛಿದ್ರಗೊಳಿಸಿದ್ದರು.
ಆದರೆ ವಿಂಡೀಸ್ ಅಂದಿನ ಚಾರ್ಮ್ ಹೊಂದಿಲ್ಲ ಎಂಬುದು ಅಭ್ಯಾಸ ಪಂದ್ಯಗಳಲ್ಲಿ ಸಾಬೀತಾಗಿದೆ. ಪಾಕಿಸ್ಥಾನ ವಿರುದ್ಧವಷ್ಟೇ ಅಲ್ಲ, ಅಫ್ಘಾನಿಸ್ಥಾನದ ವಿರುದ್ಧವೂ ಅದು ಸೋಲ ನುಭವಿಸಿತ್ತು. ಪಾಕ್ ಎದುರು ಕೇವಲ 7ಕ್ಕೆ 130 ರನ್ ಮಾಡಿದರೆ, ಅಫ್ಘಾನ್ ವಿರುದ್ಧ 189 ರನ್ ಚೇಸ್ ಮಾಡುವ ಹಾದಿ ಯಲ್ಲಿ 5ಕ್ಕೆ 133 ರನ್ ಮಾಡಿತ್ತು. ಗೇಲ್, ಲೆವಿಸ್, ಸಿಮನ್ಸ್, ಹೆಟ್‌ಮೈರ್, ಪೂರಣ್, ಪೊಲಾರ್ಡ್, ರಸೆಲ್ ಅವರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ತಂಡವೊಂದು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ ಅದು ಕೂಟದ ದೊಡ್ಡ ದುರಂತವೆನಿಸಲಿದೆ.
ಇದನ್ನೂ ಓದಿ:ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್
2010ರ ಟಿ20 ಚಾಂಪಿಯನ್ ಇಂಗ್ಲೆಂಡ್ ಹಾಲಿ ಏಕದಿನ ಚಾಂಪಿಯನ್ ಕೂಡ ಆಗಿದೆ. ಅಲ್ಲದೇ ನಂ.1 ಟಿ20 ತಂಡವೂ ಹೌದು. ಸ್ಟೋಕ್ಸ್, ಆರ್ಚರ್, ಸ್ಯಾಮ್ ಕರನ್ ಗೈರಿನ ಹೊರತಾಗಿಯೂ ಅದು ಸಮತೋಲಿತ ತಂಡವನ್ನೇ ಹೊಂದಿದೆ.