“ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ‘- ಈ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಈಗ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಈ ಖುಷಿಯನ್ನು ಹಂಚಿಕೊಳ್ಳಲೆಂದು ಇತ್ತೀಚೆಗೆ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.
ರಿಸ್ಕ್ ತೆಗೆದುಕೊಂಡು ರಿಲೀಸ್ ಮಾಡಿದ್ದಕ್ಕೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಪ್ರೇಕ್ಷಕರು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ರಿಲೀಸ್ ಹಿಂದಿನ ವಾರ ಗಾಂಧಿನಗರಕ್ಕೆ ಹೋದಾಗ ಜನ ಕಡಿಮೆ ಇತ್ತು. ಶ್ರಮದ ಪ್ರತಿಫಲವಾಗಿ ರಿಲೀಸ್ ದಿನ ಕಿಕ್ಕಿರಿದು ತುಂಬಿತ್ತು. ಕಥೆಯೊಂದಿಗೆ ಜನರಿಗೆ
ಮೆಸೇಜ್ ತಲುಪಿಸಿದ್ದೇನೆ’ ಎನ್ನುವುದು ನಿರ್ದೇಶಕ ಕೃಷ್ಣ ಮಾತು.
ನಿರ್ಮಾಪಕ ಹಾಗೂ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ ಸೆವೆನ್ ರಾಜ್ ಮಾತನಾಡಿ, “ನನ್ನ ಕನಸಿನ ಚಿತ್ರವಿದು. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಿಂತ ವೀರೇಶ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್ ಬರ್ತಿದೆ. ಹಾಗಾಗಿ ನಾಳೆಯಿಂದ ನಮ್ಮ ಸಿನಿಮಾ ನೋಡಲು ಬರುವ ಕನ್ನಡ ಅಭಿಮಾನಿಗಳಿಗೆ ವೀರೇಶ್ ಚಿತ್ರಮಂದಿರದಲ್ಲಿ ಗೋಲ್ಡ್ ಕಾಯಿನ್ ಕೊಡಲಿದ್ದೇವೆ. ಪ್ರತಿ ಷೋ ನೋಡಲು ಬರುವ ಪ್ರೇಕ್ಷಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಬ್ಬ ವಿಜೇತರಿಗೆ ಬಂಗಾರದ ನಾಣ್ಯದ ಬಹುಮಾನವಿರುತ್ತದೆ’ ಎಂದರು.
ಇದನ್ನೂ ಓದಿ:ಭೀಕರ ಕಾರು ಅಪಘಾತ: ಪ್ರಸಿದ್ಧ ಮರಾಠಿ ಚಿತ್ರನಟಿ ಈಶ್ವರಿ ದೇಶಪಾಂಡೆ ಸಾವು
“ನಮ್ಮದು ಕಲಾವಿದರ ಹಿನ್ನೆಲೆಯ ಕುಟುಂಬ. ಹುಟ್ಟಿ-ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ನಂತರ ಓದಿಗಾಗಿ ಚೆನ್ನೈನತ್ತ ಮುಖ ಮಾಡಬೇಕಾಯ್ತು. ಚೆನ್ನೈ ಡಿಪ್ಲೊಮೋ ಇನ್ ಪೆಂಟಿಂಗ್, ಚೆನ್ನೈನ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್ ಕ್ರಾಫ್ ನಲ್ಲಿ ಡಿಪ್ಲೊಮೋ ಇನ್ ಪೈಂಟಿಂಗ್‌ನಲ್ಲಿ ಪದವಿ ಪಡೆದ ನಂತರ ಸಿನಿಮಾದ ಕಡೆಗೆ ಹೆಚ್ಚಿ ಆಸಕ್ತಿ ಬೆಳೆಯಿತು. ನನಗೆ ಸಿನಿಮಾರಂಗದಲ್ಲಿ ಒಳ್ಳೆಯ ವಿಲನ್ ಆಗಿ ಗುರುತಿಸಿಕೊಳ್ಳಬೇಕು ಎಂಬ ಕನಸಿದೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಈಗಾಗಲೇ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಲು ಆಫರ್ ಬರುತ್ತಿದೆ. ಮುಂದಿನ ದಿನಗಳಲ್ಲಿ ನನ್ನದೇ “ರೆಡ್ ಆ್ಯಂಡ್ ವೈಟ್’ ಬ್ಯಾನರ್‌ನಲ್ಲಿ ಹೊಸಥರದ ಸಿನಿಮಾಗಳನ್ನು ನಿರ್ಮಿಸುವುದರ ಜೊತೆಗೆ, ಡಿಫರೆಂಟ್ ಗೆಟಪ್‌ನಲ್ಲಿ ವಿಲನ್ ಆಗಿ ಆಡಿಯನ್ಸ್ ಮುಂದೆ ಬರುತ್ತೇನೆ’ ಎನ್ನುವುದು ಸೆವೆನ್ ರಾಜ್ ಮಾತು. ಚಿತ್ರದಲ್ಲಿ ನಟಿಸಿದ ಲೋಕೇಂದ್ರ ಸೂರ್ಯ, ನಾಯಕಿ ಗೌರಿ ತಮ್ಮ ಅನುಭವ ಹಂಚಿಕೊಂಡರು.