Advertisement

ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ, ತೆಂಗು

07:57 PM Jul 08, 2021 | Team Udayavani |

ಯಳಂದೂರು: ತಾಲೂಕಿನಾದ್ಯಂತ ಸುರಿದ ಗಾಳಿ,ಮಳೆಗೆ ಹಲವಾರು ಮನೆಗಳ ಗೋಡೆ ಕುಸಿದು,ಮೇಲ್ಛಾವಣಿ ಹಾರಿಹೋಗಿದ್ದು ಬಾಳೆ, ತೆಂಗು ಮತ್ತಿತರಬೆಳೆಗಳು ಹಾನಿಯಾಗಿವೆ.

Advertisement

ತಾಲೂಕಿನ ಉಪ್ಪಿನಮೋಳೆಯ ಬೆಂಡಗಾಳಶೆಟ್ಟಿ,ಸಿದ್ದಮ್ಮ ಹಾಗೂ ಮರಿಸ್ವಾಮಿಶೆಟ್ಟಿ ಅವರ ಮನೆಗಳುಕುಸಿದಿವೆ. ಕೆಲವು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ತಾಲೂಕಿನ ಗುಂಬಳ್ಳಿಯ ಚಂದ್ರೇಗೌಡರ2ಎಕರೆ ಬಾಳೆ ಗಿಡಗಳು ನೆಲಸಮವಾಗಿದೆ. ದೊಡ್ಡದೊಡ್ಡ ತೆಂಗಿನ ಮರಗಳು ಧರೆಗುರುಳಿವೆ.

ಬಸವಾಪುರದ ಮಲ್ಲಶೆಟ್ಟಿಅವರ ಕೋಳಿಫಾರಂನಲ್ಲಿ20ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು 1 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಬಿಳಿಗಿರಿ ರಂಗನಬೆಟ್ಟ,ಗೌಡಹಳ್ಳಿ, ಯರಗಂಬಳ್ಳಿ, ಗುಂಬಳ್ಳಿ, ಅಂಬಳೆ,ದುಗ್ಗಹಟ್ಟಿ, ಹೊನ್ನೂರು, ಕೆಸ್ತೂರು, ಯರಿಯೂರು,ಮದ್ದೂರು, ಅಗರ, ಮಾಂಬಳ್ಳಿ ಮತ್ತಿತರ ಕಡೆ ಭಾರೀಮಳೆಯಾಗಿದೆ.

ಕೆಲವು ಗ್ರಾಮಗಳ ತಗ್ಗು ಪ್ರದೇಶದಮನೆಗಳಿಗೆ ನೀರು ನುಗ್ಗಿದೆ. ಅವಘಡ ಸಂಭವಿಸಿದಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next