ರಾಮಚಂದ್ರ ಬೆಂಗಳೂರಿನ ಅತಿ ಹಳೆಯ ಬಡಾವಣೆಯಾದ ಚಾಮರಾಜಪೇಟೆಯಲ್ಲೇ ಹುಟ್ಟಿ ಬೆಳೆದು ನೆಲೆ ಕಂಡುಕೊಂಡವರು. ಅವರು, “ಈ ನಗರ ನಮಗೆ ಏನು ಕೊಟ್ಟಿದೆ ಎಂದಲ್ಲ, ನಾವು ಈ ನಗರಕ್ಕೆ ಏನು ಕೊಟ್ಟಿದ್ದೇವೆ ಎಂದು ಯೋಚನೆ ಮಾಡಬೇಕು’ ಅನ್ನುತ್ತಾರೆ. ಇದು ಅವರ ಬದುಕಿನ ನಿಯಮ.
ಕನ್ನಡದ ತಿಂಡಿ ಕೇಂದ್ರ ಎಂದೊಡನೆಯೇ ಬೆಂಗಳೂರಿನ ಚಾಮರಾಜಪೇಟೆಯ ಎರಡನೇ ಮುಖ್ಯರಸ್ತೆಯಲ್ಲಿನ ರಾಮಚಂದ್ರರ ಚಿತ್ರಾನ್ನ, ಮೊಸರನ್ನ ರೈಸ್‌ಬಾತಿನ ಹೊಟೇಲ್ ಅವರನ್ನು ಸುಮ್ಮನೆ ಮಾತಿಗೆಳೆಯಿರಿ.
“ಸಾರ್, ಇವತ್ತು ಮತ್ತಷ್ಟು ಆಹಾರ ಪೊಟ್ಟಣ, ನೀರನ್ನು ಅಂಗನವಾಡಿ ಕಾರ್ಯಕರ್ತೆಯರು ಚಳವಳಿ ಮಾಡುತ್ತಿ¨ªಾರಲ್ಲ, ಅಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ’ ಅಂತಾರೆ. ಇದೊಂದು ಉದಾಹರಣೆ ಅಷ್ಟೇ.
ರಾಮಚಂದ್ರ ಬೆಂಗಳೂರಿನ ಅತಿ ಹಳೆಯ ಬಡಾವಣೆಯಾದ ಚಾಮರಾಜಪೇಟೆಯÇÉೇ ಹುಟ್ಟಿ ಬೆಳೆದು ನೆಲೆ ಕಂಡುಕೊಂಡವರು. ಅವರು, “ಈ ನಗರ ನಮಗೆ ಏನು ಕೊಟ್ಟಿದೆ ಎಂದಲ್ಲ, ನಾವು ಈ ನಗರಕ್ಕೆ ಏನು ಕೊಟ್ಟಿದ್ದೇವೆ ಎಂದು ಯೋಚನೆ ಮಾಡಬೇಕು ‘ ಇದು ಅವರ ಬದುಕಿನ ನಿಯಮ. ಚಾರಿಟಿ ಶುಡ್ ಬಿಗಿನ್ ಅಟ್ ಹೋಮ್ … ಎಂಬಂತೆ ಮಾನವೀಯತೆ ಇವರ ಹೋಟೆಲ್‌ನಿಂದಲೇ ಆರಂಭ! ಅರ್ಹ ಹತ್ತಾರು ಬಡವರಿಗೆ ಇವರು ನಿತ್ಯ ಉಚಿತವಾಗಿ ಊಟ ಒದಗಿಸುತ್ತಾರೆ. ಉಚಿತವಾಗಿ ಕೊಡುತ್ತಿರುವುದು ಎಂದು ಎಷ್ಟೋ ಒಂದಷ್ಟು ಕೊಟ್ಟು ಕೈತೊಳೆದುಕೊಳ್ಳುವವರಲ್ಲ, “ಸಾರ್, ಯಾರೇ ಆಗಲಿ ಹೊಟ್ಟೆ ತುಂಬ ತಿನ್ನಬೇಕು’ ಎನ್ನುತ್ತಾ ಹೊಟ್ಟೆ ತುಂಬುವಷ್ಟು ಬಡಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಇಂತಹ ಸೇವೆ ದುಪ್ಪಟ್ಟಾಗುತ್ತದೆ. ಅನೇಕ ಕನ್ನಡಪರ ಕಾರ್ಯಕ್ರಮಗಳಿಗೆ ಇವರದ್ದು ಉಚಿತ ಉಪಾಹಾರ, ಮಜ್ಜಿಗೆ/ಪಾನೀಯ ಸೇವೆ ಇರುತ್ತದೆ. ಕನ್ನಡ ರಾಜ್ಯೋತ್ಸವದಂದು ಅವರ ಹೋಟಲಿಗೆ ಬರುವ ಎಲ್ಲರಿಗೂ ಕನ್ನಡ ಪತ್ರಿಕೆಗಳನ್ನು ಉಚಿತವಾಗಿ ನೀಡಿ ಓದಿ ಎನ್ನುತ್ತಾರೆ. ಕನ್ನಡ ರತ್ನಕೋಶದ ನೂರಾರು ಪ್ರತಿಗಳನ್ನು ತಂದಿಟ್ಟುಕೊಂಡು, ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವವರಿಗೆ “ಬಳಸಿಕೊಳ್ಳಿ’ ಅನ್ನೋದು ಇವರ ದೊಡ್ಡ ಗುಣ. ಪ್ರತಿ ವರ್ಷ ಒಂದಷ್ಟು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಇವರ ಮತ್ತೂಂದು ಗುಣ ಏನೆಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಅವರ ಹೊಟೇಲಿನಲ್ಲಿ ತರಕಾರಿ ಹೆಚ್ಚುತ್ತಿದ್ದ ಹುಡುಗನ ಬೌದ್ಧಿಕ ಸಾಮರ್ಥ್ಯ ಅರಿತು ಯುಕ್ತ ತರಬೇತಿ ಕೊಡಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರಿಸಿದರು. ಇಂದು ಆ ವ್ಯಕ್ತಿ ವಿಧಾನಸೌಧದಲ್ಲಿ ಎರಡನೆ ದರ್ಜೆ ಗುಮಾಸ್ತ ! ಇದು ಅವರಲ್ಲಿನ ಮಾನವೀಯತೆಯ ಇನ್ನೊಂದು ಮುಖ!
