Advertisement
ತಾಲೂಕಿನ ಮಲೆ ಮಹದೇಶ್ವರಬೆಟ್ಟ ಸಮೀಪದ ಹಳೆಯೂರು ಗ್ರಾಮದ ಕುಳ್ಳಮಾದಿ(50) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಈಕೆ ಗುರುವಾರ(ಆಗಸ್ಟ್ 5) ಸಂಜೆ ಮಲೆ ಮಹದೇಶ್ವರಬೆಟ್ಟದಿಂದ ವಡಕೆಹಳ್ಳ ಗ್ರಾಮದ ಸಂಬಂಧಿಕರ ಮನೆಯತ್ತ ಹೊರಡಲು ಕರಾರಸಾಸಂ ಬಸ್ಸು ಹತ್ತಿದ್ದರು. ಈ ವೇಳೆ ಕುಳ್ಳಮಾದಿಯವರಿಗೆ ವಾಂತಿ ಬಂದಿದ್ದು ಸ್ವಲ್ಪ ಬಸ್ಸು ನಿಲ್ಲಿಸುವಂತೆ ಚಾಲಕನನ್ನು ಕೇಳಿಕೊಂಡಿದ್ದಾಳೆ. ಈ ವೇಳೆ ಚಾಲಕ ಬಾಗಿಲ ಸಮೀಪ ನಿಂತು ಮಾಡುವಂತೆ ಸೂಚಿಸಿ ಬಸ್ಸನ್ನು ಚಲಾಯಿಸುತ್ತಿದ್ದನು. ಈ ವೇಳೆ ಬದ್ದು ಶನೇಶ್ವರ ದೇವಾಲಯದ ತಿರುವಿನ ಸಮೀಪ ಬರುತ್ತಿದ್ದಂತೆ ಕುಳ್ಳಮಾದಿ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದಿದ್ದಾಳೆ.ಪರಿಣಾಮ ಕುಳ್ಳಮಾದಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
Related Articles
Advertisement
ಆಯತಪ್ಪಿ ಬಸ್ ನಿಂದ ಬಿದ್ದು ಮೃತಪಟ್ಟ ಮಹಿಳೆಯ ಶವವನ್ನು ನಿನ್ನೆ(ಗುರುವಾರ, ಆಗಸ್ಟ್ 5) ತಡರಾತ್ರಯೇ ಮರಣೋತ್ತರ ಪರೀಕ್ಷೆ ನಡೆಸಿ ಮಹಿಳೆಯ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆದರೆ ಮೃತ ದೇಹವನ್ನು ಕೊಂಡೊಯ್ಯಲು 108 ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿದರೂ ಸೇವೆ ಲಭ್ಯವಾಗಿಲ್ಲ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಇದ್ದ ಆ್ಯಂಬುಲೆನ್ಸ್ ಬಳಸಿಕೊಳ್ಳಲು ಚಾಲಕನಿರಲಿಲ್ಲ. ಆದ್ದರಿಂದ ಮೃತ ದೇಹವನ್ನು ತಡರಾತ್ರಿಯಲ್ಲಿ 8 ಕಿ.ಮೀ ದೂರ ಜೋಕಾಲಿ ಕಟ್ಟಿ ಹೊತ್ತೊಯ್ಯಲಾಯಿತು. ಶವವನ್ನು ಜೋಕಾಲಿಯಲ್ಲಿ ಹೊತ್ತೊಯ್ಯುತ್ತಿದ್ದ ದೃಶ್ಯ ಸಮಾಜ ನಾಚುವಂತಿತ್ತು.
ಇದನ್ನು ಓದಿ : ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್