Advertisement

Mangaluru; ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಬೊಮ್ಮಾಯಿ

01:10 PM Sep 14, 2023 | Team Udayavani |

ಮಂಗಳೂರು: ಚೈತ್ರಾ ಕುಂದಾಪುರ ಕೇಸ್ ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆಯಾಗಬೇಕು. ಯಾರೇ ಇದ್ದರೂ ಉಗ್ರ ಶಿಕ್ಷೆಯಾಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಕೆಟ್ ಕೊಡಿಸುತ್ತೇವೆಂದು ಹಣ ಪಡೆದಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟ. ಹೋರಾಟ ಹಲವರು ಮಾಡುತ್ತಾರೆ, ಹಾಗಂತ ಅದಕ್ಕೆಲ್ಲವಕ್ಕೂ ಪಕ್ಷಕ್ಕೆ ಸಂಬಂಧವಿಲ್ಲ. ತನಿಖೆ ಆಗಿ ಸತ್ಯ ಹೊರ ಬರಲಿ ಎಂದರು.

ಇದನ್ನೂ ಓದಿ:Anantnag; ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಸುತ್ತುವರಿದ ಭದ್ರತಾ ಪಡೆಗಳು

ಜೆಡಿಎಸ್-ಬಿಜೆಪಿ ಮೈತ್ರಿ ಕುರಿತಾಗಿ ಮಾತನಾಡಿದ ಅವರು, ಇದುವರೆಗೂ ಟಿಕೆಟ್ ಹಂಚಿಕೆ, ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ. ಸದ್ಯ ಪ್ರಾಥಮಿಕ ಹಂತದಲ್ಲಿದೆ. ಬರುವ ದಿನಗಳಲ್ಲಿ ವರಿಷ್ಠರು ಚರ್ಚಿಸಲಿದ್ದಾರೆ. ಮೈತ್ರಿ ಸಮಯದಲ್ಲಿ ನಮ್ಮನ್ನು ಮಾತನಾಡಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷ ಒಂದಾಗಿ ಹೆಚ್ಚು ಸೀಟು ಪಡೆಯುವುದು ಉದ್ದೇಶ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next