ಹಾಗೆ ನೋಡಿದರೆ, ಅವರದ್ದು ಶ್ರೀಮಂತ ಕುಟುಂಬದ ಹಿನ್ನೆಲೆಯಲ್ಲ. ಇವರ ಇಂದಿನ ಸಾಧನೆಯ ಹಿಂದೆ ಅವರ ಬೆವರು ಮಾತ್ರವಲ್ಲ ಜೀವನ ಹರಿಸುವಂತೆ ಮಾಡಿದ ಕಣ್ಣೀರೂ ಇದೆ! ಒಂದು ತುತ್ತಿಗಲ್ಲ ಸರ್, ಒಂದೊಂದು ಅಗುಳು ಅನ್ನಕ್ಕೂ ಕಷ್ಟಪಟ್ಟಿದ್ದೇನೆ ಅನ್ನೋ ನೆನಪು ಮಾಸಿಲ್ಲ.
ಹಾಗೆಯೇ, ತುಸು ತಡೆದು ಸಾರ್, ಇವತ್ತು ನನಗೆ ಕಾರ್‌ಬಂದಿದೆ. ಆದ್ರೆ ಅದ್ರಲ್ ಒಂದ್
ರೌಂಡ್ ಹಾಕ್ಸಣ ಅಂದ್ರೆ ನಮ್ ತಂದೆ ತಾಯಿ ಬದುಕಿಲ್ಲ ಎಂದು ಹನಿಗಣ್ಣಾಗುತ್ತಾರೆ.
ಕಳೆದ ವರ್ಷದಿಂದ ಅವರೊಂದು ಹೊಸ ಯೋಜನೆ ಆರಂಭಿಸಿದರು. ಅದೇ ಅಂಗಾಂಗ ದಾನ, ದೇಹದಾನದ ಪ್ರಚಾರ ಮತ್ತು ನೋಂದಣಿ! ಇದಕ್ಕಾಗಿ ದೊಡ್ಡ ದೊಡ್ಡ ಫ್ಲೆಕ್ಸ್ ಬರೆಸಿ ತಮ್ಮ ಹೊಟೇಲಿನ ಮುಂದೆ ಹಾಕಿಸಿ, ಕರಪತ್ರ ಮುದ್ರಿಸಿ ಊಟಕ್ಕೆ ಬಂದವರಿಗೆಲ್ಲ ಕೊಟ್ಟು ತಿಳಿಹೇಳಿದರು. ಅವರ ಶ್ರಮ ವ್ಯರ್ಥವಾಗಲ್ಲಿಲ್ಲ. ಅನೇಕರು ಅವರ ಕರೆಗೆ ಓಗೊಟ್ಟು ದೇಹದಾನ, ಅಂಗಾಂಗದಾನಕ್ಕೆ ಒಪ್ಪಿ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಬರೆದುಕೊಟ್ಟಿ¨ªಾರೆ. ಈ ಕ್ಷೇತ್ರದ ಗಣ್ಯರು ಇಲ್ಲಿಗೆ ಬಂದು ಹೋಗಿದ್ದಾರೆ. ಅವರಲ್ಲಿ ತಂದೆಯ ಆಶಯದಂತೆ ಮರಣಾನಂತರ ಅವರ ದೇಹವನ್ನು ವಿಚ್ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಡಾ ಮಹಾಂತೇಶ ರಾಮಣ್ಣನವರ ಸೇರಿದ್ದಾರೆ. ಇವೆಲ್ಲವೂ ಪ್ರಾಮಾಣಿಕ ಪ್ರಯತ್ನವನ್ನು ಹೂಡಿದ್ದೇ ಆದರೆ ಈ ಘೋರ ಕಲಿಯುಗದಲ್ಲಿಯೂ ಯಶಸ್ಸು ಖಂಡಿತ ಎಂಬುದಕ್ಕೆ ಇವರ ಸಾಧನೆಯೂ ಒಂದು ಸಾಕ್ಷಿ.
ಸಾರ್…ಬೆಂಗಳೂರು ನಮಗೆ ಸಾಕಷ್ಟು ಕೊಟ್ಟಿದೆ. ನಾವು ಬದುಕು ಕಟ್ಟಿಕೊಂಡಿರುವುದೇ ಇಲ್ಲಿ. ಅದು ಸಾಧ್ಯವಾದದ್ದೇ ಈ ಊರಿನ ಮಹಿಮೆಯಲ್ಲವೆ ಎಂದು ಕೇಳುತ್ತಾರೆ.
ಹೌದಲ್ಲಾ ಇದೇ ನಮ್ಮ ಉತ್ತರ. (ದೇಹದಾನ, ಅಂಗಾಂಗ ದಾನ ಮಾಡಲಿಚ್ಛೆ ಇರುವವರು ಇವರನ್ನು ಸಂಪರ್ಕಿಸಬಹುದು: ಸಂಖ್ಯೆ: 934 292 1229).
ಕಲ್ಗುಂಡಿ ನವೀನ್